ಕೇವಲ 5 ದಿನದಲ್ಲಿ ಸಾಲಗಾರ ಅನಿಲ್ ಅಂಬಾನಿ ಕಂಪನಿಯ ಷೇರುಗಳು ಶೇ.13ಕ್ಕಿಂತ ಹೆಚ್ಚು ಏರಿಕೆ!

First Published | Mar 23, 2024, 3:42 PM IST

ಕಳೆದ ಒಂದು ವಾರದಿಂದ ರಿಲಯನ್ಸ್ ಪವರ್ ಷೇರುಗಳು ಏರುಗತಿಯಲ್ಲಿವೆ. 13ನೇ ಮಾರ್ಚ್ 2024 ರಂದು ಪ್ರತಿ ಮಟ್ಟದಲ್ಲಿ ಸುಮಾರು  20ರೂ ರಷ್ಟಿದ್ದ ನಂತರ, ಕಳೆದ ವಾರ ಶುಕ್ರವಾರ ರಿಲಯನ್ಸ್ ಪವರ್ ಷೇರಿನ ಬೆಲೆ ಪ್ರತಿ ಷೇರಿನ ಮಟ್ಟಕ್ಕೆ  26.30ಕ್ಕೆ ಏರಿದೆ

ಬಿಲಿಯನೇರ್ ಮುಖೇಶ್ ಅಂಬಾನಿ ಅವರ ಸಹೋದರ ಅನಿಲ್ ಅಂಬಾನಿ ಸಾಲದ ಸುಳಿಗೆ ಸಿಲುಕಿ ದಿವಾಳಿಯಾಗಿದ್ದಾರೆ. ಆದರೂ, ಅವರ ಒಂದು ಕಂಪನಿಯು ಇತ್ತೀಚೆಗೆ ಮೂರು ಬ್ಯಾಂಕ್‌ಗಳಿಗೆ ನೀಡಬೇಕಾದ ಸಾಲಗಳನ್ನು ನೀಡಿ ಇತ್ಯರ್ಥಪಡಿಸಿದೆ ಎಂದು ವರದಿಗಳು ತಿಳಿಸಿದೆ. ಅವೆಂದರೆ ICICI ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು DBS ಬ್ಯಾಂಕ್. ಈ ಸುದ್ದಿಯ ಬಳಿಕ  ಕಳೆದ ಐದು ದಿನಗಳಲ್ಲಿ ರಿಲಯನ್ಸ್ ಪವರ್ ಷೇರುಗಳು ಶೇಕಡಾ 13.36 ರಷ್ಟು ಏರಿಕೆ ಕಂಡಿದೆ. 

ಶುಕ್ರವಾರ, ಕಂಪನಿಯ ಷೇರಿನ ಬೆಲೆ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ (ಎನ್‌ಎಸ್‌ಇ) ಶೇಕಡ 5 ರಷ್ಟು ಏರಿಕೆಯೊಂದಿಗೆ 26.30 ರೂ. ತಲುಪಿದೆ. ಮತ್ತೊಂದು ಕಡೆ  ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಕಂಪೆನಿಯು ಜೆಸಿ ಫ್ಲವರ್ಸ್ ಅಸೆಟ್ ರೀಕನ್ಸ್ಟ್ರಕ್ಷನ್ ಕಂಪನಿಗೆ 2,100 ಕೋಟಿ ರೂ. ಸಾಲ ಚುಪ್ತಾ ಮಾಡಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
 

Tap to resize

ರಿಲಯನ್ಸ್ ಪವರ್ ಷೇರುಗಳು ಗಗನಕ್ಕೇರುತ್ತಿವೆ. ಈಗ ಐಡಿಬಿಐ ಬ್ಯಾಂಕ್‌ನಿಂದ  ಕೇವಲ ವರ್ಕಿಂಗ್ ಕ್ಯಾಪಿಟಲ್ ಸಾಲ ಮಾತ್ರ ಉಳಿದಿದೆ. ಭವಿಷ್ಯದಲ್ಲಿ ರಿಲಯನ್ಸ್ ಪವರ್ ಷೇರಿನ ಬೆಲೆಯು ಪ್ರತಿ ಷೇರಿನ ಮಟ್ಟಕ್ಕೆ  34 ರೂ ನಷ್ಟು  ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. 

ರಿಲಯನ್ಸ್ ಪವರ್ ಲಿಮಿಟೆಡ್ ಒಂದು ಭಾಗವಾಗಿರುವ ರಿಲಯನ್ಸ್ ಅನಿಲ್ ಧೀರೂಭಾಯಿ ಅಂಬಾನಿ ಸಮೂಹದಲ್ಲಿದೆ  . ಭಾರತೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ವಿದ್ಯುತ್ ಯೋಜನೆಗಳನ್ನು ಅಭಿವೃದ್ಧಿಪಡಿಸಲು, ನಿರ್ಮಿಸಲು, ನಿರ್ವಹಿಸಲು ಮತ್ತು ಕಾರ್ಯನಿರ್ವಹಣೆ ಮಾಡಲು ಕಂಪನಿಯನ್ನು ಸ್ಥಾಪಿಸಲಾಗಿದೆ.

ಅನಿಲ್ ಅಂಬಾನಿ ಒಂದು ಕಾಲದಲ್ಲಿ ವಿಶ್ವದ ಆರನೇ ಶ್ರೀಮಂತ ವ್ಯಕ್ತಿಯಾಗಿದ್ದರು. ಆದರೆ ಅವರು 2020 ರಲ್ಲಿ ಯುಕೆ ನ್ಯಾಯಾಲಯದ ಮುಂದೆ ತಮ್ಮ ನಿವ್ವಳ ಮೌಲ್ಯ ಶೂನ್ಯವಾಗಿದೆ ಮತ್ತು  ದಿವಾಳಿಯಾಗಿದ್ದೇನೆ ಎಂದು ಘೋಷಿಸಿದರು. ವರದಿ ಪ್ರಕಾರ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಪವರ್ ಪ್ರಸಕ್ತ ಹಣಕಾಸು ವರ್ಷದಲ್ಲಿ ಸಾಲ ಮುಕ್ತವಾಗಲು ಗುರಿ ಹೊಂದಿದೆ.

Latest Videos

click me!