ಟಾಟಾ ಗ್ರೂಪ್ ಷೇರುಗಳು ಸಾರ್ವಕಾಲಿಕ ದಾಖಲೆ ಬರೆದಿದೆ. ಕಂಪನಿ ನಿರೀಕ್ಷೆಗೂ ಮೀರಿದ ಬೆಳವಣಿಗೆ ದಾಖಲಿಸಿದೆ. ಪರಿಮಾಮ ಹೂಡಿಕೆದಾರರ ಆಸಕ್ತಿ ಡಬಲ್ ಆಗಿದೆ. ಟಾಟಾ ಗ್ರೂಪ್ ಯಾವ ಕಂಪನಿಗಳ ಷೇರು ದಾಖಲೆ ಬರೆದಿದೆ.
ರತನ್ ಟಾಟಾ ಮುಖ್ಯಸ್ಥರಾಗಿ ಟಾಟಾ ಗ್ರೂಪ್ ಕಂಪನಿಗಳ ವ್ಯಾಪ್ತಿ ವಿಸ್ತಾರ ಮಾಡಿದ್ದು ಮಾತ್ರವಲ್ಲ, ಆದಾಯ, ಕಾರ್ಪೋರೇಟ್ ಲೈಫ್ ಸೇರಿದಂತೆ ಹಲವು ಆಯಾಮಗಳಲ್ಲಿ ಸರ್ವೋತೋಮುಖ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ರತನ್ ಟಾಟಾ ನಿಧನರಾದ ಬಳಿಕ ಟಾಟಾ ಗ್ರೂಪ್ ಮತ್ತೆ ಪುಟೆದಿದ್ದಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಂಪನಿ ಉತ್ತಮ ಪ್ರಗತಿ ಸಾಧಿಸಿದೆ. ಟಾಟಾ ಗ್ರೂಪ್ ಅಡಿಯಲ್ಲಿರುವ ಕೆಲ ಕಂಪನಿಗಳ ಷೇರುಗಳು ಸಾರ್ವಕಾಲಿಕ ದಾಖಲೆ ಬರೆದಿದೆ.
26
ಹೊಳೆಯುತ್ತಿದೆ ಟೈಟಾನ್
ಟಾಟಾ ಗ್ರೂಪ್‌ನ ಪ್ರಮುಖ ಬ್ರ್ಯಾಂಡ್ ಆಗಿರುವ ಟೈಟಾನ್ ಕಂಪನಿ ನರೀಕ್ಷೆಗೂ ಮೀರಿದ ಬೆಳವಣಿಗೆ ಕಂಡಿದೆ. ಷೇರು ಮಾರುಕಟ್ಟೆಯಲ್ಲಿ ಟೈಟಾನ್ ಷೇರುಗಳು ಶೇಕಡಾ 4ರಷ್ಟು ಜಿಗಿತ ಕಂಡಿದೆ. ಈ ಮೂಲಕ 4,655.90 ರೂಪಾಯಿ ಮಟ್ಟ ತಲುಪಿ ಸಾರ್ವಕಾಲಿಕ ದಾಖಲೆ ಬರೆದಿದೆ. ಕಂಪನಿಯ ಒಟ್ಟಾರೆ ಬೆಳವಣಿಗೆಯಲ್ಲಿ ಶೇಕಡಾ 41ರಷ್ಟು ಪ್ರಗತಿ ಸಾಧಿಸಿದೆ.
36
ಬೆಲೆ ಏರಿಕೆ ನಡುವೆ ತನಿಷ್ಕ್ ಚಿನ್ನಕ್ಕೆ ಬೇಡಿಕೆ
ಟಾಟಾ ಗ್ರೂಪ್‌ನ ಮತ್ತೊಂದು ಕಂಪನಿ ತನಿಷ್ಕ್ ಆಭರಣ ಬಾರಿ ಬೇಡಿಕೆ, ಮಾರಾಟ ದಾಖಲೆ ಮೂಲಕ ಪ್ರಗತಿ ಸಾಧಿಸಿದೆ. ಟಾಟಾ ಗ್ರೂಪ್ ಕಂಪನಿ ಅಂಗ ಸಂಸ್ಥೆಗಳಾಗಿರುವ ತನಿಷ್ಕ್ (Tanishq), ಮಿಯಾ (Mia) ಮತ್ತು ಜೊಯಾ (Zoya) ಜಂಟಿಯಾಗಿ ಶೇ. 39 ರಷ್ಟು ಪ್ರಗತಿ ದಾಖಲಿಸಿವೆ. ಕ್ಯಾರಟ್‌ಲೇನ್ (CaratLane) ಬ್ರ್ಯಾಂಡ್ ಕೂಡ ಭರ್ಜರಿ ಶೇ. 42ರಷ್ಟು ಮಾರಾಟದ ಬೆಳವಣಿಗೆ ದಾಖಲಾಗಿದೆ.
ಟೈಟಾನ್ ಐಕೇರ್ (EyeCare) ಕಣ್ಣಿನ ಕನ್ನಡಕಗಳ ವಿಭಾಗದಲ್ಲೂ ಕಂಪನಿಯು ಶೇ. 23ರಷ್ಟು ಭರ್ಜರಿ ಚೇತರಿಕೆ ದಾಖಲಿಸಿದೆ. ಟೈಟಾನ್ ಜಾಗತಿಕ ಮಾರುಕಟ್ಟೆಯ ವ್ಯವಹಾರವು ವಿದೇಶಗಳಲ್ಲಿ ಹೊಸ ಮಳಿಗೆಗಳನ್ನು ತೆರೆಯುವ ಮೂಲಕ ಬರೋಬ್ಬರಿ ಶೇಕಡಾ 128 ರಷ್ಟು ಬೃಹತ್ ಜಿಗಿತ ಕಂಡಿದೆ. ಕಂಪನಿಯು ತನ್ನ ರೀಟೇಲ್ ಜಾಲವನ್ನು ಮತ್ತಷ್ಟು ಬಲಪಡಿಸಲು ಪ್ರಸಕ್ತ ತ್ರೈಮಾಸಿಕದಲ್ಲೇ ಹೊಸದಾಗಿ 77 ಅತ್ಯಾಧುನಿಕ ಮಳಿಗೆಗಳನ್ನು ಸೇರ್ಪಡೆಗೊಳಸಿದೆ.
56
ಟಾಟಾ ಗ್ರೂಪ್‌ಗೆ ಲಾಭ
ಮಾರುಕಟ್ಟೆ ಸವಾಲುಗಳ ನಡುವೆ ಟಾಟಾ ಗ್ರೂಪ್‌ನ ಬಹುತೇಕ ಕಂಪನಿಗಳು ಪ್ರಗತಿಯ ಹಾದಿಯಲ್ಲಿದೆ. ಈ ಪೈಕಿ ಟೈಟಾನ್ಸ್ ಟಾಟಾದ ಅತೀ ದೊಡ್ಡ ಬೆಳವಣಿಗೆ ಕಾರಣವಾಗಿದೆ. ಗ್ರಾಹಕರ ನಂಬಕೆ, ಷೇರು ಮೌಲ್ಯಗಳಿಂದ ಕಂಪನಿಯ ಲಾಭ ದುಪ್ಪಟ್ಟಾಗಿದೆ.
66
ಭವಿಷ್ಯ ನುಡಿದ ಬ್ರೋಕರೇಜ್
ಟೈಟಾನ್ಸ್ ಪ್ರಗತಿ, ಟಾಟಾ ಸಮೂಹಗಳ ಬೆಳವಣಿಗೆಯಿಂದ ಇದೀಗ ಷೇರು ಮಾರುಕಟ್ಟೆ ಭವಿಷ್ಯ ನುಡಿವ ಹಲವು ಬ್ರೋಕರೇಜ್ ಕಂಪನಿಗಳು ಟೈಟಾನ್ಸ್ ಸೇರಿದಂತೆ ಟಾಟಾ ಷೇರುಗಳು ಲಾಭ ನೀಡಲಿದೆ ಎಂದುು ಭವಿಷ್ಯ ನುಡಿದಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.