ಹೀಗಿದೆ ನೋಡಿ ಮುಕೇಶ್ ಅಂಬಾನಿಯ ಐಷಾರಾಮಿ ಬೋಯಿಂಗ್ ಬ್ಯುಸಿನೆಸ್ ಜೆಟ್!

First Published Oct 6, 2020, 4:51 PM IST

ವಿಶ್ವದ ಬಹುತೇಕ ಉದ್ಯಮಿಗಳು ಖಾಸಗಿ ಜೆಟ್ ಇಟ್ಟುಕೊಳ್ಳಲು ಬಯಸುತ್ತಾರೆ. ಇದು ಸೌಲಭ್ಯದೊಂದಿಗೆ ದೊಡ್ಡಸ್ಥಿಕೆ ವಿಚಾರವೂ ಹೌದು. ಭಾರತದ ಅನೇಕ ಉದ್ಯಮಿಗಳ ಬಳಿ ತಮ್ಮದೇ ಆದ ಖಾಸಗಿ ಜೆಟ್ ಇದೆ. ಇದರ ಬೆಲೆ ಕೋಟಿಗಟ್ಟಲೇ ಇರುತ್ತದೆ. ಇದರೊಂದಿಗೆ ಇಬವುಗಳ ನಿರ್ವಹಣೆಗೂ ಭಾರೀ ಮೊತ್ತ ವ್ಯಯಿಸಬೇಕಾಗುತ್ತದೆ. ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಬಳಿಯೂ ಪ್ರೈವೇಟ್ ಬೋಯಿಂಗ್ ಬ್ಯುಸಿನೆಸ್ ಜೆಟ್ ಇದೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಚೇರ್ಮನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಮುಕೇಶ್ ಅಂಬಾನಿ ಬೋಯಿಂಗ್ ಬ್ಯುಸಿನೆಸ್ ಜೆಟ್ ಹೊಂದಿರುವ ಭಾರತದ ಏಕೈಕ ವ್ಯಕ್ತಿಯಾಗಿದ್ದಾರೆ. ಅಂಬಾನಿ ಬಳಿ ಬೋಯಿಂಗ್ ಬ್ಯುಸಿನೆಸ್ ಜೆಟ್ 2 ಇದ್ದು, ಇದರ ಬೆಲೆ ಬರೋಬ್ಬರಿ 500 ಕೋಟಿ. ತನ್ನ ಈ ಜೆಟ್‌ಗಾಗಿ ಅವರು ತಮ್ಮ ಮನೆ ಆಂಟಿಲಿಯಾದಲ್ಲಿ ಎರಡು ಹೆಲಿಪ್ಯಾಡ್‌ಗಳನ್ನೂ ನಿರ್ಮಿಸಿದ್ದಾರೆ.  2007ರಲ್ಲಿ ಮುಕೇಶ್ ಅಂಬಾನಿ ತನ್ನ ಪತ್ನಿ ನೀತಾಗೆ 242 ಕೋಟಿ ಮೌಲ್ಯದ ಏರ್‌ ಬಸ್ 319 ಕಾರ್ಪೋರೇಟ್ ಜೆಟ್ ಉಡುಗೊರೆಯಾಗಿ ನೀಡಿದ್ದರು. ಅಂಬಾನಿ ಬಳಿ ಫಾಲ್ಕನ್ 900 ಈಎಕ್ಸ್‌ ಕೂಡಾ ಇದೆ. ಇಲ್ಲಿದೆ ನೋಡಿ ಮುಕೇಶ್ ಅಂಬಾನಿಯವರ  ಬೋಯಿಂಗ್ ಬ್ಯುಸಿನೆಸ್ ಜೆಟ್‌ನ ಇನ್‌ಸೈಡ್‌ ಫೋಟೋಸ್.
 

ಈ ಐಷಾರಾಮಿ ಜೆಟ್‌ನಲ್ಲಿ ಕಾನ್ಫರೆನ್ಸ್‌ ರೂಂ, ಎಕ್ಸಿಕ್ಯೂಟಿವ್ ಲಾಂಚ್, ಪೈವೆಟ್‌ ಸೂಟ್‌ನಂತಹ ಅನೇಕ ಸೌಲಭ್ಯಗಳೂ ಇವೆ.
undefined
ಮುಕೇಶ್ ಅಂಬಾನಿಯ ಈ ಖಾಸಗಿ ಬೋಯಿಂಗ್ ಜೆಟ್ ಜೆಟ್ ವಿಶ್ವದ ಉತ್ಕೃಷ್ಟ ಜೆಟ್ ವಿಮಾನಗಳಲ್ಲಿ ಒಂದು. ಇದರಲ್ಲಿ ಬ್ಯುಸಿನೆಸ್ ಮೀಟಿಂಗ್ ಮಾಡುವುದರಿಂದ ಹಿಡಿದು ಮನರಂಜನೆವರೆಗೆ ಎಲ್ಲಾ ಸೌಲಭ್ಯಗಳಿವೆ.
undefined
ಇದರಲ್ಲಿ ಐಷಾರಾಮಿ ಕಾನ್ಫರೆನ್ಸ್‌ ಹಾಲ್‌ನಂತಹ ಸೌಲಭ್ಯವಿದೆ. ಇಲ್ಲಿ ಮೀಟಿಂಗ್‌ನಿಂದ ಆರಾಮ ಕೂಡಾ ಮಾಡಬಹುದು. ಭಾರತದಲ್ಲಿ ಇಷ್ಟೊಂದು ಐಷಾರಾಮಿ ಜೆಟ್ ಬಹುಶಃ ಬೇರೊಬ್ಬ ಉದ್ಯಮಿ ಬಳಿ ಇಲ್ಲವೇನೋ
undefined
ಮುಕೇಶ್ ಅಂಬಾನಿಯ ಹೆಚ್ಚಿನ ಸಮಯ ಉದ್ಯಮಕ್ಕೆ ಸಂಬಂಧಿಸಿದ ವಿಚಾರದಗಳಲ್ಲೇ ಕಳೆದು ಹೋಗುತ್ತದೆ. ಆದರೆ ಐಷಾರಾಮಿತನದಲ್ಲಿ ಅವರು ಕೊಂಚವೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಅವರಿಗೆ ದುಬಾರಿ ಏರ್‌ಕ್ರಾಫ್ಟ್‌ ಇಟ್ಟುಕೊಳ್ಳುವ ಅಭ್ಯಾಸವಿದೆ.
undefined
ಮುಕೇಶ್ ಅಂಬಾನಿಯ ಈ ಜೆಟ್‌ನಲ್ಲಿ ಕ್ಯಾಟರಿಂಗ್‌ನ ವರ್ಲ್ಡ್‌ ಕ್ಲಾಸ್‌ ಸೌಲಭ್ಯದೊಂದಿಗೆ ಮನರಂಜನೆಗೆ ಬೇಕಾದ ಎಲ್ಲಾ ವ್ಯವಸ್ಥೆಯೂ ಇದೆ.
undefined
ಮುಕೇಶ್ ಅಂಬಾನಿಯ ಈ ಜೆಟ್‌ ಒಳಗಿನಿಂದ ಯಾವುದೇ ಅರಮನೆಗಿಂತ ಕಡಿಮೆ ಇಲ್ಲ. ಇಲ್ಲಿ ವಿಭಿನ್ನ ವಿಭಾಗಗಳಿದ್ದು, ಭಾರೀ ಐಷಾರಾಮಿ ವ್ಯವಸ್ಥೆ ಇದೆ.
undefined
ಮುಕೇಶ್ ಅಂಬಾನಿ ತನ್ನ ಬೋಯಿಂಗ್ ಜೆಟ್‌ನ ಇಂಟೀರಿಯರ್ ಡಿಸೈನಿಂಗ್ ವಿಶೇಷವಾಗಿ ತನ್ನಿಷ್ಟದಂತೆ ಮಾಡಿಸಿದ್ದಾರೆ.
undefined
ಇಲ್ಲಿ ಕೆಲ ಭಾಗಗಳ ಡಿಸೈನಿಂಗ್ ಆಂಟಿಕ್ ಥೀಮ್‌ ಅನ್ವಯ ಮಾಡಿಸಲಾಗಿದೆ. ಅಲ್ಲಿರುವ ಸೌಲಭ್ಯಗಳೂ ವರ್ಲ್ಡ್‌ ಕ್ಲಾಸ್‌ ಆಗಿವೆ.
undefined
ಸಾಮಾನ್ಯವಾಗಿ ಪ್ರೈವೇಟ್ ಜೆಟ್ ವಿಮಾನಗಳಲ್ಲಿ 6-7 ಕ್ಕಿಂತ ಹೆಚ್ಚು ಮಂದಿಗೆ ಜಾಗವಿರುವುದಿಲ್ಲ. ಆದರೆ ಮುಕೇಶ್‌ ಅಂಬಾನಿಯವರ ಈ ಜೆಟ್‌ನಲ್ಲಿ ಹೆಚ್ಚು ಮಂದಿ ಪ್ರಯಾಣಿಸಬಹುದು.
undefined
ಈ ಜೆಟ್‌ನಲ್ಲಿ ವಿಶ್ವದ ಖಾಸಗಿ ವಿಮಾನಗಳಲ್ಲಿರುವ ಎಲ್ಲಾ ಸೌಲಭ್ಯಗಳೂ ಇವೆ.
undefined
ದೀರ್ಘ ಕಾಲದ ಪ್ರಯಾಣದ ವೇಳೆ ವಿಶ್ರಾಂತಿ ಪಡೆಯಲು ಮುಕೇಶ್ ಅಂಬಾನಿಯವರು ಇದರಲ್ಲಿ ಬೆಡ್‌ರೂಂ ಕೂಡಾ ಮಾಡಿಸಿದ್ದಾರೆ. ಇದು ಭಾರತದಲ್ಲಿರುವ ಎಲ್ಲಾ ಖಾಸಗಿ ವಿಮಾನಗಳ ಪೈಕಿ ಅತಿ ಹೆಚ್ಚು ಐಷಾರಾಮಿ ಹಾಗೂ ದುಬಾರಿಯಾಗಿದೆ.
undefined
click me!