ಮುಕೇಶ್‌ ಅಂಬಾನಿ ಮೊದಲ ಬಾಸ್ ಮಗ, ರಿಲಯನ್ಸ್‌ ಇಂಡಸ್ಟ್ರೀಸ್‌ನಲ್ಲಿ ಹೈಯೆಸ್ಟ್ ಸ್ಯಾಲರಿ ಪಡೆಯೋ ಉದ್ಯೋಗಿ!

First Published | Nov 4, 2023, 12:40 PM IST

ಮುಕೇಶ್ ಅಂಬಾನಿ ಭಾರತದ ಅತಿದೊಡ್ಡ ಕಂಪನಿಗಳಲ್ಲಿ ಒಂದಾದ ರಿಲಯನ್ಸ್ ಇಂಡಸ್ಟ್ರೀಸ್‌ನ್ನು ಮುನ್ನಡೆಸುತ್ತಾರೆ. ಆದ್ರೆ ಈ ಬೃಹತ್‌ ಕಂಪೆನಿಗಳಲ್ಲಿ ಅತೀ ಹೆಚ್ಚು ಸಂಬಳ ಪಡೆಯೋದು ಯಾರು ಗೊತ್ತಾ? ಆ ವ್ಯಕ್ತಿ ಮತ್ಯಾರೂ ಅಲ್ಲ, ಮುಕೇಶ್‌ ಅಂಬಾನಿಯವರ ಮೊದಲ ಬಾಸ್ ಮಗ.

90 ಶತಕೋಟಿಗೂ ಹೆಚ್ಚು ಆಸ್ತಿಯನ್ನು ಹೊಂದಿರುವ ಮುಕೇಶ್ ಅಂಬಾನಿ ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. 15.69 ಟ್ರಿಲಿಯನ್‌ಗಿಂತ ಹೆಚ್ಚಿನ ಮಾರುಕಟ್ಟೆ ಬಂಡವಾಳವನ್ನು ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷರಾಗಿದ್ದಾರೆ.
 

ಮುಕೇಶ್ ಅಂಬಾನಿ ಭಾರತದ ಅತಿದೊಡ್ಡ ಕಂಪನಿಗಳಲ್ಲಿ ಒಂದನ್ನು ಮುನ್ನಡೆಸುತ್ತಿದ್ದರೂ, ಅವರು ತಮ್ಮ ಕೆಲಸಕ್ಕೆ ಪ್ರತ್ಯೇಕ ಸಂಬಳವನ್ನು ತೆಗೆದುಕೊಳ್ಳುತ್ತಾರೆ.

Tap to resize

ಕೋವಿಡ್-19 ಸಾಂಕ್ರಾಮಿಕ ರೋಗದ ಮೊದಲು, ಬಿಲಿಯನೇರ್ ವಾರ್ಷಿಕವಾಗಿ 15 ಕೋಟಿ ರೂಪಾಯಿ ಸಂಬಳವನ್ನು ಪಡೆಯುತ್ತಿದ್ದರು. ಇದನ್ನು ಹೊರತುಪಡಿಸಿ ರಿಲಯನ್ಸ್‌ನ ಅತಿ ಹೆಚ್ಚು ಸಂಬಳ ಪಡೆಯುವ ಉದ್ಯೋಗಿ ಇದಕ್ಕಿಂತ ನಂತರದ ಸ್ಥಾನದಲ್ಲಿದ್ದಾರೆ. 
 

ರಿಲಯನ್ಸ್ ಇಂಡಸ್ಟ್ರೀಸ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯೋಗಿಗಳಾದ ನಿಖಿಲ್ ಮೆಸ್ವಾನಿ ಮತ್ತು ಅವರ ಸಹೋದರ ತಲಾ 24 ಕೋಟಿ ರೂ. ಪಡೆಯುತ್ತಾರೆ. ನಿಖಿಲ್ ಮೇಸ್ವಾನಿ ಪ್ರತಿದಿನ ಸುಮಾರು 13 ಲಕ್ಷ ರೂಪಾಯಿ ಗಳಿಸುತ್ತಾರೆ. ನಿಖಿಲ್ ಮೆಸ್ವಾನಿ ಮುಕೇಶ್ ಅಂಬಾನಿಯ ಮೊದಲ ಬಾಸ್ ರಸಿಕ್ ಬಾಯ್‌ ಮೆಸ್ವಾನಿ ಅವರ ಮಗ.

ಮುಕೇಶ್ ಅಂಬಾನಿಯವರು ತಮ್ಮ ತಂದೆ ಧೀರುಭಾಯಿ ಅಂಬಾನಿಯವರ ಬಿಸಿನೆಸ್ ಸಾಮ್ರಾಜ್ಯವನ್ನು ಮುನ್ನಡೆಸಲು ಆರಂಭಿಸಿದಾಗ ಅವರನ್ನು ರಸಿಕ್‌ಭಾಯ್ ಮೆಸ್ವಾನಿಯವರ ಉಸ್ತುವಾರಿಯಲ್ಲಿ ಇರಿಸಲಾಯಿತು. 

ಮೆಸ್ವಾನಿ ಅವರು ಧೀರೂಭಾಯಿ ಅಂಬಾನಿಯವರ ಹಿರಿಯ ಸಹೋದರಿ ತ್ರಿಲೋಚನಾ ಅವರ ಮಗ ಮತ್ತು ರಿಲಯನ್ಸ್‌ನ ಸಂಸ್ಥಾಪಕ ನಿರ್ದೇಶಕರಲ್ಲಿ ಒಬ್ಬರು. ಹಳೆಯ ಸಂದರ್ಶನವೊಂದರಲ್ಲಿ, ಮುಕೇಶ್ ಅಂಬಾನಿ ನನಗೆ, ರಸಿಕ್‌ಭಾಯ್ ಅವರ ಮೊದಲ ಬಾಸ್ ಎಂದು ಹೇಳಿದರು ಎಂದು ಹೇಳಿದ್ದರು. 

ಇದೀಗ, ರಸಿಕ್‌ಭಾಯ್ ಮೆಸ್ವಾನಿ ಅವರ ಪುತ್ರ ನಿಖಿಲ್ ಮೆಸ್ವಾನಿ ರಿಲಯನ್ಸ್ ಇಂಡಸ್ಟ್ರೀಸ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯೋಗಿಯಾಗಿದ್ದಾರೆ. ಮುಕೇಶ್ ಅಂಬಾನಿ ಅವರಂತೆಯೇ, ಅವರು ಯೋಜನಾ ಅಧಿಕಾರಿಯಾಗಿ ಸೇರಿಕೊಂಡರು. ಅಲ್ಲಿಂದ ಕಾರ್ಯನಿರ್ವಾಹಕ ನಿರ್ದೇಶಕರಾಗುವ ವರೆಗೆ ಕೆಲಸ ಮಾಡಿದರು.1986ರಲ್ಲಿ  ರಿಲಯನ್ಸ್‌ಗೆ ಸೇರಿದರು.

ಜುಲೈ 01, 1988ರಿಂದ ಖಾಯಂ ನಿರ್ದೇಶಕರಾಗಿ ನೇಮಕವಾಗಿದ್ದಾರೆ, ಕಂಪನಿಯ ಮಂಡಳಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಪ್ರಾಥಮಿಕವಾಗಿ ಪೆಟ್ರೋಕೆಮಿಕಲ್ಸ್ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದರು. 

ರಿಲಯನ್ಸ್ ಒಡೆತನದ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್, ಇಂಡಿಯನ್ ಸೂಪರ್ ಲೀಗ್ ಮತ್ತು ಕಂಪನಿಯ ಇತರ ಕ್ರೀಡಾ ಉಪಕ್ರಮಗಳ ವ್ಯವಹಾರಗಳಲ್ಲಿ ರೋಹಿತ್ ಶರ್ಮಾ ನಿಖಿಲ್ ಮೆಸ್ವಾನಿ ಅವರಿಗೆ ವಿಶ್ವಾಸಾರ್ಹ ವ್ಯಕ್ತಿಯಾಗಿದ್ದಾರೆ.

Latest Videos

click me!