ಜಿಡಿಪಿ ಪ್ರಗತಿ ದರದಲ್ಲಿ ಚೀನಾ ಹಿಂದಿಕ್ಕಿದ ಭಾರತ: ಷೇರು ಮಾರುಕಟ್ಟೆಯಲ್ಲಿ ಗೂಳಿಯ ಅಬ್ಬರ, ನಿಫ್ಟಿ ಹೊಸ ದಾಖಲೆ!

Published : Dec 01, 2023, 05:20 PM IST

ಭಾರತೀಯ ಆರ್ಥಿಕತೆಯು 7.6% ರಷ್ಟು ಬೆಳವಣಿಗೆಯಾಗಿದ್ದು, ಇದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಂದಾಜು 6.5% ಅನ್ನು ಮೀರಿಸಿದೆ. ಈ ಬೆಳವಣಿಗೆಯು ಮುಖ್ಯವಾಗಿ ಉತ್ಪಾದನಾ ವಲಯದಿಂದ ಆಗಿದೆ.

PREV
110
ಜಿಡಿಪಿ ಪ್ರಗತಿ ದರದಲ್ಲಿ ಚೀನಾ ಹಿಂದಿಕ್ಕಿದ ಭಾರತ: ಷೇರು ಮಾರುಕಟ್ಟೆಯಲ್ಲಿ ಗೂಳಿಯ ಅಬ್ಬರ, ನಿಫ್ಟಿ ಹೊಸ ದಾಖಲೆ!

ಭಾರತದ ರಾಷ್ಟ್ರೀಯ ಸ್ಟಾಕ್ ಎಕ್ಸ್‌ಚೇಂಜ್‌ನ ಬೆಂಚ್‌ಮಾರ್ಕ್ ಸೂಚ್ಯಂಕವಾದ ನಿಫ್ಟಿ 50 ಶುಕ್ರವಾರ ಹೊಸ ದಾಖಲೆಯ ಗರಿಷ್ಠ ಮಟ್ಟ ತಲುಪಿದೆ. ಆರಂಭಿಕ ವಹಿವಾಟಿನಲ್ಲಿ 20,258.45 ತಲುಪಿ ದಾಖಲೆ ಬರೆದಿದೆ. ದಿನದಾಂತ್ಯದಲ್ಲಿ 20,267.90 ಸೂಚ್ಯಂಕ ತಲುಪಿದ್ದು, ಮತ್ತೆ ಹೊಸ ದಾಖಲೆಯಾಗಿದೆ. 

210

ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ನಿರೀಕ್ಷಿತಕ್ಕಿಂತ ವೇಗವಾಗಿ ಭಾರತದ ಜಿಡಿಪಿ ಬೆಳವಣಿಗೆಗೆ ಸೂಚ್ಯಂಕದಲ್ಲಿನ ಈ ಏರಿಕೆ ಕಾರಣವಾಗಿದೆ.

310

ಭಾರತೀಯ ಆರ್ಥಿಕತೆಯು 7.6% ರಷ್ಟು ಬೆಳವಣಿಗೆಯಾಗಿದ್ದು, ಇದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಂದಾಜು 6.5% ಅನ್ನು ಮೀರಿಸಿದೆ. ಈ ಬೆಳವಣಿಗೆಯು ಮುಖ್ಯವಾಗಿ ಉತ್ಪಾದನಾ ವಲಯದಿಂದ ನಡೆಸಲ್ಪಟ್ಟಿದೆ.

410

ಈ ಹಿನ್ನೆಲೆ ಧನಾತ್ಮಕ ಆರ್ಥಿಕ ಬೆಳವಣಿಗೆಯು ಜಾಗತಿಕ ಬಡ್ಡಿದರದ ದೃಷ್ಟಿಕೋನದ ಬಗ್ಗೆ ಆಶಾವಾದವನ್ನು ಹೆಚ್ಚಿಸಿದೆ ಎಂದೂ ವರದಿಯಾಗಿದೆ.

510

ಹೆಚ್ಚುವರಿಯಾಗಿ, ಪಂಚ ರಾಜ್ಯಗಳ ಎಕ್ಸಿಟ್ ಪೋಲ್‌ಗಳ ಫಲಿತಾಂಶಗಳು ರಾಜಕೀಯ ಸ್ಥಿರತೆಯ ಹೆಚ್ಚಿನ ಸಾಧ್ಯತೆಯನ್ನು ಸೂಚಿಸುತ್ತವೆ, ಇದು ಮಾರುಕಟ್ಟೆಯಲ್ಲಿ ಧನಾತ್ಮಕ ಭಾವನೆಗೆ ಮತ್ತಷ್ಟು ಕೊಡುಗೆ ನೀಡುತ್ತದೆ ಎಂದೂ ತಿಳಿದುಬಂದಿದೆ.

610

ಹೆಚ್ಚುವರಿಯಾಗಿ, ಮತ್ತೊಂದು ಪ್ರಮುಖ ಸೂಚ್ಯಂಕವಾದ ಬಿಎಸ್‌ಇ ಸೆನ್ಸೆಕ್ಸ್ ಸಹ 492 ಪಾಯಿಂಟ್‌ಗಳ ಏರಿಕೆ ಕಂಡು 67,481ಕ್ಕೆ ಹೆಚ್ಚಾಗಿದೆ. ನಿಫ್ಟಿ 50 ಬೆಳಗಿನ ಅವಧಿಯಲ್ಲಿ 0.6% ಅಥವಾ 120 ಅಂಕಗಳಿಗಿಂತ ಹೆಚ್ಚು ಏರಿಕೆ ಕಂಡು 20,250 ಅಂಕಗಳನ್ನು ಮೀರಿದ್ದರೆ, ಅಂತಮವಾಗಿ 20,267 ಪಾಯಿಂಟ್‌ ಪಡೆದಿದೆ. 
 

710

ವೈಯಕ್ತಿಕ ಷೇರುಗಳ ವಿಷಯದಲ್ಲಿ, ವಿಪ್ರೋ, ಟೈಟಾನ್, ಎಚ್‌ಸಿಎಲ್ ಟೆಕ್ ಮತ್ತು ಇನ್ಫೋಸಿಸ್ ಹೊರತುಪಡಿಸಿ ಉಳಿದ ಎಲ್ಲಾ ಸೆನ್ಸೆಕ್ಸ್ ಷೇರುಗಳ ಮೌಲ್ಯ ಹೆಚ್ಚಾಗಿದೆ. ವಲಯದ ಮುಂಭಾಗದಲ್ಲಿ, ನಿಫ್ಟಿ ರಿಯಾಲ್ಟಿ 2% ಕ್ಕಿಂತ ಹೆಚ್ಚಾಗಿದ್ದರೆ, ನಿಫ್ಟಿ PSU ಬ್ಯಾಂಕ್ 0.75% ರಷ್ಟು ಏರಿತು. ನಿಫ್ಟಿ ಆಟೋ, ಫೈನಾನ್ಷಿಯಲ್, ಎಫ್‌ಎಂಸಿಜಿ, ಮೀಡಿಯಾ, ಮೆಟಲ್ ಮತ್ತು ಫಾರ್ಮಾದಂತಹ ಇತರ ವಲಯಗಳು ಆರಂಭಿಕ ವಹಿವಾಟಿನಲ್ಲಿ ಏರಿಕೆ ಕಂಡಿತ್ತು..
 

810

ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 7.6% ಜಿಡಿಪಿ ಬೆಳವಣಿಗೆ ದರ ಮತ್ತು ರಾಜಕೀಯ ಸ್ಥಿರತೆಯನ್ನು ಸೂಚಿಸುವ ಎಕ್ಸಿಟ್ ಪೋಲ್ ಫಲಿತಾಂಶಗಳು ಮಾರುಕಟ್ಟೆಯಲ್ಲಿ ಗೂಳಿಯ ಓಟವನ್ನು ಹೆಚ್ಚಿಸಿದೆ ಎಂದು ಹೂಡಿಕೆ ತಂತ್ರಜ್ಞರು ವಿಶ್ಲೇಷಣೆ ಮಾಡಿದ್ದಾರೆ. 

910

ವಿದೇಶಿ ಹೂಡಿಕೆಗೆ ಸಂಬಂಧಿಸಿದಂತೆ, ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಗುರುವಾರ 8,147.8 ಕೋಟಿ ರೂಪಾಯಿ ಮೌಲ್ಯದ ಭಾರತೀಯ ಷೇರುಗಳನ್ನು ಖರೀದಿಸಿದರೆ, ದೇಶೀಯ ಸಾಂಸ್ಥಿಕ ಹೂಡಿಕೆದಾರರು 780.3 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.  

1010

ತೈಲ ಬೆಲೆಗಳು ಇಳಿಕೆಯಾಗುತ್ತಲೇ ಇದ್ದು, ಸತತ ಆರನೇ ವಾರವೂ ನಷ್ಟದತ್ತ ಸಾಗಿದೆ. ಸ್ವಯಂಪ್ರೇರಿತ ತೈಲ ಉತ್ಪಾದನೆಯ ಕಡಿತವು ಮಾರುಕಟ್ಟೆಯ ನಿರೀಕ್ಷೆಗಳಿಗಿಂತ ಕಡಿಮೆಯಾಗಿದ್ದು ಇದರಿಂದಾಗಿ ಫೆಬ್ರವರಿಯಲ್ಲಿ ಬ್ರೆಂಟ್ ತೈಲ ದರ ಬ್ಯಾರೆಲ್‌ಗೆ $80.47 ಕ್ಕೆ ಇಳಿಯಿತು. 

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories