ಮುಕೇಶ್ ಅಂಬಾನಿ ದೇಶದ ಅತಿ ಶ್ರೀಮಂತ ವ್ಯಕ್ತಿ. ಸಾವಿರಾರು ಕೋಟಿ ರೂಪಾಯಿ ವ್ಯವಹಾರ ನಡೆಸುವ ಮುಕೇಶ್ ಅಂಬಾನಿ ಹಲವು ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾದರೆ ಅಂಬಾನಿ 1 ನಿಮಿಷದಲ್ಲಿ ಗಳಿಸುವ ಆದಾಯವೆಷ್ಟು? ಒಂದು ದಿನ, ಅಂಬಾನಿ ಎಷ್ಟು ಹಣ ಸಂಪಾದಿಸುತ್ತಾರೆ?
ಭಾರತದ ಅತಿ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ನ ಅಧ್ಯಕ್ಷರು. ರಿಲಯನ್ಸ್ ಇಂಡಸ್ಟ್ರೀ ವಿಶ್ವದಲ್ಲೇ ಅತೀ ದೊಡ್ಡ ಕಂಪನಿಗಳಲ್ಲಿ ಒಂದಾಗಿದೆ. ಏಪ್ರಿಲ್ 2025ರ ವೇಳೆಗೆ ಅವರ ಆಸ್ತಿ $96.7 ಶತಕೋಟಿ ಅಂದರೆ 8 ಲಕ್ಷ ಕೋಟಿಗೂ ಹೆಚ್ಚು. ಅವರು ವಿಶ್ವದ 12ನೇ ಶ್ರೀಮಂತ ವ್ಯಕ್ತಿ. ಏಷ್ಯಾದ ಶ್ರೀಮಂತ ವ್ಯಕ್ತಿ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಭಾರತದಲ್ಲಿ ಹಲವು ಕ್ಷೇತ್ರದಲ್ಲಿ ರಿಲಯನ್ಸ್ ಪಾರುಪತ್ಯ ಸಾಧಿಸಿದ್ದಾರೆ.
25
ಅಂಬಾನಿ ದಿನಕ್ಕೆ ಎಷ್ಟು ಸಂಪಾದಿಸುತ್ತಾರೆ?
ಮುಕೇಶ್ ಅಂಬಾನಿ ದಿನಕ್ಕೆ ಸುಮಾರು 163 ಕೋಟಿ ರೂ. ಸಂಪಾದಿಸುತ್ತಾರೆ. ಇದರರ್ಥ ಪ್ರತಿ ಗಂಟೆಗೆ 6.79 ಕೋಟಿ ಮತ್ತು ಪ್ರತಿ ನಿಮಿಷಕ್ಕೆ ಸುಮಾರು 11.3 ಲಕ್ಷ ರೂಪಾಯಿ ಗಳಿಸುತ್ತಾರೆ. ಇದೀಗ ಅಂಬಾನಿಯ ಪ್ರತಿ ಸೆಕೆಂಡ್ ಎಷ್ಟು ಮುಖ್ಯ ಅನ್ನೋದು ಗಮನಿಸಬಹುದು. ಇದೇ ಕಾರಣದಿಂದ ಮುಕೇಶ್ ಅಂಬಾನಿ ಶ್ರೀಮಂತ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.
35
ಮುುಕೇಶ್ ಅಂಬಾನಿ ತಮ್ಮ 1 ನಿಮಿಷದ ಗಳಿಕೆಯಲ್ಲಿ ಏನೆಲ್ಲಾ ಖರೀದಿಸಬಹುದು.
ಅಂಬಾನಿ ಒಂದು ದಿನಕ್ಕೆ 163 ಕೋಟಿ ರೂ. ಗಳಿಸುತ್ತಾರೆ. ಇದರಲ್ಲಿ 3-4 ಪ್ರೈವೇಟ್ ಜೆಟ್, ಒಂದು ಸಣ್ಣ ದ್ವೀಪ, ಮುಂಬೈನಲ್ಲಿ ಒಂದು ಅಪಾರ್ಟ್ಮೆಂಟ್ ಟವರ್, ಹಲವು ಐಷಾರಾಮಿ ಕಾರುಗಳನ್ನು ಖರೀದಿಸಬಹುದು. ಮುಕೇಶ್ ಅಂಬಾನಿ ಹೊಸ ಉದ್ಯಮ ಆರಂಭಿಸುತ್ತಿದ್ದರ, ಅಥವಾ ಉದ್ಯಮ ವಿಸ್ತರಿಸುತ್ತಿದ್ದರೆ ಹೂಡಿಕೆ ಸಾವಿರಾರು ಕೋಟಿ ರೂಪಾಯಿ. ಭಾರಿ ತಯಾರಿಯೊಂದಿಗೆ ಉದ್ಯಮ ವಿಸ್ತರಣೆ ಅಥವಾ ಆರಂಭ ಮಾಡುತ್ತಾರೆ. ಇದರಿಂದ ಯಶಸ್ಸು ಸಾಧಿಸುತ್ತಾರೆ.
55
ಅಂಬಾನಿ ಐಷಾರಾಮಿ ಜೀವನ
ಮುಂಬೈನಲ್ಲಿರುವ ಅಂಬಾನಿ ಮನೆ 'ಆಂಟಿಲಿಯಾ' ತುಂಬಾ ಐಷಾರಾಮಿ. ಇದರ ಬೆಲೆ ಸುಮಾರು 15,000 ಕೋಟಿ ರೂ. ಇದರಲ್ಲಿ 49 ಕೊಠಡಿಗಳು, ದೇವಸ್ಥಾನ, ಈಜುಕೊಳ, ಜಿಮ್, ಸ್ಪಾ, ಥಿಯೇಟರ್ ಮತ್ತು ಹಿಮಪಾತ ಕೊಠಡಿ ಇದೆ. ಇನ್ನು ಆ್ಯಂಟಿಲಿಯಾದ ಒಂದು ಮಹಡಿ ಸಂಪೂರ್ಣ ಅಂಬಾನಿಯ ಐಷಾರಾಮಿ ಕಾರುಗಳನ್ನು ಪಾರ್ಕ್ ಮಾಡಲು ಮೀಸಲಿಡಲಾಗಿದೆ.