30000000 ಸಂಬಳಕ್ಕೆ ಗುಡ್‌ಬೈ... IIT ಗೋಲ್ಡ್ ಮೆಡಲಿಸ್ಟ್ ಈಗ ಕಿರಾಣಿ ಅಂಗಡಿ ಮಾಲೀಕ

Published : Jul 05, 2026, 12:05 PM IST

Success story kanpur man turned down crore job ಕೋಟಿ ಕೋಟಿ ಸಂಬಳದ ವಿದೇಶಿ ಉದ್ಯೋಗವನ್ನು ತಿರಸ್ಕರಿಸಿದ ಐಐಟಿ ಗೋಲ್ಡ್ ಮೆಡಲಿಸ್ಟ್, ಕುಟುಂಬಕ್ಕಾಗಿ ಕಿರಾಣಿ ಅಂಗಡಿ ನಡೆಸುವ ನಿರ್ಧಾರದಿಂದ ದೇಶದಾದ್ಯಂತ ಮೆಚ್ಚುಗೆ ಗಳಿಸಿದ್ದಾರೆ.

PREV
14
ಕೋಟಿ ಕೋಟಿ ರೂಪಾಯಿ ಸಂಬಳದ ಉದ್ಯೋಗ

ಇಂದಿನ ಕಾಲದಲ್ಲಿ ಕೋಟಿ ಕೋಟಿ ರೂಪಾಯಿ ಸಂಬಳದ ಉದ್ಯೋಗ ಸಿಗುವುದು ಅನೇಕರ ಕನಸು. ಆದರೆ ಉತ್ತರ ಪ್ರದೇಶದ ಕಾನ್ಪುರ ಮೂಲದ ಐಐಟಿ ಬಾಂಬೆ ಗೋಲ್ಡ್ ಮೆಡಲಿಸ್ಟ್ ವಿವೇಕ್ ಶರ್ಮಾ ಅವರು ಸುಮಾರು ₹2.9 ಕೋಟಿ (ಸುಮಾರು ₹3 ಕೋಟಿ) ವಾರ್ಷಿಕ ಸಂಬಳದ ಅಮೆರಿಕದ ಉದ್ಯೋಗವನ್ನು ತಿರಸ್ಕರಿಸಿ, ತಮ್ಮ ಮನೆಯ ಕೆಳಗಿನ ಸಣ್ಣ ಕಿರಾಣಿ ಅಂಗಡಿಯನ್ನು ನಡೆಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರ ಈ ನಿರ್ಧಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಯಶಸ್ಸಿನ ನಿಜವಾದ ಅರ್ಥವೇನು ಎಂಬ ಚರ್ಚೆಗೆ ಕಾರಣವಾಗಿದೆ.

ಮಧ್ಯಮ ವರ್ಗದ ಕುಟುಂಬದಿಂದ ಐಐಟಿವರೆಗೆ

ವಿವೇಕ್ ಶರ್ಮಾ ಕಾನ್ಪುರದ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದವರು. ತಂದೆ ರೈಲ್ವೆ ಕ್ಲರ್ಕ್ ಆಗಿದ್ದರೆ, ತಾಯಿ ಟ್ಯೂಷನ್‌ ಹೇಳಿ ಮಗನ ವಿದ್ಯಾಭ್ಯಾಸಕ್ಕೆ ಬೆನ್ನೆಲುಬಾಗಿ ನಿಂತಿದ್ದರು. ಪೋಷಕರ ತ್ಯಾಗದಿಂದಲೇ ಅವರು ಕೋಟಾದಲ್ಲಿ ಓದಿ ಬಳಿಕ ಐಐಟಿ ಬಾಂಬೆಯ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಗೋಲ್ಡ್ ಮೆಡಲ್ ಗಳಿಸಿದರು.

24
ಅಮೆರಿಕದಿಂದ ಕೋಟಿ ಸಂಬಳದ ಆಫರ್

ಐಐಟಿ ಶಿಕ್ಷಣದ ಬಳಿಕ ಸ್ಯಾನ್ ಫ್ರಾನ್ಸಿಸ್ಕೋದ ಸ್ಟಾರ್ಟ್‌ಅಪ್ ಕಂಪನಿಯೊಂದು ಅವರಿಗೆ ವರ್ಷಕ್ಕೆ ಸುಮಾರು 2.9 ಕೋಟಿ ರೂಪಾಯಿ ಸಂಬಳ, ಜೊತೆಗೆ ವೀಸಾ ಹಾಗೂ ಸ್ಥಳಾಂತರ ಸೌಲಭ್ಯಗಳಿರುವ ಆಕರ್ಷಕ ಉದ್ಯೋಗದ ಆಫರ್ ನೀಡಿತ್ತು. ಎಲ್ಲ ಸಿದ್ಧತೆಗಳೂ ನಡೆದಿದ್ದವು.

ಒಂದು ಘಟನೆ ಬದಲಿಸಿತು ಜೀವನ

ಅಮೆರಿಕಕ್ಕೆ ತೆರಳುವ ಮುನ್ನವೇ ವಿವೇಕ್ ಅವರ ತಂದೆಗೆ ಹೃದಯಾಘಾತವಾಗಿದ್ದು, ತಾಯಿಗೆ ಕ್ಯಾನ್ಸರ್ ಪತ್ತೆಯಾಯಿತು. ಈ ಪರಿಸ್ಥಿತಿಯಲ್ಲಿ ವಿದೇಶಕ್ಕೆ ಹೋಗುವುದಕ್ಕಿಂತ ಕುಟುಂಬದ ಜೊತೆ ಇರುವುದು ಮುಖ್ಯ ಎಂದು ನಿರ್ಧರಿಸಿದ ಅವರು, ಕೋಟಿ ಸಂಬಳದ ಉದ್ಯೋಗವನ್ನು ತಿರಸ್ಕರಿಸಿ ಕಾನ್ಪುರದಲ್ಲೇ ಉಳಿದರು.

34
ಈಗ ಕಿರಾಣಿ ಅಂಗಡಿ... ಜೊತೆಗೆ ಸಮಾಜ ಸೇವೆ

ಪ್ರಸ್ತುತ ವಿವೇಕ್ ತಮ್ಮ ಮನೆಯ ಕೆಳಗಿರುವ ಸಣ್ಣ ಕಿರಾಣಿ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉಚಿತವಾಗಿ ಕೋಡಿಂಗ್ ಕಲಿಸುತ್ತಿದ್ದಾರೆ. ಹಣಕ್ಕಿಂತ ಕುಟುಂಬ ಮತ್ತು ಸಮಾಜ ಸೇವೆಯೇ ದೊಡ್ಡದು ಎಂಬ ಸಂದೇಶವನ್ನು ಅವರು ತಮ್ಮ ಜೀವನದ ಮೂಲಕ ನೀಡುತ್ತಿದ್ದಾರೆ.

44
ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಮಹಾಪೂರ

ವಿವೇಕ್ ಶರ್ಮಾ ಅವರ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಸಾವಿರಾರು ಮಂದಿ ಅವರ ನಿರ್ಧಾರವನ್ನು ಶ್ಲಾಘಿಸಿದ್ದಾರೆ. "ಯಶಸ್ಸು ಎಂದರೆ ದೊಡ್ಡ ಸಂಬಳವಲ್ಲ, ಅಗತ್ಯವಿದ್ದಾಗ ಕುಟುಂಬದ ಜೊತೆ ನಿಲ್ಲುವುದು" ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories