ಇಂದಿನ ಚಿನ್ನದ ಬೆಲೆ ಕೇಳಿದ್ರೆ ನಿದ್ದೆ ಮಾಡ್ತಿದ್ರೂ ಬೆಚ್ಚಿ ಬೀಳ್ತೀರಿ; ಏರಿಕೆಯಾದ ಬೆಲೆ ಹಲವು ಜನರ ತಿಂಗಳ ಸಂಬಳ

Published : Sep 30, 2025, 10:48 AM IST

Today gold price in India: ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆಯಾಗುತ್ತಿದೆ. ಈ ಲೇಖನದಲ್ಲಿ 22 ಮತ್ತು 24 ಕ್ಯಾರಟ್ ಚಿನ್ನದ ಇಂದಿನ ದರ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಬೆಲೆ ವಿವರಗಳನ್ನು ನೀಡಲಾಗಿದೆ. ಚಿನ್ನದ ಜೊತೆಗೆ ಬೆಳ್ಳಿ ಬೆಲೆಯಲ್ಲೂ ಏರಿಕೆ ಕಂಡುಬಂದಿದೆ.

PREV
17
ಚಿನ್ನದ ಬೆಲೆ

ಚಿನ್ನದ ಬೆಲೆ ಕೇಳಿದರೆ ಜನರು ಭಯಪಡುವಂತಾಗಿದೆ. ಇಂದು ಚಿನ್ನದ ಬೆಲೆಯಲ್ಲಿ ಬರೋಬ್ಬರಿ 14 ಸಾವಿರ ರೂಪಾಯಿಗಳವರೆಗೆ ಹೆಚ್ಚಳವಾಗಿದೆ. ಗ್ರಾಮೀಣ ಭಾಗದಲ್ಲಿ ಕೂಲಿ ಕೆಲಸ ಮಾಡುವ ಶ್ರಮಿಕರ ಒಂದು ತಿಂಗಳ ಸಂಬಳವಾಗಿದೆ. ಹಾಗಾಗಿ ಚಿನ್ನ ಶಾಪಿಂಗ್ ಮಾಡುವ ಮುಂಚೆ ಜೇಬು ತುಂಬ ಹಣ ತುಂಬಿಸಿಕೊಳ್ಳಿ.

27
ಚಿನ್ನದ ಬೆಲೆ ಎಷ್ಟಿದೆ?

ಕಳೆದ ಎರಡು ತಿಂಗಳಿನಿಂದ ಚಿನ್ನದ ಬೆಲೆ (Gold Price)ನಿರಂತರವಾಗಿ ಹೆಚ್ಚಳವಾಗುತ್ತಿದೆ. ಇಂದು ದೇಶದಲ್ಲಿ 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೆ? ಎಷ್ಟು ಏರಿಕೆಯಾಗಿದೆ ಎಂಬುದರ ಮಾಹಿತಿ ಇಲ್ಲಿದೆ.

47
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ

1 ಗ್ರಾಂ: 11,831 ರೂಪಾಯಿ

8 ಗ್ರಾಂ: 96,648 ರೂಪಾಯಿ

10 ಗ್ರಾಂ: 1,18,310 ರೂಪಾಯಿ

100 ಗ್ರಾಂ: 11,83,100 ರೂಪಾಯಿ

57
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ

10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 1,08,600 ರೂಪಾಯಿ, ಮುಂಬೈ: 1,08,450 ರೂಪಾಯಿ, ದೆಹಲಿ: 1,08,600 ರೂಪಾಯಿ, ಕೋಲ್ಕತ್ತಾ: 1,08,450 ರೂಪಾಯಿ, ಬೆಂಗಳೂರು: 1,08,450 ರೂಪಾಯಿ, ಪುಣೆ: 1,08,450 ರೂಪಾಯಿ, ಅಹಮದಾಬಾದ್: 1,08,500 ರೂಪಾಯಿ, ವಡೋದರ: 1,08,500 ರೂಪಾಯಿ

67
ಎಷ್ಟು ದರ ಏರಿಕೆ?

24 ಕ್ಯಾರಟ್ 100 ಗ್ರಾಂ ಚಿನ್ನದ ದರದಲ್ಲಿ 14,200 ರೂಪಾಯಿ ಏರಿಕೆಯಾಗಿದೆ. ಇನ್ನು 22 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ 13,000 ರೂಪಾಯಿ ಹೆಚ್ಚಳಗೊಂಡಿದೆ. ಚಿನ್ನಕ್ಕಿಂತ ನಾನೇನು ಕಡಿಮೆ ಇಲ್ಲ ಅಂತ ಬೆಳ್ಳಿಯೂ ದರ ಏರಿಕೆಯಾಗಿದೆ. 1 ಕೆಜಿ ಬೆಳ್ಳಿ ಬೆಲೆಯಲ್ಲಿ 1,000 ರೂಪಾಯಿ ಹೆಚ್ಚಳವಾಗಿದೆ.

ಇದನ್ನೂ ಓದಿ: ನಿಮಗೆ ಅರಿವಿಲ್ಲದೇ Pan Cardಗೆ ಕನ್ನ! ಲಕ್ಷ ಲಕ್ಷ ಸಾಲ ಮಾಡ್ತಿದ್ದಾರೆ ಖದೀಮರು- ಹೀಗೆ ಮಾಡಿ ಸೇಫ್​ ಆಗಿ

77
ದೇಶದಲ್ಲಿಂದು ಬೆಳ್ಳಿ ಬೆಲೆ

10 ಗ್ರಾಂ: 1,510 ರೂಪಾಯಿ

100 ಗ್ರಾಂ: 15,100 ರೂಪಾಯಿ

1000 ಗ್ರಾಂ: 1,51,000 ರೂಪಾಯಿ

ಇದನ್ನೂ ಓದಿ: ಬ್ಯಾಂಕ್‌ ಎಫ್‌ಡಿಯಲ್ಲಿ ಗರಿಷ್ಠ ಎಷ್ಟು ಹಣ ಇಡಬಹುದು: ಫಿಕ್ಸ್‌ ಡೆಪಾಸಿಟ್‌ ಕುರಿತು ಸಂಪೂರ್ಣ ವಿವರ

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories