EPFO Interest: ನಿವೃತ್ತಿ ವೇಳೆ 2.5 ಕೋಟಿ ರೂಪಾಯಿ ಬೇಕಾ? ಹಾಗಿದ್ರೆ ಪ್ರತಿ ತಿಂಗಳು ಸ್ಯಾಲರಿಯಲ್ಲ ಇಷ್ಟು ಮೊತ್ತ ಕಟ್‌ ಆಗ್ಬೇಕು!

First Published | Aug 7, 2024, 8:16 PM IST

retirement corpus enough only Low EPFO ಕಾರ್ಮಿಕರ ಭವಿಷ್ಯ ನಿಧಿ ಯೋಜನೆ ಅಥವಾ ಇಪಿಎಫ್‌ ಪ್ರೋಗ್ರಾಮ್‌ ತನ್ನ ಸದಸ್ಯನಿಗೆ 58 ವರ್ಷ ಮುಟ್ಟಿದ ಬಳಿಕ ಪಿಂಚಣಿಯನ್ನು ಪಾವತಿ ಮಾಡುತ್ತದೆ.  EPFO ​​ವ್ಯವಸ್ಥೆಯಡಿಯಲ್ಲಿ ಆರಂಭಿಕ ಪಿಂಚಣಿ ಪಡೆಯಲು ಸದಸ್ಯನಿಗೆ ಕನಿಷ್ಠ 50 ವರ್ಷ ವಯಸ್ಸಾಗಿರಬೇಕು. ಸಾಮಾನ್ಯ ಪಿಂಚಣಿಗೆ, ವಯಸ್ಸು 58 ಆಗಿರಬೇಕು.
 

ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಸಂಬಳ ಪಡೆಯುವ ಉದ್ಯೋಗಿಗಳಿಗೆ ಸರ್ಕಾರಿ ಬೆಂಬಲಿತ ಉಳಿತಾಯ ಯೋಜನೆಯಾಗಿದೆ. ಉದ್ಯೋಗಿಗಳು ಮತ್ತು ಅವರ ಉದ್ಯೋಗದಾತರು ಪ್ರತಿ ತಿಂಗಳು ಈ ಯೋಜನೆಗೆ ಕೊಡುಗೆ ನೀಡುತ್ತಾರೆ.
 


ಪ್ರತಿ ವರ್ಷ, ಇಪಿಎಫ್‌ಗೆ ಬಡ್ಡಿದರವನ್ನು ಸರ್ಕಾರವೇ ನಿರ್ಧಾರ ಮಾಡುತ್ತದೆ.  ಪ್ರಸ್ತುತ, EPFO ​​ವಾರ್ಷಿಕವಾಗಿ 8.25 ಶೇಕಡಾ ಬಡ್ಡಿಯನ್ನು ನೀಡುತ್ತಿದೆ.
 

Latest Videos



ಇಪಿಎಫ್ ಆರ್ಥಿಕವಾಗಿ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುತ್ತದೆ ಅನ್ನೋದರಲ್ಲಿ ಯಾವುದೇ ಅನುಮಾನವಿಲ್ಲ. ಉದ್ಯೋಗಿಯೊಬ್ಬರ ಆರ್ಥಿಕ ಭವಿಷ್ಯವನ್ನು ಸುರಕ್ಷಿತಗೊಳಿಸಲು ಇದು ಅತ್ಯುತ್ತಮ ಮಾರ್ಗವಾಗಿದೆ.
 


EPFO ಪಿಂಚಣಿ ವಯಸ್ಸು ನೋಡುವುದಾದರೆ, ಭವಿಷ್ಯ ನಿಧಿ ​​ಪ್ರೋಗ್ರಾಂ ತನ್ನ ಸದಸ್ಯ 58 ವರ್ಷವನ್ನು ತಲುಪಿದ ನಂತರ ಆತನಿಗೆ ಪಿಂಚಣಿಗಳನ್ನು ಪಾವತಿ ಮಾಡಲು ಆರಂಭ ಮಾಡುತ್ತದೆ.
 

epfo 0

ಅವಧಿಗೂ ಮುನ್ನ ಪಿಂಚಣಿ ಪಡೆಯುವ ಅವಕಾಶವೂ ಇದೆ. EPFO ​​ವ್ಯವಸ್ಥೆಯಡಿಯಲ್ಲಿ ಅವಧಿಗೂ ಮುನ್ನ ಪಿಂಚಣಿ ಪಡೆಯಲು ಒಬ್ಬ ಸದಸ್ಯನಿಗೆ ಕನಿಷ್ಠ 50 ವರ್ಷ ವಯಸ್ಸಾಗಿರಬೇಕು. ಆದಾಗ್ಯೂ, ಸಾಮಾನ್ಯ ಪಿಂಚಣಿಗೆ, ವಯಸ್ಸು 58 ಆಗಿರಬೇಕು.
 

58 ವರ್ಷ ತುಂಬಿದ ನಂತರ ಪಿಂಚಣಿ ಪಡೆಯಲು ವ್ಯಕ್ತಿ ಅರ್ಹನಾಗುತ್ತಾನೆ. ಹಾಗೇನಾದರೂ ಇಪಿಎಫ್‌ಒ ಸದಸ್ಯರು ಎರಡು ವರ್ಷಗಳ ಕಾಲ ಪಿಂಚಣಿಯನ್ನು ಮುಂದೂಡಿದರೆ, ಅವರು ಪ್ರತಿ ವರ್ಷ ಹೆಚ್ಚುವರಿ 4 ಪ್ರತಿಶತವನ್ನು ಪಡೆಯುತ್ತಾರೆ.

ಪಿಂಚಣಿಗೆ ಅರ್ಹತೆ ಹೇಗೆ ಅನ್ನೋದನ್ನ ನೋಡೋದಾದರೆ,  EPF ಪ್ರಯೋಜನಗಳನ್ನು ಪಡೆಯಲು ಒಂದು  ಸಂಸ್ಥೆಯಲ್ಲಿ ಕನಿಷ್ಠ 10 ವರ್ಷಗಳ ಸೇವೆ ಅಥವಾ 10 ವರ್ಷಗಳ ಕಾಲ ಇಪಿಎಫ್‌ಓಗೆ ಪಾವತಿ ಮಾಡಿರಬೇಕು.
 

ಉದ್ಯೋಗಿಯಿಂದ ಇಪಿಎಫ್‌ನಲ್ಲಿ ಕನಿಷ್ಠ/ಕಡ್ಡಾಯವಾದ ಕೊಡುಗೆ ಕೂಡ ಇದೆ. ಇದರನ್ವಯ ಉದ್ಯೋಗಿಯು ತಿಂಗಳಿಗೆ ಕನಿಷ್ಠ 1800 ರೂಪಾಯಿ ಪಾವತಿ ಮಾಡಬೇಕು. ಗರಿಷ್ಠ ಇಪಿಎಫ್‌ಗೆ ಶೇಕಡಾ 12 ಆಗಿರಬೇಕು.
 

ನಿವೃತ್ತಿಯ ಬಳಿಕ 1.5 ಕೋಟಿ ರೂಪಾಯಿ ಹಣ ಪಡೆಯಲು, 35 ವರ್ಷಗಳವರೆಗೆ ತಿಂಗಳಿಗೆ 6,400 ರೂಪಾಯಿ ಸ್ಯಾಲರಿಯಿಂದ ಕಟ್‌ ಆಗಬೇಕು. ಮುಕ್ತಾಯದ ನಂತರ, ನೀವು ಪ್ರಸ್ತುತ ಶೇಕಡಾ 8.25 ರ ಬಡ್ಡಿದರದಲ್ಲಿ ಒಟ್ಟು 1,51,47,472.81 ರೂಗಳನ್ನು ಪಡೆಯುತ್ತೀರಿ.
 


ನಿವೃತ್ತಿಯ ಬಳಿಕ 2.5 ಕೋಟಿ ರೂಪಾಯಿ ಪಡೆಯಲು, 35 ವರ್ಷಗಳವರೆಗೆ ತಿಂಗಳಿಗೆ 10,600 ರೂಪಾಯಿ ಹಣವನ್ನು ತಿಂಗಳ ಸ್ಯಾಲರಿಯಿಂದ ಕಟ್‌ ಆಗಬೇಕು. ಆ ಬಳಿಕ, ನೀವು ಪ್ರಸ್ತುತ ಶೇಕಡಾ 8.25 ರ ಬಡ್ಡಿದರದಲ್ಲಿ ಒಟ್ಟು 2,50,88,001.8 ರೂಗಳನ್ನು ಪಡೆಯುತ್ತೀರಿ.
 

EPFO higher pension scheme


ನಿವೃತ್ತಿಯ ಬಳಿಕ 3.5 ಕೋಟಿ ರೂಪಾಯಿ ಪಡೆಯಲು, 37 ವರ್ಷಗಳವರೆಗೆ ತಿಂಗಳಿಗೆ 12,500 ರೂಪಾಯಿ ಹಣವನ್ನು ತಿಂಗಳ ಸ್ಯಾಲರಿಯಲ್ಲಿ ಕಟ್‌ ಮಾಡಬೇಕು. ನಂತರ, ನೀವು ಪ್ರಸ್ತುತ ಶೇಕಡಾ 8.25 ರ ಬಡ್ಡಿದರದಲ್ಲಿ ಒಟ್ಟು 3,50,05,925.84 ರೂಗಳನ್ನು ಪಡೆಯುತ್ತೀರಿ.
 

click me!