ಶಾರ್ಕ್ ಟ್ಯಾಂಕ್ ಇಂಡಿಯಾ 3 ಜಡ್ಜ್ ಕ್ವಾಲಿಫಿಕೇಶನ್ ಏನು?

Published : Mar 28, 2024, 12:28 PM IST

ಭಾರತದ ಜನಪ್ರಿಯ ಸ್ಟಾರ್ಟ್ ಅಪ್ ಗಳಿಗೆ ಬೆಂಬಲ ನೀಡುವಂತಹ ಕಾರ್ಯಕ್ರಮವಾದ ಶಾರ್ಕ್ ಟ್ಯಾಂಕ್ ಇಂಡಿಯಾದಲ್ಲಿ ಒಟ್ಟು 12 ಜನ ಜಡ್ಜ್ ಗಳಿದ್ದು, ಎಲ್ಲರೂ ಬೇರೆ ಬೇರೆ ಕಂಪನಿಗಳ ಸ್ಥಾಪಕರಾಗಿದ್ದಾರೆ. ಈ ತೀರ್ಪುಗಾರರ ವಿದ್ಯಾಭ್ಯಾಸದ ಬಗ್ಗೆ ತಿಳಿಯೋಣ.   

PREV
112
ಶಾರ್ಕ್ ಟ್ಯಾಂಕ್ ಇಂಡಿಯಾ 3 ಜಡ್ಜ್ ಕ್ವಾಲಿಫಿಕೇಶನ್ ಏನು?

ಅಮನ್ ಗುಪ್ತಾ (Aman Gupta)
ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಅಮನ್ ಗುಪ್ತಾ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್‌ನಿಂದ ಫೈನಾನ್ಸ್ ಮತ್ತು ಸ್ಟ್ರಾಟಜಿಯಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಅಮೆರಿಕದ ಕೆಲ್ಲಾಗ್ ಗ್ರಾಜುಯೇಟ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಜನರಲ್ ಮ್ಯಾನೇಜ್ಮೆಂಟ್ ಮತ್ತು ಮಾರ್ಕೆಟಿಂಗ್‌ನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ.

212

ಪಿಯುಷ್ ಬನ್ಸಾಲ್ (Peyush Bansal)
ಪಿಯುಶ್ ಬನ್ಸಾಲ್ ಮೆಕ್ಗಿಲ್ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದವರು. ಅವರು ಐಐಎಂ ಬೆಂಗಳೂರಿನಿಂದ ಎಂಟರ್ ಪ್ರಿನ್ಯುರ್ ಮತ್ತು ಫ್ಯಾಮಿಲಿ ಬ್ಯುಸಿನೆಸ್ ಮ್ಯಾನೇಜ್ ಮೆಂಟ್ ಕೋರ್ಸ್ ಕೂಡ ಮಾಡಿದ್ದಾರೆ. 

312

ರಾಧಿಕಾ ಗುಪ್ತಾ (Radhika Gupta)
ರಾಧಿಕಾ ಗುಪ್ತಾ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್‌ನಲ್ಲಿ ಬಿಎಸ್ಇ ಅಧ್ಯಯನ ಮಾಡಿದರು. ನಂತರ ಅವರು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪ್ರತಿಷ್ಠಿತ ವಾರ್ಟನ್ ಸ್ಕೂಲ್‌ನಿಂದ ಬಿಎಸ್ಸಿ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದ್ದಾರೆ.

412

ವಿನೀತಾ ಸಿಂಗ್ (Vineeta Singh)
ಶುಗರ್ ಕಾಸ್ಮೆಟಿಕ್ಸ್ ಸಹ ಸಂಸ್ಥಾಪಕಿ ವಿನೀತಾ ಸಿಂಗ್ ಐಐಟಿ ಮದ್ರಾಸ್‌ನಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ B.Tech ಮತ್ತು ಐಐಎಂ ಅಹಮದಾಬಾದ್‌ನಿಂದ ಎಂಬಿಎ ಪದವಿ ಪಡೆದಿದ್ದಾರೆ.

512

ನಮಿತಾ ಥಾಪರ್ (Namita Thapar)
ನಮಿತಾ ಥಾಪರ್ ಕೂಡ ಚಾರ್ಟರ್ಡ್ ಅಕೌಂಟೆಂಟ್. ಅವರು ನಾರ್ತ್ ಕೆರೊಲಿನಾದ ಡರ್ಹಾಮ್ ವಿಶ್ವವಿದ್ಯಾಲಯದ ಫುಕ್ವಾ ಸ್ಕೂಲ್ ಆಫ್ ಬಿಸಿನೆಸ್‌ನಿಂದ ಎಂಬಿಎ ಮಾಡಿದರು.

612

ಅನುಪಮ್ ಮಿತ್ತಲ್ (Anupam Mittal)
Shaadi.com ಸ್ಥಾಪಕ ಅನುಪಮ್ ಮಿತ್ತಲ್ ಮ್ಯಾಸಚೂಸೆಟ್ಸ್‌ನ ಬೋಸ್ಟನ್ ಕಾಲೇಜಿನಿಂದ ಆಪರೇಶನ್ ಮತ್ತು ಸ್ಟ್ರಾಟೆಜಿಕ್ ಮ್ಯಾನೇಜ್‌ಮೆಂಟ್‌ನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ.
 

712

ರಿತೇಶ್ ಅಗರ್ವಾಲ್ (Ritesh Agarwal)
ಕಾಲೇಜಿನಿಂದ ಹೊರಬಂದ ನಂತರ, ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ಥೀಲ್ ಫೌಂಡೇಶನ್‌ನಿಂದ ಪ್ರತಿಷ್ಠಿತ ಫೆಲೋಶಿಪ್ ಪಡೆದರು, 100,000 ಡಾಲರ್ ಅನುದಾನವನ್ನು ಪಡೆದ ಮೊದಲ ಏಷ್ಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

812

ದೀಪಿಂದರ್ ಗೋಯಲ್ (Deepinder Goyal)
ಜೊಮಾಟೊ ಸಿಇಒ ದೀಪಿಂದರ್ ಗೋಯಲ್ ಐಐಟಿ ದೆಹಲಿಯಿಂದ ಗಣಿತ ಮತ್ತು ಕಂಪ್ಯೂಟಿಂಗ್‌ನಲ್ಲಿ B.Tech ಪಡೆದಿದ್ದಾರೆ.

912

ಅಮಿತ್ ಜೈನ್ (Amit Jain)
ಕಾರ್ ದೇಖೋ ಸಹ ಸಂಸ್ಥಾಪಕ ಮತ್ತು ಸಿಇಒ ಅಮಿತ್ ಜೈನ್ ಪ್ರತಿಷ್ಠಿತ ಐಐಟಿ ದೆಹಲಿಯಿಂದ B.Tech ಪದವಿ ಪಡೆದಿದ್ದಾರೆ.

1012

ರೋನಿ ಸ್ಕ್ರೂವಾಲಾ (Ronnie Screwvala)
ಅಪ್ ಗ್ರಾಡ್ ನ ಸಹ-ಸಂಸ್ಥಾಪಕ ಮತ್ತು ಅಧ್ಯಕ್ಷ ರೋನಿ ಸ್ಕ್ರೂವಾಲಾ ಅವರು ಸಿಡೆನ್ ಹ್ಯಾಮ್ ಕಾಲೇಜ್ ಆಫ್ ಕಾಮರ್ಸ್ ಅಂಡ್ ಎಕನಾಮಿಕ್ಸ್ ನಿಂದ B.Com ಪದವಿ ಪಡೆದರು.

1112

ಅಜರ್ ಇಕ್ಬಾಲ್ (Azhar Iqubal)
ಸುದ್ದಿ ಪ್ಲಾಟ್ಫಾರ್ಮ್ ಇನ್ ಶಾರ್ಟ್ ಸಹ ಸಂಸ್ಥಾಪಕ ಮತ್ತು ಸಿಇಒ ಅಜರ್ ಇಕ್ಬಾಲ್ ದೆಹಲಿಯ ಐಐಟಿ ಯಲ್ಲಿ ವ್ಯಾಸಂಗ ಮಾಡಿದ್ದು, ಅದನ್ನು ಅರ್ಧದಲ್ಲೇ ಬಿಟ್ಟಿದ್ದರು. 

1212

ವರುಣ್ ದುವಾ (Varun Dua)
ಅಕೊ ಸ್ಥಾಪಕ ಮತ್ತು ಸಿಇಒ ವರುಣ್ ದುವಾ ಅವರು ಮುಂಬೈ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಪದವಿ ಪಡೆದರು ಮತ್ತು ಅಹಮದಾಬಾದ್ನ ಎಂಐಸಿಎಯಿಂದ ಸ್ನಾತಕೋತ್ತರ ಪದವಿ ಪಡೆದರು.
 

Read more Photos on
click me!

Recommended Stories