ಅಪ್ಪ ಸೋಶಿಯಲ್ ಗ್ಯಾದರಿಂಗ್ ಅಂದ್ರು, ಮಗಳು ಅಂಬಾನಿ ವೆಡ್ಡಿಂಗ್ ಅಂತ ಫ್ಯಾಮಿಲಿ ಫೋಟೋನೇ ಹಾಕಿದ್ರು

First Published | Jul 17, 2024, 4:59 PM IST

ಕಳೆದ ಒಂದು ವರ್ಷದಿಂದ ಸದ್ದು ಮಾಡುತ್ತಿರುವ ಅನಂತ್ ಅಂಬಾನಿ - ರಾಧಿಕಾ ಮರ್ಚಂಟ್ ವಿವಾಹ ಕಾರ್ಯಕ್ರಮಕ್ಕೆ ಡಿ.ಕೆ ಶಿವಕುಮಾರ್ ಫ್ಯಾಮಿಲಿ ಭಾಗಿಯಾಗಿದ್ದು ಮಗಳು ಐಶ್ವರ್ಯ ಫೋಟೋ ಹಂಚಿಕೊಂಡಿದ್ದಾರೆ. 
 

ಇತ್ತೀಚೆಗೆ ರಾಜ್ಯದ ನಾಯಕ, ಕಾಂಗ್ರೆಸ್ ಟ್ರಬಲ್ ಶೂಟರ್ ಡಿಕೆ. ಶಿವಕುಮಾರ್ (D K Shivakumar) ಅಂಬಾನಿ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಯುಕೆಯ ಮಾಜಿ ಪ್ರಧಾನಿ ಟೋನಿ ಬ್ಲೇರ್ ಭೇಟಿಯಾಗಿ, ಅವರ ಜೊತೆಗಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸೋಶಿಯಲ್ ಗ್ಯಾದರಿಂಗ್ ಎಂದು ಕ್ಯಾಪ್ಶನ್ ಹಾಕುವ ಮೂಲಕ ಫುಲ್ ಟ್ರೋಲ್ ಆಗಿದ್ದರು. ಮೋದಿ ಅನಂತ್ ಅಂಬಾನಿ ಮದ್ವೆಗೆ ಹೋದಾಗ, ಡಿಕೆಶಿ ವಿಶ್ ಮಾಡಿರುವ ವೀಡಿಯೋ ಸಹ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.
 

ಕಾಂಗ್ರೆಸ್ ಯಾವಾಗಲೂ ಮೋದಿ ಸರ್ಕಾರ, ಅದಾನಿ ಮತ್ತು ಅಂಬಾನಿಯವರನ್ನು ದೂರುತ್ತಲೇ ಬರುತ್ತಿತ್ತು. ರಾಹುಲ್ ಗಾಂಧಿ ತಮ್ಮ ಪ್ರತಿ ಕಾರ್ಯಕ್ರಮದಲ್ಲಿ ಅಂಬಾನಿಯವರ ವಿರೋಧವಾಗಿಯೇ ಮಾತನಾಡುತ್ತಿದ್ದರು. ಹೀಗಿರೋವಾಗ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್, ಅಂಬಾನಿ ಮಗನ ಮದುವೆ ಹೋಗಿದ್ರೂ ಅದನ್ನ ಎಲ್ಲೂ ಹೇಳಿಕೊಳ್ಳದೇ ಸೋಶಿಯಲ್ ಗ್ಯಾದರಿಂಗ್ ಎಂದಿರೋದನ್ನ ಜನ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ರು. 
 

Tap to resize

ಇದೀಗ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಡಿಕೆ ಎಸ್ ಹೆಗ್ಡೆ (Aishwarya DKS Hegde) ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೂರ್ತಿ ಫ್ಯಾಮಿಲಿಯ ವಿವಿಧ ಫೋಟೋಗಳನ್ನು ಶೇರ್ ಮಾಡೋ ಮೂಲಕ ಅಂಬಾನಿ ವೆಡ್ಡಿಂಗ್ ಎಂದು ನೇರವಾಗಿ ಕ್ಯಾಪ್ಶನ್‌ನಲ್ಲಿ ಬರೆದುಕೊಂಡಿದ್ದಾರೆ. 
 

ಸುಂದರವಾದ ಬ್ಯಾಕ್ ಗ್ರೌಂಡ್ ಮಧ್ಯ ತಮ್ಮ ಫೋಟೋ, ಫ್ಲೋರಲ್ ಹುಲಿಗಳ ಬಳಿ ನಿಂತಿರುವ ಅಮ್ಮ ಅಪ್ಪನ ಸುಂದರ ಫೋಟೋ, ಅಮ್ಮನ ಜೊತೆ ನಿಂತಿರುವ ಫೋಟೋ, ಸುಧಾ ಮೂರ್ತಿಯವರ ಜೊತೆಗಿನ ಫೋಟೋ, ಇದಲ್ಲದೇ ಗಂಡ ತಮ್ಮ ಫೋಟೋ ತೆಗೆಯುತ್ತಿರುವಂತಹ ಫೋಟೋವನ್ನು ಸಹ ಐಶ್ವರ್ಯ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. 
 

ಐಶ್ವರ್ಯ ಶೇರ್ ಮಾಡಿರೋ ಫೋಟೋಗಳಿಗೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಐಶ್ವರ್ಯ ಸೌಂದರ್ಯವನ್ನ ಹೊಗಳಿದ್ರೆ, ಇನ್ನೂ ಕೆಲವರು, ಕಾಂಗ್ರೆಸ್ ವಿರೋಧಿಸುತ್ತಿದ್ದ ಅಂಬಾನಿ ಮದುವೆಗೆ ಹೋಗಿದ್ದಕ್ಕಾಗಿ ಟೀಕಿಸುತ್ತಿದ್ದಾರೆ. ಇನ್ನೂ ಕೆಲವರು ಡಿಕೆಶಿ ಮತ್ತು ಅವರ ಪತ್ನಿಯ ಜೋಡಿಯನ್ನು ಮೆಚ್ಚಿಕೊಂಡಿದ್ದಾರೆ. 
 

ಒಬ್ರು ಕಾಮೆಂಟ್ ಮಾಡಿ ರಾಹುಲ್ ಗಾಂಧಿ ಯಾವಾಗ್ಲೂ ಹೇಳ್ತಾರೆ ಕಾಂಗ್ರೆಸ್ ಅಂಬಾನಿಗೆ ವಿರುದ್ಧವಾಗಿದೆ ಎಂದು, ಆದ್ರೆ ಇವಾಗ ಕರ್ನಾಟಕದ ಕಾಂಗ್ರೆಸ್ ಪಕ್ಷದ ಡಿಸಿಎಂ ತಮ್ಮ ಫ್ಯಾಮಿಲಿ ಜೊತೆಗೆ ಅಂಬಾನಿ ಮದ್ವೆಗೆ ಹೋಗಿ ಬಂದಿದ್ದಾರೆ, ಏನು ವಿಪರ್ಯಾಸ ಅಂದಿದ್ದಾರೆ. 
 

ಇನ್ನು ಐಶ್ವರ್ಯ ಸೌಂದರ್ಯವನ್ನು ಹೊಗಳಿರೋ ಜನ ಮೊದಲ ಬಾರಿಗೆ ಐಶ್ವರ್ಯ ಮತ್ತು ಅಮರ್ಥ್ಯ ಹೆಗ್ಗಡೆಯನ್ನು (Amarthya Hegde) ಜೊತೆಯಾಗಿ ನೋಡಿ ಸಂಭ್ರಮಿಸಿದ್ದಾರೆ. ಐಶ್ವರ್ಯ ಹಾಕಿರೋ ಫೋಟೋಗಳಲ್ಲಿ ಒಂದರಲ್ಲಿ ಐಶ್ವರ್ಯ ಮಿರರ್ ಬ್ಯಾಕ್ ಗ್ರೌಂಡ್ ಇರೋ ಕೌಚ್ ನಲ್ಲಿ ಕೂತಿದ್ರೆ ಅಮರ್ಥ್ಯ ಫೋಟೋ ಕ್ಲಿಕ್ ಮಾಡ್ತಿರೋದು ಕನ್ನಡಿಯಲ್ಲಿ ಕಾಣಿಸ್ತಿದೆ. ಇದನ್ನ ನೋಡಿದ ಅಭಿಮಾನಿಗಳು ಕೊನೆಗೂ ಹೆಗ್ಡೆಯವರನ್ನ ನೋಡೋ ಅವಕಾಶ ಸಿಕ್ತು. ಅಮರ್ಥ್ಯ ಸಪೋರ್ಟೀವ್ ಗಂಡ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 
 

Latest Videos

click me!