ಬಜೆಟ್ ಏನೇ ಇರಲಿ, ಭಾರತದ ಇಲ್ಲಿ ಮಾತ್ರ ಒಂದು ರೂಪಾಯಿ ತೆರಿಗೆ ಇಲ್ಲ
ನೀವು ತೆರಿಗೆಯಿಂದ ಮುಕ್ತಿ ಹೊಂದಲು ಬಯಸುತ್ತಿದ್ದೀರಾ? ಭಾರತದ ಇಲ್ಲಿ ಯಾವುದೇ ತೆರಿಗೆ ಇಲ್ಲ, ಜನರು ಒಂದು ರೂಪಾಯಿ ತೆರಿಗೆ ಪಾವತಿಸವುದಿಲ್ಲ. ಈ ರಹಸ್ಯ ರಾಜ್ಯ ಮತ್ತು ಅದರ ಹಿಂದಿನ ಕಥೆ ತಿಳಿಯಲು ಓದಿ.
ನೀವು ತೆರಿಗೆಯಿಂದ ಮುಕ್ತಿ ಹೊಂದಲು ಬಯಸುತ್ತಿದ್ದೀರಾ? ಭಾರತದ ಇಲ್ಲಿ ಯಾವುದೇ ತೆರಿಗೆ ಇಲ್ಲ, ಜನರು ಒಂದು ರೂಪಾಯಿ ತೆರಿಗೆ ಪಾವತಿಸವುದಿಲ್ಲ. ಈ ರಹಸ್ಯ ರಾಜ್ಯ ಮತ್ತು ಅದರ ಹಿಂದಿನ ಕಥೆ ತಿಳಿಯಲು ಓದಿ.
ದೇಶದಲ್ಲಿ ಬಜೆಟ್ ಬಂದಾಗೆಲ್ಲ ವ್ಯಾಪಾರಿಗಳಿಂದ ಹಿಡಿದು ನೌಕರರವರೆಗೆ ಎಲ್ಲರೂ ತೆರಿಗೆ ಬಗ್ಗೆ ಚಿಂತೆ ಮಾಡ್ತಾರೆ. ಪ್ರಮುಖವಾಗಿ ಆದಾಯ ತೆರಿಗೆ ಭಾರಿ ಚರ್ಚೆಯಾಗುತ್ತದೆ. ಈ ಬಾರಿ 12 ಲಕ್ಷ ರೂಪಾಯಿ ಆದಾಯವರೆಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಇಷ್ಟೇ ಅಲ್ಲ ಕೆಲ ತೆರಿಗೆ ವಿನಾಯಿತಿಗಳು ತೆರಿಗೆದಾರರನ್ನು ನಿಟ್ಟುಸಿರು ಬಿಡುವಂತೆ ಮಾಡಿದೆ. ಹಾಗಾಗಿ ಕೇಂದ್ರ ಬಜೆಟ್ ಬಗ್ಗೆ ಎಲ್ಲರಿಗೂ ಕುತೂಹಲ ಇರುತ್ತೆ. ಯಾಕಂದ್ರೆ ಬಜೆಟ್ ಮೇಲೆ ಜನರ ಜೀವನ ನಿರ್ಧಾರ ಆಗುತ್ತೆ.
ಈ ದುಬಾರಿ ಮಾರುಕಟ್ಟೆಯಲ್ಲಿ ತೆರಿಗೆ ಹೆಚ್ಚಾದರೆ, ದೇಶದ ಹೆಚ್ಚಿನ ಜನರಿಗೆ ಕಷ್ಟ ಆಗುತ್ತೆ. ದೇಶದ ಎಲ್ಲಾ ರಾಜ್ಯಗಳ ಸ್ಥಿತಿ ಹೀಗೆಯೇ ಇದೆ. ದೇಶದ ಎಲ್ಲಾ ಕಡೆ ತೆರಿಗೆ ಬಗ್ಗೆ ಚರ್ಚೆಯಾಗುತ್ತದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಹಲವು ಕಾರಣಗಳಿಂದ ಜನರು ತಮಗೆ ಬರುವ ಆದಾಯದಲ್ಲಿ ಅತೀ ಕಡಿಮೆ ತೆರಿಗೆ ಬಯಸುತ್ತಿದ್ದಾರೆ. ಈ ಬಾರಿ 7 ಲಕ್ಷ ರೂಪಾಯಿ ಇದ್ದ ತೆರಿಗೆ ವಿನಾಯಿತಿಯನ್ನು 12 ಲಕ್ಷ ರೂಪಾಯಿ ವರೆಗೆ ಏರಿಕೆ ಮಾಡಲಾಗಿದೆ.
ಆದರೆ ಒಂದು ರಾಜ್ಯದಲ್ಲಿ ಮಾತ್ರ ಜನರಿಗೆ ತೆರಿಗೆ ಇಲ್ಲವೇ ಇಲ್ಲ ಅಂತ ಗೊತ್ತಾದರೆ ನಿಮಗೆ ಆಶ್ಚರ್ಯ ಆಗಬಹುದು. ಆ ರಾಜ್ಯ ಸಿಕ್ಕಿಂ. ಇದು ಭಾರತದ ಏಕೈಕ ತೆರಿಗೆ ರಹಿತ ರಾಜ್ಯ. ಕೇಂದ್ರ ಸರ್ಕಾರದ ಬಜೆಟ್ ಏನೇ ಇರಬಹುದು, ಆದಾಯ ತೆರಿಗೆ ಸ್ಲ್ಯಾಬ್, ಶೇಕಡಾವಾರು, ಟಿಡಿಎಸ್ ಸೇರಿದಂತೆ ಕೇಂದ್ರ ಯಾವುದೇ ತೆರಿಗೆ ಸಿಕ್ಕಿಂ ರಾಜ್ಯಕ್ಕೆ ಅನ್ವಯವಾಗುವುದಿಲ್ಲ.
ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ಸಿಕ್ಕಿಂ ರಾಜ್ಯ ಭಾರತದ ಪರವಾಗಿದ್ದು 1975ರಲ್ಲಿ. ಇದಕ್ಕೂ ಮೊದಲು ಅಂದರೆ 1950ರಲ್ಲಿ ಇಂಡೋ ಸಿಕ್ಕಿಂ ಟ್ರೀಟಿ ಮಾಡಲಾಗಿದೆ. ಈ ಟ್ರೀಟಿ ಪ್ರಕಾರ ಕೇಂದ್ರದ ತೆರಿಗೆ ನೀತಿ ಸಿಕ್ಕಿಂನಲ್ಲಿ ಅನ್ವಯವಾಗುವುದಿಲ್ಲ. ಭಾರದ ಜೊತೆ ವಿಲೀನವಾಗುವ ವೇಳೆ ಸಿಕ್ಕಿಂಗೆ ವಿಶೇಷ ಸವಲತ್ತನ್ನು ಕೇಂದ್ರ ಸರ್ಕಾರ ಸಿಕ್ಕಿಂಗೆ ನೀಡಿದೆ. ಸೆಕ್ಷನ್ 10(26AAA) ಅಡಿಯಲ್ಲಿ ಈ ವಿನಾಯಿತಿ ನೀಡಲಾಗಿದೆ.
ಸದ್ಯ ಇರುವ ಭಾರತದ ತೆರಿಗೆ ನೀತಿ ಸಿಕ್ಕಿಂಗೆ ಅನ್ವಯವಾಗದಿರಲು ಮತ್ತೊಂದು ಕಾರಣವಿದೆ. ಭಾರತ ಸ್ವತಂತ್ರ ಗೊಂಡ ಬಳಿಕ ಭಾರತದಲ್ಲಿ ಹೊಸ ತೆರಿಗೆ ನೀತಿ ಜಾರಿಗೆ ಬಂದಿತ್ತು. ಆ ವೇಳೆ ಸಿಕ್ಕಿ ಭಾರತದ ಭಾಗವಾಗಿರಲಿಲ್ಲ. ಹೀಗಾಗಿ ಈ ತೆರಿಗೆ ನೀತಿಗಳು ಸಿಕ್ಕಿಂಗೆ ಅನ್ವಯವಾಗುವುದಿಲ್ಲ. ಭಾರತದ ಭಾಗವಾದ ಕಾರಣಕ್ಕಾಗಿ ಸಿಕ್ಕಿಂಗೆ ತೆರಿಗೆ ವಿನಾಯಿತಿಯನ್ನು ನೀಡಲಾಗಿದೆ.
ಈಗಲೂ ಸಿಕ್ಕಿಂ ತೆರಿಗೆ ವಿನಾಯಿತಿ ರಾಜ್ಯ. ಇಲ್ಲಿ ಸಿಕ್ಕಂ ರಾಜ್ಯದ ತೆರಿಗೆ ಪದ್ಧತಿ ಜಾರಿಯಲ್ಲಿದೆ. ಇದು ಕನಿಷ್ಠವಾಗಿದೆ. ಇದರ ಜೊತೆಗೆ ಕೇಂದ್ರದ ತೆರಿಗೆ ಇರುವುದಿಲ್ಲ. ಹೀಗಾಗಿ ಆದಾಯಕ್ಕೆ ತೆರಿಗೆ ಪಾವತಿಸುವ ಕಿರಿಕಿರಿ ಸಿಕ್ಕಿಂ ರಾಜ್ಯದ ಜನರಿಗಿಲ್ಲ. ಈಶಾನ್ಯ ಭಾಗದ ಇತರ ಯಾವುದೇ ರಾಜ್ಯಗಳಿಗೆ ಈ ರೀತಿಯ ವಿಶೇಷ ಸವಲತ್ತು ಇರುವುದಿಲ್ಲ.