ಬಿಎಸ್ಎನ್ಎಲ್ ಗ್ರಾಹಕರನ್ನು ಸೆಳೆಯಲು ಹಾಗೂ ಇರುವ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡುತ್ತಿದೆ. ಈಗಾಗಲೇ ಖಾಸಗಿ ಟೆಲಿಕಾಂ ಕಂಪನಿಗಳ ಬೆಲೆ ಏರಿಕೆ, ಬಿಎಸ್ಎನ್ಎಲ್‌ಗೆ ವರವಾಗಿದೆ. ಹೀಗಾಗಿ ಹಲವರು ಬಿಎಸ್ಎನ್ಎಲ್‌ಗೆ ಪೋರ್ಟ್ ಆಗಿದ್ದಾರೆ. ಇದೀಗ ಬಿಎಸ್ಎನ್ಎಲ್ ಕೈಗೆಟುಕುವ ದರದ ಪ್ಲಾನ್ ನೀಡುತ್ತಿದೆ. ಕೇವಲ 99 ರೂಪಾಯಿ ರೀಚಾರ್ಜ್ ಪ್ಲಾನ್ ಏರ್ಟೆಲ್, ಜಿಯೋ ಸೇರಿದಂತೆ ಖಾಸಗಿ ಟೆಲಿಕಾಂಗಳಿಗೆ ಶಾಕ್ ನೀಡಿದೆ.
ಬಿಎಸ್ಎನ್ಎಲ್ 17 ದಿನಗಳ ವ್ಯಾಲಿಡಿಟಿಯೊಂದಿಗೆ ಹೊಸ ₹99 ರೀಚಾರ್ಜ್ ಯೋಜನೆಯನ್ನು ಪರಿಚಯಿಸುತ್ತಿದೆ, ಇದು ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 ಉಚಿತ SMS ಉಚಿತವಾಗಿ ನೀಡುತ್ತದೆ. ಅನ್‌ಲಿಮಿಚೆಡ್ ಕರೆಗಳಿಗೆ ಆದ್ಯತೆ ನೀಡುವ ಬಳಕೆದಾರರಿಗೆ ಈ ಯೋಜನೆ ಸೂಕ್ತವಾಗಿದೆ. ಇದು ಉಚಿತ ವೈಯಕ್ತಿಕಗೊಳಿಸಿದ ರಿಂಗ್ ಬ್ಯಾಕ್ ಟೋನ್ ಸೇವೆಯನ್ನು ಸಹ ಒಳಗೊಂಡಿದೆ.
ಬಿಎಸ್ಎನ್ಎಲ್ 30 ದಿನಗಳ ವ್ಯಾಲಿಡಿಟಿ, ಅನಿಯಮಿತ ಕರೆಗಳು, ದಿನಕ್ಕೆ 100 SMS ಮತ್ತು 10GB ಡೇಟಾದೊಂದಿಗೆ ₹147 ಯೋಜನೆಯನ್ನು ಸಹ ನೀಡುತ್ತದೆ. ಇದು ಉಚಿತ ಕಾಲರ್ ಟ್ಯೂನ್‌ಗಳು ಮತ್ತು ವೈಯಕ್ತಿಕಗೊಳಿಸಿದ ರಿಂಗ್ ಬ್ಯಾಕ್ ಟೋನ್ ಅನ್ನು ಸಹ ಒಳಗೊಂಡಿದೆ.
BSNL ಈಗಾಗಲೇ ಕೈಗೆಟುಕುವ ದರದಲ್ಲಿ ಹಲವು ಪ್ಲಾನ್ ನೀಡಿದೆ. ಇತ್ತೀಚೆಗೆ ಟ್ರಾಯ್ ಸೂಚನೆಯಂತೆ ಕರೆ ಹಾಗೂ ಎಸ್ಎಂಎಸ್ ಯೋಜನೆಯನ್ನು BSNL ನೀಡುತ್ತಿದೆ. ಟ್ರಾಯ್ ಸೂಚನೆಯಂತೆ 90 ದಿನದ ವ್ಯಾಲಿಟಿಡಿ ಮೂಲಕ 439 ರೂಪಾಯಿ ರೀಚಾರ್ಜ್ ಪ್ಲಾನ್ ನೀಡಿದೆ. ಇದು ಅನ್‌ಲಿಮಿಟೆಡ್ ಕರೆ, 100 ಎಸ್ಎಂಎಸ್ ಪ್ರತಿ ದಿನ ನೀಡಲಿದೆ.
ಬಿಎಸ್ಎನ್ಎಲ್ ಈಗಾಗಲೇ ಮಹತ್ವದ ಒಟಿಟಿ ಸಬ್‌ಸ್ಕ್ರಿಪ್ಶನ್ ಯೋಜನೆ ಘೋಷಿಸಿದೆ BiTV ಮೂಲಕ 300ಕ್ಕೂ ಹೆಚ್ಚು ಲೈವ್ ಟಿವಿ ಉಚಿತವಾಗಿ ನೀಡುತ್ತಿದೆ. ದೇಶಾದ್ಯಂತ ಈ ಸೇವೆ ಜಾರಿ ಮಾಡಲಾಗಿದೆ. ಒಟಿಟಿ ಜೊತೆ ಪಾರ್ಟ್ನರ್‌ಶಿಪ್ ಮೂಲಕ ಈ ಯೋಜನೆ ಜಾರಿ ಮಾಡಲಾಗಿದೆ.