ಆಸ್ತಿಗಾಗಿ 9ವರ್ಷ ಅಪ್ಪನನ್ನೇ ಬೀದಿಲಿಟ್ಟ ರೇಮಂಡ್‌ ಮುಖ್ಯಸ್ಥನಿಗೆ ಹೆಂಡತಿ ಬಿಟ್ಟು ಹೋದ ಮೇಲೆ ತಂದೆ ಬೇಕಾಯ್ತು!

First Published | Mar 24, 2024, 4:56 PM IST

ದೇಶದ ಅತ್ಯಂತ ಹಳೆಯ ವ್ಯಾಪಾರ ಕುಟುಂಬಗಳಲ್ಲಿ ಪ್ರಮುಖರು ಎನಿಸಿರುವ ರೇಮಂಡ್ ಗ್ರೂಪ್‌ನ ಸಿಂಘಾನಿಯಾ ಕುಟುಂಬವು ತನ್ನ ವ್ಯಾಪಾರ ಉದ್ಯಮಗಳಿಗಾಗಿ ಹೆಚ್ಚಾಗಿ ಪ್ರಚಾರದಲ್ಲಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಕೌಟುಂಬಿಕ ಕಲಹಗಳಿಂದಲೂ ಸುದ್ದಿಯಾಗಿತ್ತು. ಇದೀಗ ತಂದೆ ಮಗ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಈ ಹಿಂದೆ ಅಂಬಾನಿಗಿಂತಲೂ ಶ್ರೀಮಂತ ವ್ಯಕ್ತಿಯಾಗಿದ್ದ ರೇಮಂಡ್ಸ್  ಮಾಜಿ ಅಧ್ಯಕ್ಷ ವಿಜಯಪತ್ ಸಿಂಘಾನಿಯಾ ಮತ್ತು ಈಗ ರೇಮಂಡ್ ಕಂಪನಿಯ ಎಂಡಿ ಆಗಿರುವ ಪುತ್ರ ಗೌತಮ್ ಸಿಂಘಾನಿಯಾ ನಡುವಿನ ಭಿನ್ನಾಭಿಪ್ರಾಯ, ಇದರ ಜೊತೆಗೆ  ಗೌತಮ್ ಪತ್ನಿ ನವಾಜ್ ಮೋದಿಯೊಂದಿಗಿನ ವಿಚ್ಛೇದನ ಪ್ರಕ್ರಿಯೆ ವಿವಾದಗಳಿಂದ ಇತ್ತೀಚೆಗೆ ದೇಶ ಮಟ್ಟದಲ್ಲಿ  ಸುದ್ದಿಯಾಗಿತ್ತು.

ಇದೀಗ ಕೌಟುಂಬಿಕ ಕಲಹದ ಬಳಿಕ ಗೌತಮ್ ಸಿಂಘಾನಿಯಾ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಚಿತ್ರವನ್ನು ಹಂಚಿಕೊಂಡಿದ್ದಾರೆ, ಸುಮಾರು ಒಂಬತ್ತು ವರ್ಷಗಳ ನಂತರ  ತಮ್ಮ ತಂದೆಯೊಂದಿಗೆ ಕಾಣಿಸಿಕೊಂಡಿದ್ದಾರೆ.  ಆಶ್ಚರ್ಯವೆಂದರೆ ಕಳೆದ ಒಂದು ದಶಕದಲ್ಲಿ, ತಂದೆ ಮತ್ತು ಮಗನ ನಡುವೆ ಮಾತುಕತೆಯೇ ಇರಲಿಲ್ಲ ಎಂಬುದು ಗಮನಾರ್ಹ ಸಂಗತಿ.

Tap to resize

ರೇಮಂಡ್ ಗ್ರೂಪ್‌ನ ಅಡಿಪಾಯವನ್ನು 1925 ರಲ್ಲಿ ಜವಳಿ ಗಿರಣಿಯಾಗಿ ಹಾಕಲಾಯಿತು, ಕಂಬಳಿಗಳು ಮತ್ತು ಮಿಲಿಟರಿ ಸಮವಸ್ತ್ರಗಳನ್ನು ಉತ್ಪಾದಿಸಲಾಯಿತು. ನಂತರ 1940 ರಲ್ಲಿ ಕೈಲಾಸಪತ್ ಸಿಂಘಾನಿಯಾರಿಂದ ರೇಮಂಡ್ ಎಂದು ಮರುನಾಮಕರಣ ಮಾಡಲಾಯಿತು. ಸಿಂಘಾನಿಯಾ ಕುಟುಂಬವು ಚುಕ್ಕಾಣಿ ಹಿಡಿದಿದ್ದರಿಂದ,  ಗಿರಣಿಯಲ್ಲಿನ ಬಟ್ಟೆಯತ್ತ ಬದಲಾಯಿತು ಮತ್ತು ಅದು ಖ್ಯಾತಿಯನ್ನು ಗಳಿಸಿದಂತೆ, ವ್ಯಾಪಾರವು ವಿಸ್ತರಿಸಿತು. 

ಮೊದಲ ರೇಮಂಡ್ ಶೋರೂಮ್ ಅನ್ನು 1958 ರಲ್ಲಿ ಮುಂಬೈನಲ್ಲಿ ತೆರೆಯಲಾಯಿತು, ಇದು ಅಗಾಧ ಪ್ರತಿಕ್ರಿಯೆಯನ್ನು ಪಡೆಯಿತು. ತರುವಾಯ, ಸಿಂಘಾನಿಯಾ ಕುಟುಂಬವು ವಿದೇಶದಿಂದ ಯಂತ್ರೋಪಕರಣಗಳನ್ನು ಆಮದು ಮಾಡಿಕೊಂಡಿತು, ಉತ್ಪಾದನೆ ಮತ್ತು ವ್ಯಾಪಾರವನ್ನು ಹೆಚ್ಚಿಸಿತು. 1980 ರಲ್ಲಿ, ಕೈಲಾಸಪತ್ ಸಿಂಘಾನಿಯಾ ತನ್ನ ಸೋದರಳಿಯ ವಿಜಯಪತ್ ಸಿಂಘಾನಿಯಾಗೆ ಗುಂಪಿನ ಅಧಿಕಾರವನ್ನು ಹಸ್ತಾಂತರಿಸಿದರು. 

ಇದಾದ ನಂತರ ಅವರು ಹೊಸ ಆಲೋಚನೆಗಳು ಮತ್ತು ಉತ್ಪನ್ನಗಳ ಮೇಲೆ ಕೆಲಸ ಮಾಡಿದರು, ರೇಮಂಡ್ ಅನ್ನು ಜಾಗತಿಕವಾಗಿ ಗುರುತಿಸಲ್ಪಟ್ಟ ಬ್ರ್ಯಾಂಡ್ ಆಗಿ ಮಾಡಿದರು. ಕ್ರಮೇಣ, ರೇಮಂಡ್ ಭಾರತದಲ್ಲಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಮನ್ನಣೆ ಗಳಿಸಿದರು ಮತ್ತು ವಿಜಯಪತ್ ಸಿಂಘಾನಿಯಾ ದೇಶದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದರು.  
 

2015 ರ ನಂತರ ವಿಜಯಪತ್ ಸಿಂಘಾನಿಯಾ ಜೀವನವು ವಿಭಿನ್ನ ತಿರುವು ಪಡೆಯಿತು. ವಿಜಯಪತ್ ಸಿಂಘಾನಿಯಾ ಅವರು 2015 ರಲ್ಲಿ ರೇಮಂಡ್ ಗ್ರೂಪ್‌ನ ಅಧಿಕಾರವನ್ನು ತಮ್ಮ ಮಗ ಗೌತಮ್ ಸಿಂಘಾನಿಯಾಗೆ ಹಸ್ತಾಂತರಿಸುವುದಾಗಿ ಘೋಷಿಸುವವರೆಗೂ ಎಲ್ಲವೂ ಸುಗಮವಾಗಿ ನಡೆಯುತ್ತಿತ್ತು. ಅಲ್ಲಿಂದ ಅವರ ಬದುಕು ಬದಲಾಯಿತು. ತಂದೆ ಮತ್ತು ಮಗನ ನಡುವಿನ ಆಸ್ತಿ ವಿವಾದಗಳು ಬೀದಿಗೆ ಬಂತು. ಇದು 2017 ರಲ್ಲಿ ಸಾರ್ವಜನಿಕ ವಾಗ್ವಾದದಲ್ಲಿ ಕೊನೆಗೊಂಡಿತು. 
 

ವಿಜಯಪತ್ ಸಿಂಘಾನಿಯಾ ಅವರು ಗೌತಮ್ ಸಿಂಘಾನಿಯಾ ಅವರನ್ನು ದಕ್ಷಿಣ ಮುಂಬೈನ ಜೆಕೆ ಹೌಸ್‌ನಿಂದ ಕೌಟುಂಬಿಕ ವಿವಾದಗಳ ಕಾರಣದಿಂದ ಹೊರ ಹಾಕಿದರು. ಪತ್ನಿ ಕೂಡ ಅದಾಗಲೇ ಮೃತಪಟ್ಟಿದ್ದು, ಒಬ್ಬಂಟಿಯಾಗಿ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದರು. ವಿಜಯಪತ್ ಸಿಂಘಾನಿಯಾ ಅವರು ತಮ್ಮ ಮಗನಿಗೆ ಎಲ್ಲವನ್ನೂ ನೀಡುವ ಮೂಲಕ ದೊಡ್ಡ ತಪ್ಪು ಮಾಡಿದ್ದೇನೆ ಎಂದು ಹಲವಾರು ಬಾರಿ  ಹೇಳಿಕೊಂಡಿದ್ದರು. ಗೌತಮ್ ಸಿಂಘಾನಿಯಾ ಮತ್ತು ಪತ್ನಿ ನವಾಜ್ ಮೋದಿ ನಡುವೆ ವಿಚ್ಛೇದನ ಪ್ರಕ್ರಿಯೆಗಳು ನಡೆಯುತ್ತಿರುವಾಗ, ವಿಜಯಪತ್ ಸಿಂಘಾನಿಯಾ ಬಹಿರಂಗವಾಗಿ ಸೊಸೆಯ ಪರವಾಗಿ ನಿಂತರು. ಗೌತಮ್ ಸಿಂಘಾನಿಯಾ  ತನ್ನನ್ನು ನಿಯಂತ್ರಣದಲ್ಲಿ ಇಡುತ್ತಾನೆ. ಆವರು ಸೊಕ್ಕಿನವರು ಎಂದು ನವಾಜ್ ಮೋದಿ ಆರೋಪಿಸಿದರು. 

ವಿಜಯಪತ್ ಸಿಂಘಾನಿಯಾ ಒಮ್ಮೆ ಬ್ಯುಸಿನೆಸ್ ಟುಡೇಗೆ  ಜೊತೆಗೆ ಮಾತನಾಡುತ್ತಾ ನನಗೆ ಯಾವುದೇ ವ್ಯವಹಾರವಿಲ್ಲ. ಗೌತಮ್  ನನಗೆ ಕಂಪನಿಯ ಕೆಲವು ಭಾಗಗಳನ್ನು ನೀಡಲು ಒಪ್ಪಿಕೊಂಡಿದ್ದ ಆದರೆ ಬಳಿಕ ಕೊಡದೆ ಮೋಸ ಮಾಡಿದ. ಹಾಗಾಗಿ, ನನ್ನ ಬಳಿ ಏನೂ ಇಲ್ಲ. ನಾನು ಅವನಿಗೆ ಎಲ್ಲವನ್ನೂ ಕೊಟ್ಟೆ. ಅಪ್ಪಿತಪ್ಪಿ ನನ್ನ ಬಳಿ ಸ್ವಲ್ಪ ಹಣ ಉಳಿದುಕೊಂಡಿದ್ದು, ಇಂದು ಅದರಿಂದ ಬದುಕುತ್ತಿದ್ದೇನೆ. ಇಲ್ಲದಿದ್ದರೆ, ನಾನು ರಸ್ತೆಯಲ್ಲಿರುತ್ತಿದ್ದೆ ಎಂದಿದ್ದರು.

ಮಾರ್ಚ್ 20 ರಂದು, ಗೌತಮ್ ಸಿಂಘಾನಿಯಾ  ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ  ತಂದೆ ಜೊತೆಗಿರುವ ಚಿತ್ರವನ್ನು ಹಂಚಿಕೊಂಡು  "ನನ್ನ ತಂದೆ ಇಂದು ಮನೆಯಲ್ಲಿರಲು ಮತ್ತು ಅವರ ಆಶೀರ್ವಾದವನ್ನು ಪಡೆಯಲು ಸಂತೋಷವಾಗಿದೆ. ಅಪ್ಪಾ ನಿಮಗೆ ಯಾವಾಗಲೂ ಆರೋಗ್ಯವಾಗಿರಲಿ" ಎಂದು ಶೀರ್ಷಿಕೆ ನೀಡಿದ್ದಾರೆ. ಇದಕ್ಕೆ ಕೆಲವರು ಹೆಂಡತಿ ದೂರಾಗಿ ಒಬ್ಬಂಟಿಯಾದ ಬಳಿಕ ಅಪ್ಪನ ಬೆಲೆ ಗೊತ್ತಾಗಿದೆ ಎಂದು ಕಮೆಂಟ್‌ ಮಾಡಿದ್ದಾರೆ.

Latest Videos

click me!