ಜಿಯೋ ಸೂಪರ್ ರೀಚಾರ್ಜ್ ಆಫರ್, ಕೇವಲ 175 ರೂಗೆ ಡೇಟಾ, 11 ಒಟಿಟಿ ಉಚಿತ!

First Published | Nov 7, 2024, 11:52 AM IST

ದೀಪಾವಳಿ ಮುಗಿದ ಬೆನ್ನಲ್ಲೇ ಇದೀಗ ರಿಲಯನ್ಸ್ ಜಿಯೋ ಅತೀ ಕಡಿಮೆ ಬೆಲೆಗೆ ಉಚಿತ ಡೇಟಾ, ಉಚಿತ ಒಟಿಟಿ ಪ್ಲಾಟ್‌ಫಾರ್ಮ್ ಸಬ್‌ಸ್ಕ್ರಿಪ್ಶನ್ ಪ್ಲಾನ್ ಘೋಷಿಸಿದೆ. ಕೇವಲ 175 ರೂಪಾಯಿಗೆ  ತಿಂಗಳ ಪ್ಲಾನ್ ಸಿಗಲಿದೆ. ಕೈಗೆಟುಕುವ ಬೆಲೆಯ ಈ ಪ್ಲಾನ್‌ನಲ್ಲಿ ಯಾವೆಲ್ಲಾ ಸೌಲಭ್ಯ ಗ್ರಾಹರಿಗೆ ಸಿಗಲಿದೆ.

ಟೆಲಿಕಾಂ ಕ್ಷೇತ್ರದಲ್ಲಿ ರಿಲಯನ್ಸ್ ಜಿಯೋ ಹಲವು ಆಫರ್ ಮೂಲಕ ಸಂಚಲನ ಸೃಷ್ಟಿಸಿದೆ. ಇತ್ತೀಚೆಗೆ ಗ್ರಾಹಕರು ಪೋರ್ಟ್ ಆಗದಂತೆ ಕಡಿಮೆ ಬೆಲೆ ಆಫರ್ ನೀಡಿದೆ.  ಇದೀಗ ಕೇವಲ 175 ರೂಪಾಯಿ ರೀಚಾರ್ಜ್ ಪ್ಲಾನ್ ಆಫರ್ ಘೋಷಿಸಿದೆ. ಈ ರೀಚಾರ್ಜ್ ಪ್ಲಾನ್ ಆಯ್ಕೆ ಮಾಡಿಕೊಂಡರೆ ಉಚಿತ ಡೇಟಾ, 11 ಒಟಿಟಿ ಸಬ್‌ಸ್ಕೃಪ್ಶನ್ ಉಚಿತವಾಗಿ ಸಿಗಲಿದೆ. ಕೇವಲ 175 ರೂಪಾಯಿ ರೀಚಾರ್ಜ್ ಪ್ಲಾನ್‌ನಲ್ಲಿ 10 ಜಿಬಿ ಡೇಟಾ ಉಚಿತವಾಗಿ ಸಿಗಲಿದೆ.

ಕಡಿಮೆ ರೀಚಾರ್ಜ್ ಪ್ಲಾನ್‌ನಲ್ಲಿ ವ್ಯಾಲಿಟಿಡಿಯಲ್ಲಿ ಯಾವುದೇ ಕಾಂಪ್ರಮೈಸ್ ಇಲ್ಲ. ಜಿಯೋ 175 ರೂಪಾಯಿ ರೀಚಾರ್ಜ್ ಪ್ಲಾನ್‍‌ನಲ್ಲಿ 28 ದಿನಗಳ ವ್ಯಾಲಿಡಿಟಿ ಸಿಗಲಿದೆ.  ವೆಬ್ ಸಿರೀಸ್, ಸಿನಿಮಾ, ಡಾಕ್ಯುಮೆಂಟರಿಗಳನ್ನು ನೋಡಲು ಇದು ಸೂಕ್ತ. 10 GB ಡೇಟಾಗೆ ದೈನಂದಿನ ಮಿತಿಯಿಲ್ಲ. 

Tap to resize

 ಸೋನಿ ಲೈವ್, ಜೀ5, ಜಿಯೋ ಸಿನಿಮಾ, ಇತ್ಯಾದಿಗಳನ್ನು ಆನಂದಿಸಿ. ಈ ಪ್ಲಾನ್ ಕಡಿಮೆ ಬೆಲೆಯಲ್ಲಿ ಉತ್ತಮ ಮನರಂಜನೆ ನೀಡುತ್ತದೆ. ಸದ್ಯ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ದುಬಾರಿ ರೀಚಾರ್ಜ್ ಬೆಲೆ ಜನರಿಗೆ ಹೊರೆಯಾಗುತ್ತಿದೆ. ಹೀಗಾಗಿ ಇದೀಗ ಜಿಯೋ ಕಡಿಮೆ ಬೆಲೆಯಲ್ಲಿ 11 ಒಟಿಟಿ ಪ್ಲಾಟ್‌ಫಾರ್ಮ್ ನೀಡುವ ಮೂಲಕ ಗ್ರಾಹಕರ ಮನ ತಣಿಸಿದೆ. 

ಈ ಜಿಯೋ ಪ್ಲಾನ್ ಏಕೆ ವಿಶೇಷ? ರಿಲಯನ್ಸ್ ಜಿಯೋದ ₹175 ಪ್ಲಾನ್ ಪ್ರಯಾಣದಲ್ಲಿ ಕಂಟೆಂಟ್ ಬಯಸುವವರಿಗೆ ಸೂಕ್ತ. SMS ಅಥವಾ ಕರೆ ಪ್ರಯೋಜನಗಳಿಲ್ಲದಿದ್ದರೂ, ಕಡಿಮೆ ಬೆಲೆಯಲ್ಲಿ ಪ್ರೀಮಿಯಂ ಕಂಟೆಂಟ್ ಬಯಸುವವರಿಗೆ ಇದು ಒಳ್ಳೆಯದು. ಮನರಂಜನೆಗೆ ಆದ್ಯತೆ ನೀಡುವ ಗ್ರಾಹಕರು ಅತೀ ಕಡಿಮೆ ಬೆಲೆಯಲ್ಲಿ ಒಂದು ತಿಂಗಳು ಆನಂದಿಸಲು ಸಾಧ್ಯವಿದೆ. 

Reliance Jio ₹175 ಪ್ಲಾನ್ ಕೇವಲ ರೀಚಾರ್ಜ್ ಅಲ್ಲ, ಮನರಂಜನಾ ಲೋಕಕ್ಕೆ ಆಹ್ವಾನ. ಪ್ರೀಮಿಯಂ OTT ಪ್ಲಾಟ್‌ಫಾರ್ಮ್‌ಗಳು ಮತ್ತು ಡೇಟಾವನ್ನು ಕಡಿಮೆ ಬೆಲೆಯಲ್ಲಿ ಆನಂದಿಸಲು ಇದು ಉತ್ತಮ ಅವಕಾಶ. ಬಜೆಟ್ ಮೀರದೆ ಅನಿಯಮಿತ ಸ್ಟ್ರೀಮಿಂಗ್ ಆನಂದಿಸಲು ಸಾಧ್ಯವಿದೆ.

Latest Videos

click me!