ಅತಿ ಹೆಚ್ಚು ವಾರ್ಷಿಕ ಕೌಟುಂಬಿಕ ಆದಾಯದಲ್ಲಿ ಬೆಂಗಳೂರು ನಂಬರ್ 1: ಖರ್ಚಿನ ಕಥೆಯೇನು?

Published : Jul 05, 2026, 09:08 AM IST

ವರದಿಯೊಂದರ ಪ್ರಕಾರ, ಅತಿ ಹೆಚ್ಚು ವಾರ್ಷಿಕ ಕೌಟುಂಬಿಕ ಆದಾಯ ಹೊಂದಿರುವ ನಗರಗಳಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ದೇಶದ ಒಟ್ಟು ವೆಚ್ಚದಲ್ಲಿ ಪ್ರಮುಖ ಆರು ನಗರಗಳು ಶೇ.46ರಷ್ಟು ಪಾಲು ಹೊಂದಿವೆ.

PREV
14
ಬೆಂಗಳೂರು ನಂಬರ್ 1

ಅತಿ ಹೆಚ್ಚು ವಾರ್ಷಿಕ ಕೌಟುಂಬಿಕ ಆದಾಯ ಹೊಂದಿರುವ ದೇಶದ ನಗರಗಳ ಪೈಕಿ ಬೆಂಗಳೂರು, ಚಂಡೀಗಢ ಮತ್ತು ದೆಹಲಿ ಮೊದಲ ಮೂರು ಸ್ಥಾನ ಪಡೆದುಕೊಂಡಿವೆ. ಇನ್ನು ಕುಟುಂಬಗಳು ಅತಿ ಹೆಚ್ಚು ವೆಚ್ಚ ಮಾಡುವ ನಗರಗಳ ಪೈಕಿ ಚಂಡೀಗಢ, ತಿರುವನಂತಪುರ, ವಡೋದರಾ ಮೊದಲ ಮೂರು ಸ್ಥಾನದಲ್ಲಿದ್ದರೆ ಬೆಂಗಳೂರು 6ನೇ ಸ್ಥಾನದಲ್ಲಿದೆ ಎಂದು ವರದಿಯೊಂದು ಹೇಳಿದೆ.

24
ಸರಾಸರಿ ವಾರ್ಷಿಕ ಕೌಟುಂಬಿಕ ಆದಾಯ

ಪ್ರೈಸ್‌ ಮತ್ತು ಟಾಟಾ ಸನ್ಸ್‌ ವರದಿ ಅನ್ವಯ, 2025-26ರ ಅವಧಿಯಲ್ಲಿ ಬೆಂಗಳೂರಿನ ಜನರ ಸರಾಸರಿ ವಾರ್ಷಿಕ ಕೌಟುಂಬಿಕ ಆದಾಯ ₹28.33 ಲಕ್ಷನಷ್ಟಿತ್ತು. ಇದು ಚಂಡೀಗಢದಲ್ಲಿ ₹28.32 ಲಕ್ಷ, ದೆಹಲಿಯಲ್ಲಿ ₹25.9 ಲಕ್ಷ ಇತ್ತು.

34
ಖರ್ಚಿನಲ್ಲಿ ಚಂಡೀಗಢ ನಂ.1

ಇನ್ನು ಕೌಟುಂಬಿಕ ವೆಚ್ಚದಲ್ಲಿ ಸರಾಸರಿ 19.3 ಲಕ್ಷ ರು. ವೆಚ್ಚ ಮಾಡುವ ಚಂಡೀಗಢ, 17.6 ಲಕ್ಷ ರು. ವೆಚ್ಚ ಮಾಡುವ ತಿರುವನಂತಪುರಂ ಮತ್ತು 17.1 ಲಕ್ಷ ರು. ವೆಚ್ಚ ಮಾಡುವ ವಡೋದರಾ ಕ್ರಮವಾಗಿ ಮೊದಲ 3 ಸ್ಥಾನದಲ್ಲಿವೆ. ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿರುವ ಬೆಂಗಳೂರಿನ ಕುಟುಂಬಗಳ ಸರಾಸರಿ ವೆಚ್ಚ 15.1 ಲಕ್ಷನಷ್ಟಿದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾದ್ರೂ ಭಾರತದಲ್ಲಿಲ್ಲ ಎಂದಿದ್ಯಾಕೆ ಪುರಿ?

44
ಪ್ರಮುಖ ಆರು ನಗರಗಳಿಂದಲೇ ಶೇ.46ರಷ್ಟು ವೆಚ್ಚ

ಇನ್ನು ದೇಶದ ಒಟ್ಟು ವೆಚ್ಚದ ಪೈಕಿ ಶೇ.46ರಷ್ಟನ್ನು ಪ್ರಮುಖ 6 ನಗರಗಳಾದ ದೆಹಲಿ, ಮುಂಬೈ, ಬೆಂಗಳೂರು, ಕೋಲ್ಕತಾ, ಚೆನ್ನೈ ಮತ್ತು ಹೈದರಾಬಾದ್‌ ಮಾಡಲಾಗುತ್ತದೆ. ವಾರ್ಷಿಕ 6 ಲಕ್ಷ ರು.ನಿಂದ 36 ಲಕ್ಷ ರು.ಗಳವರೆಗೆ ಗಳಿಸುವ ಮಧ್ಯಮ ಕುಟುಂಬಗಳ ಪಾಲು ಕಳೆದ ದಶಕದಲ್ಲಿ ಶೇ.29ರಿಂದ ಶೇ.53ಕ್ಕೆ ದ್ವಿಗುಣಗೊಂಡಿದೆ. ದೇಶದ 100 ಪ್ರಮುಖ ನಗರಗಳ ಜನಸಂಖ್ಯೆ ಒಟ್ಟು ಜನಸಂಖ್ಯೆಯಲ್ಲಿ ಕೇವಲ ಶೇ.5ಕ್ಕಿಂತ ಕಡಿಮೆ ಇದ್ದರೂ, ಆದಾಯದಲ್ಲಿ ಅವುಗಳ ಪಾಲು ಶೇ.33ಕ್ಕಿಂತ ಹೆಚ್ಚಿದೆ ಮತ್ತು ಬಳಕೆಯ ಪಾಲು ಶೇ.31ಕ್ಕಿಂತ ಹೆಚ್ಚಿದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: 40ನೇ ವಯಸ್ಸಲ್ಲಿ ಕೆಲಸ ಕಳ್ಕೊಂಡ್ರೆ ಮುಂದೇನು? ಇವತ್ತೆ ಈ 5 ತಯಾರಿ ನಡೆಸಿ

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories