ಬಿಲಿಯನೇರ್‌ ಆದ್ರೂ ಭಾರತದ ಅತೀ ದೊಡ್ಡ ದಾನಿ ಮುಕೇಶ್ ಅಂಬಾನಿ, ಗೌತಮ್ ಅದಾನಿ ಅಲ್ಲ..ಮತ್ಯಾರು?

First Published | Nov 5, 2023, 11:05 AM IST

ಬಿಲಿಯನೇರ್ ಆದವರೆಲ್ಲರೂ ಪರೋಪಕಾರ ಮನೋಭಾವ ಹೊಂದಿರಬೇಕು ಎಂದಿಲ್ಲ. ಹೀಗಾಗಿಯೇ ಶ್ರೀಮಂತ ವ್ಯಕ್ತಿಗಳ ಲಿಸ್ಟ್‌ನಲ್ಲಿ ಅಗ್ರಸ್ಥಾನದಲ್ಲಿರುವವರು ದಾನಿಗಳ ಪಟ್ಟಿಯಲ್ಲಿ ಟಾಪ್‌ನಲ್ಲಿಲ್ಲ. ಬಿಲಿಯನೇರ್‌ ಆದ್ರೂ ಭಾರತದ ಅತೀ ದೊಡ್ಡ ದಾನಿ ಮುಕೇಶ್ ಅಂಬಾನಿ, ಗೌತಮ್ ಅದಾನಿ ಅಲ್ಲ..ಮತ್ಯಾರು?

2023ರ ಫೋರ್ಬ್ಸ್ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಮುಕೇಶ್ ಅಂಬಾನಿ, ಗೌತಮ್ ಅದಾನಿ ಸೇರಿ ಹಲವಾರು ಭಾರತೀಯ ಬಿಲಿಯನೇರ್‌ಗಳಿದ್ದಾರೆ. ಹುರುನ್ ಇಂಡಿಯಾ ಸಹ ಶ್ರೀಮಂತ ವ್ಯಕ್ತಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಾಗೆಯೇ ಹುರುನ್ ಇಂಡಿಯಾ ಲೋಕೋಪಕಾರಿ ಪಟ್ಟಿ 2023ನ್ನು ನವೆಂಬರ್ 2ರಂದು ಬಿಡುಗಡೆ ಮಾಡಿದೆ.

ಬಿಲಿಯನೇರ್ ಆದವರೆಲ್ಲರೂ ಪರೋಪಕಾರ ಮನೋಭಾವ ಹೊಂದಿರಬೇಕು ಎಂದಿಲ್ಲ. ಹೀಗಾಗಿಯೇ ಶ್ರೀಮಂತ ವ್ಯಕ್ತಿಗಳ ಲಿಸ್ಟ್‌ನಲ್ಲಿ ಅಗ್ರಸ್ಥಾನದಲ್ಲಿರುವವರು ದಾನಿಗಳ ಪಟ್ಟಿಯಲ್ಲಿ ಟಾಪ್‌ನಲ್ಲಿಲ್ಲ. ಅಂಬಾನಿ, ಅದಾನಿ ಅಲ್ಲ ಬದಲಿಗೆ ಶಿವ ನಾಡಾರ್‌ ಭಾರತದ ಅತ್ಯಂತ ಉದಾರ ವ್ಯಕ್ತಿಯೆಂದು ಗುರುತಿಸಿಕೊಂಡಿದ್ದಾರೆ.

Tap to resize

HCLಸಹ-ಸಂಸ್ಥಾಪಕ ಶಿವ ನಾಡರ್, ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಹಾಗೆಯೇ ಭಾರತದ ಅತ್ಯಂತ ಉದಾರ ವ್ಯಕ್ತಿಯಾಗಿ ತನ್ನ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ನಾಡಾರ್, ಸ್ವಯಂ-ನಿರ್ಮಿತ ಬಿಲಿಯನೇರ್ ಆಗಿದ್ದಾರೆ. 

ವರದಿಗಳ ಪ್ರಕಾರ ಶಿವ ನಾಡಾರ್‌, 2,042 ಕೋಟಿ ರೂ. ದೇಣಿಗೆ ನೀಡಿದ್ದಾರೆ, ಇದು ಪ್ರತಿ ದಿನ ಸರಿಸುಮಾರು 5.6 ಕೋಟಿ ರೂಪಾಯಿಯಷ್ಟಾಗಿದೆ. ಅವರ ನಂತರ ವಿಪ್ರೋ ಸಂಸ್ಥಾಪಕ ಅಧ್ಯಕ್ಷ ಅಜೀಂ ಪ್ರೇಮ್‌ಜಿ 1,774 ಕೋಟಿ ದೇಣಿಗೆ ನೀಡಿದ್ದಾರೆ.

