ಈ ಬ್ಯಾಂಕ್‌ಗಳಲ್ಲಿ ಹಣ ಇಟ್ಟರೆ ಸುರಕ್ಷಿತ, ದೇಶದ 3 ಸೇಫೆಸ್ಟ್ ಬ್ಯಾಂಕ್ ಪಟ್ಟಿ ಪ್ರಕಟಿಸಿದ ಆರ್‌ಬಿಐ

Published : Dec 03, 2025, 01:42 PM IST

ಈ ಬ್ಯಾಂಕ್‌ಗಳಲ್ಲಿ ಹಣ ಇಟ್ಟರೆ ಸುರಕ್ಷಿತ, ದೇಶದ 3 ಸೇಫೆಸ್ಟ್ ಬ್ಯಾಂಕ್ ಪಟ್ಟಿ ಪ್ರಕಟಿಸಿದ ಆರ್‌ಬಿಐ, ಹಣ ಉಳಿತಾಯ, ಫಿಕ್ಸೆಡ್ ಡೆಪಾಸಿಟ್ ಸೇರಿದಂತೆ ಇತರ ಯಾವುದೇ ರೂಪದಲ್ಲಿ ಹಣ ಇಡಲು, ಹೂಡಿಕೆ ಮಾಡಲು ದೇಶದ ಮೂರು ಸುರಕ್ಷಿತ ಬ್ಯಾಂಕ್ ಪಟ್ಟಿಯನ್ನು ಆರ್‌ಬಿಐ ಬಿಡುಗಡೆ ಮಾಡಿದೆ. 

PREV
15
ಹಣ ಉಳಿತಾಯ, ಹೂಡಿಕೆಗೆ ಸುರಕ್ಷಿತ ಬ್ಯಾಂಕ್

ಕೈಯಲ್ಲಿ ಹಣ ಉಳಿತಾಯವಾಗಲ್ಲ, ಮನೆಯಲ್ಲಿಟ್ಟರೆ ಕಳ್ಳರು, ದರೋಡೆಕೋರರ ಭಯ, ಹೀಗಾಗಿ ಬ್ಯಾಂಕ್ ಹೆಚ್ಚು ಸುರಕ್ಷಿತ. ಉಳಿತಾಯ, ಫಿಕ್ಸೆಡ್ ಡೆಪಾಸಿಟ್, ಆರ್‌ಡಿ ಸೇರಿದಂತೆ ಹಲವು ರೀತಿಯಲ್ಲಿ ಜನರು ಹಣ ಉಳಿತಾಯ ಹಾಗೂ ಹೂಡಿಕೆ ಮಾಡುತ್ತಾರೆ. ಆದರೆ ಬ್ಯಾಂಕ್ ದಿವಾಳಿಯಾದರೆ ಹೂಡಿಕೆ ಮಾಡಿದವರು ಸಂಕಷ್ಟಕ್ಕೆ ಸಿಲುಕುತ್ತಾರೆ. ಹೀಗಾಗಿ ಭಾರತದಲ್ಲಿ ಹಣ ಉಳಿತಾಯ ಮಾಡಲು, ಹೂಡಿಕೆ ಮಾಡಲು ಸುರಕ್ಷಿತ ಬ್ಯಾಂಕ್ ಯಾವುದು ಅನ್ನೋ ಪಟ್ಟಿಯನ್ನು ಆರ್‌ಬಿಐ ಬಿಡುಗಡೆ ಮಾಡಿದೆ.

25
ಮೂರು ಬ್ಯಾಂಕ್ ಪಟ್ಟಿ ನೀಡಿದ ಆರ್‌ಬಿಐ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದೇಶದಲ್ಲಿ ಮೂರು ಬ್ಯಾಂಕ್‌ಗಳು ಅತ್ಯಂತ ಸುರಕ್ಷಿತ ಎಂದು ಪಟ್ಟಿ ನೀಡಿದೆ.

  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)
  • ಹೆಚ್‌ಡಿಎಫ್‌ಸಿ
  • ಐಸಿಐಸಿಐ

ಈ ಬ್ಯಾಂಕ್‌ಗಳು ಅತ್ಯಂತ ವ್ಯವಸ್ಥಿತವಾಗಿ ಹಣಕಾಸನ್ನು ನಿರ್ವಹಿಸುತ್ತದೆ. ಭಾರತದೆಲ್ಲೆಡೆ ಈ ಮೂರು ಬ್ಯಾಂಕ್‌ಗಳು ಪಾರದರ್ಶಕತೆ, ಲೆಕ್ಕ, ಆಡಿಟ್ ಎಲ್ಲವೂ ಉತ್ತಮವಾಗಿದೆ ಎಂದು ಆರ್‌ಬಿಐ ಹೇಳಿದೆ.

35
D-SIBs ಬ್ಯಾಂಕ್

ದೇಶಕ್ಕೆ ವ್ಯವಸ್ಥಾತ್ಮಕವಾಗಿ ಅತ್ಯಂತ ಪ್ರಮುಖ ಬ್ಯಾಂಕ್‌ಗಳು (D-SIBs) ಎಂಬ ಹೆಗ್ಗಳಿಕೆಗೆ ಎಸ್‌ಬಿಐ, ಹೆಚ್‌ಡಿಎಫ್‌ಸಿ ಹಾಗೂ ಐಸಿಐಸಿಐ ಬ್ಯಾಂಕ್ ಪಾತ್ರವಾಗಿದೆ. 2024ರಲ್ಲೂ ಈ ಮೂರು ಬ್ಯಾಂಕ್‌ಗಳು D-SIBs ಬ್ಯಾಂಕ್ ಎಂದು ಗುರತಿಸಿಕೊಂಡಿತ್ತು. ದೇಶದ ಅರ್ ವ್ಯವಸ್ಥೆಯನ್ನು ಸದೃಢಗೊಳಿಸುವಲ್ಲಿ ಈ ಬ್ಯಾಂಕ್ ಪ್ರಮುಖ ಪಾತ್ರನಿರ್ವಹಿಸುತ್ತಿದೆ ಎಂದು ಆರ್‌ಬಿಐ ಹೇಳಿದೆ.

45
ಆರ್‌ಬಿಐ ಮಾರ್ಗಸೂಚಿ

ಬ್ಯಾಂಕ್ ಸಮಸ್ಯೆ ಎದುರಿಸಿದರೆ, ದಿವಾಳಿಯಾದರೆ ದೇಶದ ಹಣಕಾಸು ವ್ಯವಸ್ಥೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಆದರೆ ಮೂರು ಪ್ರಮುಖ ಬ್ಯಾಂಕ್‌ಗಳು ಸರ್ಕಾರದ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸುತ್ತಾ ಸ್ಥಿರತೆ ತರುವಲ್ಲಿ ಯಶಸ್ವಿಯಾಗಿದೆ. ದೇಶ ಮೂಲೆ ಮೂಲೆಯಲ್ಲಿ ಜನರ ಬದುಕಿನಲ್ಲಿ ಈ ಬ್ಯಾಂಕ್‌ಗಗಳು ಮಹತ್ವದ ಪಾತ್ರ ನಿರ್ವಹಿಸುತ್ತಿದೆ ಎಂದಿದೆ.

ಆರ್‌ಬಿಐ ಮಾರ್ಗಸೂಚಿ

55
ಬ್ಯಾಂಕ್ ಮೇಲೆ ಜನರ ವಿಶ್ವಾಸ

ದೇಶದಲ್ಲಿ ಹಲವು ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿದೆ. ಈ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಜೊತೆಗೆ ಖಾಸಗಿ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿದೆ. ಪೈಕಿ ಎಸ್‌ಬಿಐ, ಹೆಡ್‌ಡಿಎಫ್‌ಸಿ ಹಾಗೂ ಐಸಿಐಸಿಐ ಬ್ಯಾಂಕ್ ಮೇಲೆ ಜನರು ಯಾವುದೇ ಅಳುಕಿಲ್ಲದೆ ವಶ್ವಾಸವಿಡಬಹುದು ಎಂದು ಆರ್‌ಬಿಐ ಹೇಳಿದೆ.

ಬ್ಯಾಂಕ್ ಮೇಲೆ ಜನರ ವಿಶ್ವಾಸ

Read more Photos on
click me!

Recommended Stories