ಕಳಚಿ ಬಿತ್ತು ಎಲಾನ್ ಮಸ್ಕ್ ಟ್ರಿಲಿಯನೆರ್ ಶ್ರೀಮಂತ ಪಟ್ಟ, ಒಂದು ತಪ್ಪಿನಿಂದ ಉದ್ಯಮಿಗೆ ಭಾರಿ ಹಿನ್ನಡೆ

Published : Jul 07, 2026, 12:29 PM IST

ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ವಿಶ್ವದ ಮೊದಲ ಹಾಗೂ ಏಕೈಕ ಟ್ರಿಲಿಯನೆರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ ಈ ಪಟ್ಟ ಹೆಚ್ಚು ದಿನ ಇರಲೇ ಇಲ್ಲ. ಎಲಾನ್ ಮಸ್ಕ್ ಟ್ರಿಲಿಯನೆರ್ ಪಟ್ಟ ಕಳಚಲು ಕಾರಣವೇನು?

PREV
16
ಟ್ರಿಲಿಯನೆರ್ ಪಟ್ಟ ಕಳೆದುಕೊಂಡ ಮಸ್ಕ್

ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಇತ್ತೀಚೆಗಷ್ಟೇ ವಿಶ್ವದ ಮೊದಲ ಹಾಗೂ ಏಕೈಕ ಟ್ರಿಲಿಯನೆರ್ ಅಂದರೆ ಸರಿಸುಮಾರು 83 ಲಕ್ಷ ಕೋಟಿ ರೂಪಾಯಿ) ಸಂಪತ್ತಿನ ಮೂಲಕ ಹೊಸ ದಾಖಲೆ ಬರೆದಿದ್ದರು. ಮಸ್ಕ್ ಉದ್ಯಮ, ಆದಾಯ, ಆಸ್ತಿ ಸಂಪತ್ತು ಶ್ರೀಮಂತರನ್ನೇ ಚಕಿತಗೊಳಿಸಿತ್ತು. ಆದರೆ ಎಲಾನ್ ಮಸ್ಕ್ ಇದೀಗ ಟ್ರಿಲಿಯನೆರ್ ಶ್ರೀಮಂತಿಕೆ ಪಟ್ಟ ಕಳೆದುಕೊಂಡಿದ್ದಾರೆ.

26
1.4 ಟ್ರಿಲಿಯನ್ ಡಾಲರ್ ದಾಟಿದ್ದಮಸ್ಕ್ ಆಸ್ತಿ

ಜೂನ್ 12 ರಿಂದ ಎಸಕ್ ಮಾಲೀಕತ್ವದ ಸ್ಪೇಸ್ ಎಕ್ಸ್ ಸಂಸ್ಥೆ ಐಪಿಒ ಮೂಲಕ ಮಾರುಕಟ್ಟೆಗೆ ಕಾಲಿಟ್ಟಿತ್ತು. ಆರಂಭದಲ್ಲಿ 135 ಡಾಲರ್‌ಗೆ ನಿಗದಿಯಾಗಿದ್ದ ಷೇರು ಕೆಲವೇ ದಿನಗಳಲ್ಲಿ 225 ಡಾಲರ್‌ಗೆ ಜಿಗಿತ ಕಂಡಿತ್ತು. ಈ ಮೂಲಕ ಇತಿಹಾಸ ಸೃಷ್ಟಿಯಾಗಿತ್ತು.ಪರಿಣಾಮ ಮಸ್ಕ್ ಸಂಪತ್ತು 1.4 ಟ್ರಿಲಿಯನ್ ಡಾಲರ್ ದಾಟಿತ್ತು. ಈ ಮೂಲಕ ಮಸ್ಕ್ ಟ್ರಿಲಿಯನೇರ್ ದಾಟಿ ಮುಂದೆ ಸಾಗುವ ಸೂಚನೆ ನೀಡಿದ್ದರು. ಆದರೆ ಪರಿಸ್ಥಿತಿ ಹಾಗೇ ಉಳಿಯಲಿಲ್ಲ.

36
ಒಂದು ತಪ್ಪು ನಿರ್ಧಾರದಿಂದ ಪತನ

ಸ್ಟಾಕ್ ಮಾರುಕಟ್ಟೆಗೆ ಎಂಟ್ರಿಕೊಟ್ಟಿದ್ದ ಬಾಹ್ಯಾಕಾಶ ಸಂಸ್ಥೆ ಸ್ಪೇಸ್ ಎಕ್ಸ್ ಷೇರುಗಳ ಸತತವಾಗಿ ಕುಸಿತ ಕಾಣುತ್ತಿರುವ ಪರಿಣಾಮ ಆಸ್ತಿ ಮೌಲ್ಯ ಟ್ರಿಲಿಯನೆರ್ ಡಾಲರ್‌ನಿಂದ ಕುಸಿತ ಕಂಡಿದೆ. ಜೂನ್ 16ರಂದು ಸ್ಪೇಸ್ ಎಕ್ಸ್ ತೆಗೆದುಕೊಂಡು ಒಂದು ನಿರ್ಧಾರ ಈ ಪತನಕ್ಕೆ ಕಾರಣಾಗಿದೆ ಜೂನ್ 16 ರಂದು ಸ್ಪೇಸ್ ಎಕ್ಸ್ ಸಂಸ್ಥೆ ಕೋಡಿಂಗ್ ಎಜೆಂಟ್ ಕರ್ಸರ್' (Cursor) ಕಂಪನಿಯನ್ನು 60 ಬಿಲಿಯನ್ ಡಾಲರ್‌ಗೆ ಖರೀದಿ ಮಾಡವುದಾಗಿ ಘೋಷಿಸಿತ್ತು. ಇದು ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಆತಂಕ ಸೃಷ್ಟಿಸಿ, ಪತನಕ್ಕೆ ಕಾರಣವಾಗಿದೆ.