ವಾರ್ಷಿಕ 376 ಕೋಟಿ ರೂ. ದೇಣಿಗೆಯೊಂದಿಗೆ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ಭಾರತದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಗೌತಮ್ ಅದಾನಿ 5ನೇ ಸ್ಥಾನದಲ್ಲಿದ್ದಾರೆ. ಅವರು 285 ಕೋಟಿ ರೂ. ದೇಣಿಗೆ ನೀಡಿದ್ದು, ಹಿಂದಿನ ವರ್ಷಕ್ಕಿಂತ ಶೇ.50ರಷ್ಟು ಹೆಚ್ಚಾಗಿದೆ. ರತನ್ ಟಾಟಾ ಈ ವರ್ಷದ ಟಾಪ್ 10 ಲೋಕೋಪಕಾರಿ ಪಟ್ಟಿಯಲ್ಲಿ ಇಲ್ಲ.
 

ಶಿವ ನಾಡರ್ ಬಗ್ಗೆ ಮಾಹಿತಿ
1945ರಲ್ಲಿ, ಶಿವ ನಾಡಾರ್ ತಮಿಳುನಾಡಿನ ಮೂಲೈಪೋಜಿಯಲ್ಲಿ ಜನಿಸಿದರು. ಮಧ್ಯಮ ವರ್ಗದಲ್ಲಿ ಜನಿಸಿದರೂ ಶಿವ ನಾಡಾರ್‌ ಶಾಲೆಯಲ್ಲಿ ಚೆನ್ನಾಗಿ ಓದುತ್ತಿದ್ದರು. ಕೊಯಮತ್ತೂರಿನ ಗೌರವಾನ್ವಿತ PSG ಕಾಲೇಜ್ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು.

ಆದರೆ 21 ವರ್ಷ ವಯಸ್ಸಿನ ವರೆಗೂ ಇಂಗ್ಲಿಷ್‌ನಲ್ಲಿ ಸಂವಹನ ಮಾಡಲು ಅವರಿಗೆ ಸಾಧ್ಯವಾಗುತ್ತಿರಲ್ಲಿಲ್ಲ.1967ರಲ್ಲಿ ಪುಣೆಯಲ್ಲಿ ಕೂಪರ್ ಇಂಜಿನಿಯರಿಂಗ್ ಲಿಮಿಟೆಡ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.

1970ರಲ್ಲಿ HCL ಟೆಕ್ನಾಲಜೀಸ್ ಸ್ಥಾಪಿಸಿದರು. ಇದು ಸಿಂಗಾಪುರದ ಕಂಪನಿಗೆ ಸೇವೆ ಸಲ್ಲಿಸುವ ಹಾರ್ಡ್‌ವೇರ್ ಕಂಪನಿಯಾಗಿ ಪ್ರಾರಂಭವಾಯಿತು. ಈ ವ್ಯವಹಾರವು ಒಮ್ಮೆ ದೆಹಲಿಯ ಗ್ಯಾರೇಜ್‌ನಿಂದ ಕಾರ್ಯನಿರ್ವಹಿಸುತ್ತಿತ್ತು. 1980ರ ದಶಕದ ಆರಂಭದಲ್ಲಿ ಕಂಪನಿಯ ಆದಾಯವು ರೂ 1 ಮಿಲಿಯನ್ ತಲುಪಿದಾಗ, ಯಶಸ್ಸಿನ ಮಾರ್ಗದಲ್ಲಿ ಹೆಜ್ಜೆ ಹಾಕಲು ಆರಂಭವಾಯಿತು.

ಶಿವ ನಾಡಾರ್‌, ಪತ್ನಿಯ ಹೆಸರು ಕಿರಣ್ ನಾಡಾರ್, ಅವರು ಭಾರತೀಯ ಕಲಾ ಸಂಗ್ರಾಹಕ ಮತ್ತು ಲೋಕೋಪಕಾರಿ. ಅವರು ಶಿವ ನಾಡರ್ ಫೌಂಡೇಶನ್‌ನ ಟ್ರಸ್ಟಿ ಮತ್ತು ಕಿರಣ್ ನಾಡರ್ ಮ್ಯೂಸಿಯಂ ಆಫ್ ಆರ್ಟ್‌ನ ಸಂಸ್ಥಾಪಕರಾಗಿದ್ದಾರೆ. 

ಶಿವ ನಾಡಾರ್ ಅವರ ಕುಟುಂಬವು ಅವರ ಹೆಸರಿನಲ್ಲಿ ಚಾರಿಟಬಲ್ ಫೌಂಡೇಶನ್‌ನ್ನು ನಡೆಸುತ್ತಿದೆ.  ಶಿವ ನಾಡರ್ ಫೌಂಡೇಶನ್. ಪ್ರತಿಷ್ಠಾನವು ಪ್ರಾಥಮಿಕವಾಗಿ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತದೆ.

Latest Videos

click me!