ಮದುವೆಯಾದ್ರೂ ಅಂಬಾನಿ ಮಗಳೊಂದಿಗೆ ಆನಂದ್ ಪಿರಾಮಲ್ ಕಾಣಿಸ್ಕೊಳ್ಳೋದು ಬಹಳ ಅಪರೂಪ!

Published : Oct 08, 2020, 05:16 PM IST

ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ದಂಪತಿಯ ಏಕೈಕ ಪುತ್ರಿ ದಿಶಾ ಅಂಬಾನಿಯ ಮದುವೆ ಪಿರಾಮಲ್ ಗ್ರೂಪ್‌ನ ಆನಂದ್ ಪಿರಾಮಲ್ ಜೊತೆ  2018ರ ಡಿಸೆಂಬರ್ 12 ರಂದು ನಡೆದಿದೆ. ರಿಲಯನ್ಸ್‌ ಇಂಡಸ್ಟರೀಸ್‌ನ ಚೇರ್ಮನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಮುಜಕೇಶ್ ಅಂಬಾನಿಯ ಮಗಳು ದೇಶ ಮಾತ್ರವಲ್ಲ, ವಿಶ್ವದ ಅನೇಕ ಗಣ್ಯರು ಭಾಗಿಯಾಗಿದ್ದರು. ರಾಜಕೀಯ ಗಣ್ಯರಿಂದ ಹಿಡಿದು ಸಿನಿ ಕ್ಷೇತ್ರ ಹಾಗೂ ಕ್ರೀಡಾ ಕ್ಷೇತ್ರದ ಬಹುತೇಕ ಗಣ್ಯರು ಈ ಮದುವೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಮದುವೆಯ ಈ ಇಡೀ ಕಾರ್ಯಕ್ರಮದಲ್ಲಿ ಅಂಬಾನಿ ಕುಟುಂಬದ ಎಲ್ಲಾ ಸದಸ್ಯರು ಕಾಣಿಸಿಕೊಂಡಿದ್ದರೆ, ಅತ್ತ ಪಿರಾಮಲ್ ಕುಟುಂಬದ ಅನೇಕ ಮಂದಿ ಕಾಣಿಸಿರಲಿಲ್ಲ. ಅಲ್ಲದೇ ಮದುವೆ ಬಳಿಕವೂ ಇಶಾ ಹಾಗೂ ಆನಂದ್ ಪಿರಾಮಲ್ ಜೊತೆಗಿರುವ ಫೋಟೋಗಳು ಕೂಡಾ ಕಾಣಿಸಿಕೊಳ್ಳುವುದು ಬಹಳ ಕಡಿಮೆ. ಇನ್ನು ಆನಂದ್ ಹಾಗೂ ಇಶಾ ಇಬ್ಬರೂ ಬಹಳ ಹಳೆಯ ಸ್ನೇಹಿತರು. ದೀರ್ಘ ಕಾಲ ಡೇಟಿಂಗ್ ನಡೆಸಿದ್ದ ಇವರು ಮದುವೆಯಾಗುವ ನಿರ್ಧಾರ ತೆಗೆದುಕೊಂಡಿದ್ದರು. ಆನಂದ್ ಇಶಾ ಮಾತ್ರವಲ್ಲ ಮುಕೇಶ್ ಅಂಬಾನಿಗೂ ಬಹಳ ಇಷ್ಟವಾಗಿದ್ದರು. ಹೀಗಿರುವಾಗ ಇಲ್ಲಿವೆ ನೋಡಿ ಇಶಾ ಹಾಗೂ ಆನಂದ್‌ರವರ ಕೆಲ ರೊಮ್ಯಾಂಟಿಕ್ ಫೋಟೋಗಳು.

PREV
110
ಮದುವೆಯಾದ್ರೂ ಅಂಬಾನಿ ಮಗಳೊಂದಿಗೆ ಆನಂದ್ ಪಿರಾಮಲ್ ಕಾಣಿಸ್ಕೊಳ್ಳೋದು ಬಹಳ ಅಪರೂಪ!

ಇಶಾ ಹಾಗೂ ಆನಂದ್ ಪಿರಾಮಲ್ ಇಬ್ಬರೂ ಹಳೆಯ ಸ್ನೇಹಿತರು. ಇವರಿಬ್ಬರ ಕುಟುಂಬ ಕಳೆದ ನಾಲ್ಕು ದಶಕಗಳಿಂದ ಪರಸ್ಪರ ಒಡನಾಟ ಹೊಂದಿದೆ. ಆನಂದ್ ಪಿರಾಮಲ್ ಇಶಾ ಅಂಬಾನಿಯನ್ನು ಮಹಾಬಲೇಶ್ವರ ದೇಗುಲದಲ್ಲಿ ಮದುವೆಯಾಗುವಂತೆ ಪ್ರೊಪೋಸ್ ಮಾಡಿದ್ದರು.

210

ಇಶಾ ಅಂಬಾನಿ ರಿಲಯನ್ಸ್ ಜಿಯೋ ಹಾಗೂ ರಿಲಯನ್ಸ್ ರಿಟೈಲ್ಸ್‌ ಬೋರ್ಡ್‌ನ ಸದಸ್ಯೆ. ಅವರು ಜಿಯೋ ಫೋನ್ ಕೂಡಾ ಲಾಂಚ್ ಮಾಡಿದ್ದರು. ಅವರು ಅಮೆರಿಕದ ಯೆಲ್ ಯೂನಿವರ್ಸಿಟಿ ಹಾಗೂ ಗ್ರ್ಯಾಜುಯೆಟ್ ಸ್ಕೂಲ್ ಆಫ್ ಬ್ಯುಸಿನೆಸ್ನಲ್ಲಿ ಶಿಕ್ಷಣ ಪಡೆದಿದ್ದಾರೆ.

310

ಮದುವೆಯಲ್ಲಿ ಆನಂದ್ ಪಿರಾಮಲ್ ಜನರ ಆಗ್ರಹದ ಮೇರೆಗೆ ಇಶಾ ಜೊತೆ ಡಾನ್ಸ್ ಮಾಡಿದ್ದರು. ಆನಂದ್ ಪಿರಾಮಲ್ ಕೊಂಚ ನಾಚಿಕೆ ಸ್ವಭಾವದವರು ಅಲ್ಲದೇ ಸೆಲೆಬ್ರಿಟಿಗಳ ಪಾರ್ಟಿಯಲ್ಲಿ ಕಾಣಿಸಿಕೊಳ್ಳೋದು ಕಡಿಮೆ. ಅಅವರು ತಮ್ಮ ಹೆಚ್ಚಿನ ಸಮಯವನ್ನು ಉದ್ಯಮ ಸಂಬಂಧಿ ವಿಚಾರಗಳಲ್ಲಿ ಕಳೆಯುತ್ತಾರೆ.

410

ಇಶಾ ಜೊತೆಗಿನ ನೃತ್ಯವನ್ನು ಆನಂದ್ ಬಹಳ ಎಂಜಾಯ್ ಮಾಡಿದ್ದರು. ಅವರು ಇಶಾರನ್ನು ತಮ್ಮ ಬಾಹುಗಳಲ್ಲಿ ಎತ್ತಿ ಕಿಸ್ ಕೂಡಾ ಮಾಡಿದ್ದರು.

510

ಆನಂದ್ ಪಿರಾಮಲ್ ಅಮೆರಿಕದ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದಿದ್ದಾರೆ. ಅವರು ಪಿರಾಮಲ್ ಎಂಟಪ್ರೈಸ್‌ನ ಎಕ್ಸಿಕ್ಯುಟಿವ್ ಡೈರೆಕ್ಟರ್ ಕೂಡಾ ಆಗಿದ್ದಾರೆ. ಅಲ್ಲದೇ ಅವರು ಎರಡು ಸ್ಟಾರ್ಟಪ್‌ ಕೂಡಾ ಆರಂಭಿಸಿದ್ದಾರೆ. ಮೊದಲನೆಯದ್ದು ಪಿರಾಮಲ್ ಇ-ಹೆಲ್ತ್ ಹಾಗೂ ಎರಡನೆಯದ್ದು ರಿಯಲ್ ಎಸ್ಟೇಟ್ ಕ್ಷೇತ್ರದ ಪಿರಾಮಲ್ ರಿಯಲ್ಟಿ ಆಗಿದೆ. ಇವೆರಡೂ ಈಗ ಪಿರಾಮಲ್ ಎಂಟಪ್ರೈಸ್‌ನ ಭಾಗಗಳಾಗಿವೆ.

610

ಆನಂದ್ ಪಿರಾಮಲ್ ಭಾರತದ ಪ್ರಸಿದ್ಧ ಉದ್ಯಮಿಗಳಲ್ಲೊಬ್ಬರಾದ ಸೇಠ್ ಪಿರಾಮಲ್‌ರವರ ಮರಿ ಮೊಮ್ಮಗ ಹಾಗೂ ಅಜಯ್ ಪಿರಾಮಲ್‌ರವರ ಮಗ ಆಗಿದ್ದಾರೆ. 

710

ಇದು ಆನಂದ್ ಪಿರಾಮಲ್ ಹಾಗೂ ಇಶಾ ಅಂಬಾನಿಯ ರೊಮ್ಯಾಂಟಿಕ್ ಫೋಟೋ ಆಗಿದೆ. ಇದನ್ನು ಅವರ ಮದುವೆ ಸಂದರ್ಭದಲ್ಲಿ ಕ್ಇಕ್ಕಿಸಲಾಗಿತ್ತು. ನಾಚಿಕ ಸ್ವಭಾವ ಇರುವುದರಿಂದ ಆನಂದ್ ಪಿರಾಮಲ್ ಫೋಟೋಗಳಲ್ಲಿ ಕಾಣಿಸಿಕೊಳ್ಳುವುದು ಬಹಳ ಅಪರೂಪ.

810

ತನ್ನ ಮದುವೆ ವೇಳೆ ಇಶಾ ಹೆಚ್ಚಿನ ಫೋಟೋಗಳನ್ನು ತಮ್ಮ ಮನೆಯವರೊಂದಿಗೇ ಕ್ಲಿಕ್ಕಿಸಿಕೊಂಡಿದ್ದರು. ತಾಯಿ ನೀತಾ ಅಂಬಾನಿ ಜೊತೆಗಿನ ಈ ಫೋಟೋ ಭಾರೀ ವೈರಲ್ ಆಗಿತ್ತು.

910

ಆನಂದ್ ಪಿರಾಮಲ್ ಇಶಾ ಅಂಬಾನಿಯನ್ನು ಮದುವೆಯಾಗುವುದಕ್ಕೂ ಮೊದಲು ಅನೇಕ ಬಾರಿ ಅನೇಕ ವಿಚಾರಗಳಲ್ಲಿ ಸಲಹೆ ಪಡೆಯಲು ಮುಕೇಶ್ ಅಂಬಾನಿಯನ್ನು ಭೇಟಿಯಾಗುತ್ತಿದ್ದರು. ಆರಂಭದಲ್ಲಿ ಆನಂದ್ ಬ್ಯಾಂಕಿಂಗ್ ಕನ್ಸಲ್ಟಿಂಗ್ ಕ್ಷೇತ್ರದಲ್ಲಿ ವೃತ್ತಿ ಬದುಕು ಆರಂಭಿಸಲು ಯೋಚಿಸಿದ್ದರು. ಆದರೆ ಮುಕೇಶ್ ಅಂಬಾನಿ ಅವರಿಗೆ ಉದ್ಯಮ ಕ್ಷೇತ್ರಕ್ಕೆ ಬರಲು ಸಲಹೆ ನೀಡಿದ್ದರು.

1010

ಇನ್ನು ಅಂಬಾನಿ ಸೊಸೆ ಶ್ಲೋಕಾ ಮೆಹ್ತಾ ತನ್ನ ಪತಿ ಜೊತೆ ಅನೇಕ ಬಾರಿ ಕಾಣಿಸಿಕೊಳ್ಳುತ್ತಾರೆ. ಆದರೆ ಇಶಾ ಅಂಬಾಣಿ ಹಾಗೂ ಆನಂದ್‌ರವರ ಫೋಟೋಗಳು ಕಾಣಲು ಸಿಗೋದೆ ಕಡಿಮೆ. ಇದು ಕೂಡಾ ಬಹಳ ವಿಶೇಷ ಫೋಟೋ ಆಗಿದ್ದು, ಇದನ್ನು ಮದುವೆಯಾದ ಬಳಿಕ ಸೆರೆ ಹಿಡಿಯಲಾಗಿತ್ತು.

click me!

Recommended Stories