46
ಹೂಡಿಕೆದಾರರಲ್ಲಿ ಆತಂಕ

ಬಾಹ್ಯಾಕಾಶದಲ್ಲಿ ಎಐ ಡೇಟಾ ಸ್ಥಾಪಿಸಲು ಎಲಾನ್ ಮಸ್ಕ್ ಮಹತ್ವದ ಯೋಜನೆ ರೂಪಿಸಿದ್ದಾರೆ. ಇದಕ್ಕೆ ಪೂರಕವಾಗಿ ಕರ್ಸರ್ ಕಂಪನಿ ಖರೀದಿಗೆ ಮುಂದಾಗಿದ್ದರು. ಆದರೆ ಮಸ್ಕ್ ಮಹತ್ವದ ಯೋದನೆಗಳು ಇನ್ನು ಪ್ರಾಯೋಗಿಕವಾಗಿ ಜಾರಿಯಾಗಿಲ್ಲ. ಹೀಗಾಗಿ ಹೂಡಿಕೆದಾರರಲ್ಲಿ ಆತಂಕ ಸೃಷ್ಚಿಸಿತ್ತು. ಪರಿಣಾಮ ಷೇರು ಮೌಲ್ಯ ಕುಸಿತ ಕಂಡಿತ್ತು .ಎಐ ಮೇಲಿನ ಅತೀಯಾದ ಹೂಡಿಕೆ ಹಾಗೂ ಅವಲಂಬನೆ ಕುರಿತು ಅನುಮಾನಗಳು ವ್ಯಕ್ತವಾಗಿದೆ.

56
ಶೇಕಡಾ 30ರಷ್ಟು ಕುಸಿತ ಕಂಡ ಮಸ್ಕ್ ಷೇರು ಮೌಲ್ಯ

ಸ್ಪೇಸ್ ಎಕ್ಸ್ ದಾಖಲೆಯತ್ತ ಸಾಗುತ್ತಿದ್ದಂತೆ ಎಲಾನ್ ಮಸ್ಕ್ ತೆಗೆದುಕೊಂಡ ಖರೀದಿ ನಿರ್ಧಾರದಿಂದ ಷೇರು ಮೌಲ್ಯ ಕುಸಿತ ಕಂಡಿತ್ತು. ಪರಿಣಾಮ ಶೇಕಡಾ 30ರಷ್ಟು ಕುಸಿತ ಕಂಡಿತ್ತು. ಇದೀಗ ಸ್ಪೇಸ್ ಎಕ್ಸ್ ಷೇರು ಮೌಲ್ಯ 152 ರಿಂದ 154 ಡಾಲರ್ ಮಟ್ಟಕ್ಕೆ ಕುಸಿದಿದೆ. ಇದರ ಬೆನ್ನಲ್ಲೇ ಟೆಸ್ಲಾ ಷೇರುಗಳು ಶೇಕಡಾ 21ರಷ್ಟು ಕುಸಿತ ಕಂಡಿದೆ.

66
ಆದರೂ ಎಲಾನ್ ಮಸ್ಕ್ ನಂಬರ್ 1 ಶ್ರೀಮಂತ

ಎಲಾನ್ ಮಸ್ಕ್ ಬಿಲಿಯೇನರ್ ಪಟ್ಟ ಕೈತಪ್ಪಿದೆ. ಆದರೂ ಎಲಾನ್ ಮಸ್ಕ್ ವಿಶ್ವದ ಶ್ರೀಮಂತನಾಗಿ ಮುಂದುವರಿದಿದ್ದಾರೆ. ಸದ್ಯ ಮಸ್ತ್ ಆಸ್ತಿ ಮೌಲ್ಯ 957 ರಿಂದ 997 ಬಿಲಿಯನ್ ಡಾಲರ್‌ಗೆ ಕುಸಿತ ಕಂಡಿದೆ. ಇನ್ನು ಎರಡನೇ ಸ್ಥಾನದಲ್ಲಿರುವ ಗೂಗಲ್ ಸಹ ಸಂಸ್ಥಾಪಕ ಲ್ಯಾರಿ ಪೇಜ್ ಆಸ್ತಿ ಮೌಲ್ಯ 284 ಬಿಲಿಯನ್ ಡಾಲರ್. ಮಸ್ಕ್ ಹಾಗೂ ಲ್ಯಾರಿ ಪೇಜ್ ನಡುವೆ ಅಜಗಜಾಂತರ ವ್ಯತ್ಯಸಾವಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories