ಮಳೆಗಾಲದಲ್ಲಿ ಕೆಲವು ವ್ಯವಹಾರಗಳನ್ನು ಆರಂಭಿಸುವ ಮೂಲಕ ಉತ್ತಮ ಲಾಭ ಗಳಿಸಬಹುದು. ಈ ವ್ಯವಹಾರದ ಅವಧಿ ಸೀಮಿತವಾಗಿದ್ದರೂ ಲಾಭದ ಪ್ರಮಾಣ ಅಧಿಕವಾಗಿರುತ್ತದೆ. ಈಗಾಗಲೇ ವ್ಯಾಪಾರ ಮಾಡುತ್ತಿದ್ದರೆ, ನಿಮ್ಮ ವ್ಯವಹಾರವನ್ನು ವಿಸ್ತರಿಸಿಕೊಳ್ಳಲು ಇದು ಒಳ್ಳೆಯ ಸಮಯ.
ಮಳೆಗಾಲ ಆರಂಭವಾಗುತ್ತಿದ್ದು, ಈ ಸಮಯದಲ್ಲಿ ಕೆಲವು ವ್ಯವಹಾರಗಳನ್ನು ಆರಂಭಿಸುವ ಮೂಲಕ ಕೈ ತುಂಬಾ ಹಣ ಸಂಪಾದಿಸಬಹುದು. ಈ ವ್ಯವಹಾರದ ಅವಧಿ ಸೀಮಿತವಾಗಿದ್ರೂ ಲಾಭದ ಪ್ರಮಾಣ ಅಧಿಕವಾಗಿರುತ್ತದೆ.
27
ಈಗಾಗಲೇ ನೀವು ವ್ಯಾಪಾರ ಮಾಡುತ್ತಿದ್ರೆ, ನಿಮ್ಮ ವ್ಯವಹಾರವನ್ನು ವಿಸ್ತರಿಸಿಕೊಳ್ಳಲು ಇದು ಸದಾವಕಾಶವಾಗಿದೆ. ಈ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಹೊಸ ಗ್ರಾಹಕರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ. ಆ ವ್ಯವಹಾರಗಳು ಯಾವವು ಎಂಬುದನ್ನು ನೋಡೋಣ ಬನ್ನಿ.
37
1.ಛತ್ರಿ ಮಾರಾಟ
ಸ್ವಲ್ಪ ಮೋಡವಾದರೂ ಜನರು ಮನೆಯಿಂದ ಹೊರಗೆ ಹೋಗುವಾಗ ಕೈಯಲ್ಲಿ ಛತ್ರಿ ಹಿಡಿದುಕೊಂಡು ಹೋಗುತ್ತಾರೆ. ಹಾಗಾಗಿ ಈ ಸಮಯದಲ್ಲಿ ಛತ್ರಿಗೆ ಒಳ್ಳೆಯ ಬೇಡಿಕೆ ಇರುತ್ತದೆ. ಬಗೆ ಬಗೆ ಛತ್ರಿಗಳನ್ನು ಮಾರಾಟ ಮಾಡುವ ಮೂಲಕ ಹೆಚ್ಚು ಹಣವನ್ನು ಸಂಪಾದಿಸಬಹುದು. ಶಾಲೆಗೆ ಹೋಗುವ ಮಕ್ಕಳಿಗಂತ ಛತ್ರಿ ಅತ್ಯವಶ್ಯಕವಾಗಿರುತ್ತದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಇಷ್ಟವಾಗುವ ಛತ್ರಿಗಳನ್ನು ಮಾರಾಟ ಮಾಡಬೇಕಾಗುತ್ತದೆ.
ಮಳೆಗಾಲದಲ್ಲಿ ಮಾರಾಟವಾಗುವ ಮತ್ತೊಂದು ವಸ್ತು ಅಂದ್ರೆ ಅದು ರೇನ್ ಕೋಟ್. ಗದ್ದೆಯಲ್ಲಿ ಕೆಲಸ ಮಾಡುವ ರೈತ, ಬೈಕ್ ಸವಾರರು, ಶಾಲೆಗೆ ತೆರಳುವ ಮಕ್ಕಳು ಸಹ ಮಳೆಗಾಲದಲ್ಲಿ ರೇನ್ ಕೋಟ್ ಮೇಲೆ ಅವಲಂಬನೆ ಆಗಿರುತ್ತಾರೆ. ಮಳೆಗಾಲದಲ್ಲಿ ಉತ್ತಮ ಗುಣಮಟ್ಟದ ರೇನ್‌ಕೋಟ್ ಬೇಡಿಕೆಯನ್ನು ಹೊಂದಿರುತ್ತವೆ.
57
3.ಉಣ್ಣೆ ಬಟ್ಟೆಗಳು
ಮಳೆಗಾಲದಿಂದಲೇ ಉಣ್ಣೆ ಬಟ್ಟೆಗಳಿಗೆ ಮಾರುಕಟ್ಟೆ ಸೃಷ್ಟಿಯಾಗುತ್ತದೆ. ಜಾಕೆಟ್, ಹೂಡಿ ಸೇರಿದಂತೆ ಫ್ಯಾಶನ್ ಬಟ್ಟೆಗಳನ್ನು ಖರೀದಿಸಲು ಜನರು ಇಷ್ಟಪಡುತ್ತಾರೆ. ಉಣ್ಣೆ ಬಟ್ಟೆಗಳನ್ನು ಮಾರಾಟ ಮಾಡುವ ಮೂಲಕ ಹೆಚ್ಚು ಹಣವನ್ನು ಕಡಿಮೆ ಸಮಯದಲ್ಲಿ ಖರೀದಿಸಬಹುದು.
67
4.ಟೀ ವ್ಯಾಪಾರ
ಸ್ವಲ್ಪ ಮಳೆಯಾದರೂ ಜನರಿಗೆ ಬಿಸಿಯಾದ ಪಾನೀಯ ಕುಡಿಯುವ ಬಯಕೆ ಉಂಟಾಗುತ್ತದೆ. ಹಾಗಾಗಿ ಜನಸಂದಣಿ ಪ್ರದೇಶದಲ್ಲಿ ಟೀ ಶಾಪ್ ಆರಂಭಿಸಿದ್ರೆ ಇದರ ಲಾಭವೂ ಅತ್ಯಧಿಕವಾಗಿರುತ್ತದೆ. ಬೇಸಿಗೆಗೆ ಹೋಲಿಸಿದ್ರೆ ಮಳೆಗಾಲ ಮತ್ತು ಚಳಿಗಾಲದಲ್ಲಿ ಟೀ-ಕಾಫೀಗೆ ಹೆಚ್ಚು ಬೇಡಿಕೆ ಇರುತ್ತದೆ.
77
5.ಬಜ್ಜಿ, ಬೋಂಡಾ ಮಾರಾಟ
ಮಳೆಗಾಲದಲ್ಲಿ ಚುಮು ಚುಮು ಚಳಿಗೆ ಬಿಸಿಯಾದ ಬಜ್ಜಿ, ಬೋಂಡಾ ಎಲ್ಲರಿಗೂ ಇಷ್ಟವಾಗುತ್ತದೆ. ಈ ವ್ಯಾಪಾರ ವರ್ಷದ ಎಲ್ಲಾ ತಿಂಗಳಲ್ಲಿಯೂ ನಡೆಯುತ್ತದೆ. ಆದ್ರೆ ಈ ಬ್ಯುಸಿನೆಸ್ ಆರಂಭಿಸಲು ಮಳೆಗಾಲ ಸೂಕ್ತವಾದ ಸಮಯವಾಗಿದೆ.