ಚೀನಾದ ಮೇಲೆ ಅವಲಂಬನೆ ಮಾಡುವಲ್ಲಿ ದಿಟ್ಟ ಹೆಜ್ಜೆ ಇರಿಸಿದ ಮುಕೇಶ್ ಅಂಬಾನಿ

Published : May 25, 2025, 03:26 PM IST

ರಿಲಯನ್ಸ್ ಇಂಡಸ್ಟ್ರೀಸ್ ಈ ವರ್ಷ ಸೌರಶಕ್ತಿ ಫಲಕ ಉತ್ಪಾದನಾ ಘಟಕವನ್ನು ಆರಂಭಿಸಲಿದ್ದು, 20 ಗಿಗಾವ್ಯಾಟ್ ಸಾಮರ್ಥ್ಯದ ಗುರಿಯನ್ನು ಹೊಂದಿದೆ. ಬ್ಯಾಟರಿ ಮತ್ತು ಮೈಕ್ರೋ-ಪವರ್ ಎಲೆಕ್ಟ್ರಾನಿಕ್ಸ್ ಕಾರ್ಖಾನೆಗಳು ಮುಂದಿನ ವರ್ಷ ಕಾರ್ಯಾರಂಭ ಮಾಡಲಿವೆ.

PREV
15
ಉತ್ಪಾದನ ಘಟಕ ಆರಂಭ

ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಈ ವರ್ಷ ಸೌರಶಕ್ತಿ ಫಲಕ ಉತ್ಪಾದನಾ ಘಟಕ ಆರಂಭಿಸಲಿದೆ. ಹೊಸ ಇಂಧನ ಅವಶ್ಯಕತೆಗಳನ್ನು ಪೂರೈಸಲು ಮೂರು ದೊಡ್ಡ ಕಾರ್ಖಾನೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಸ್ಟ್ರಾಟಜಿ ಮತ್ತು ಇನಿಶಿಯೇಟಿವ್ಸ್ ವಿಭಾಗದ ಮುಖ್ಯಸ್ಥ ಪಾರ್ಥ ಎಸ್ ಮೈತ್ರ ತಿಳಿಸಿದ್ದಾರೆ.

25
ರಿಲಯನ್ಸ್ ಗುರಿ

ರಿಲಯನ್ಸ್ ವಾರ್ಷಿಕ 20 ಗಿಗಾವ್ಯಾಟ್ ಸೌರಶಕ್ತಿ ಫಲಕ ಉತ್ಪಾದನಾ ಸಾಮರ್ಥ್ಯವನ್ನು ತಲುಪುವ ಗುರಿ ಹೊಂದಿದೆ ಎಂದು ಮೈತ್ರ ಹೇಳಿದ್ದಾರೆ. ಕಂಪನಿಯ ಬ್ಯಾಟರಿ ಮತ್ತು ಮೈಕ್ರೋ-ಪವರ್ ಎಲೆಕ್ಟ್ರಾನಿಕ್ಸ್ ಕಾರ್ಖಾನೆಗಳು ಮುಂದಿನ ವರ್ಷ ಕಾರ್ಯಾರಂಭ ಮಾಡಲಿವೆ ಎಂದು ಹೇಳಿದರು. ಇದು ಸಾಧ್ಯವಾದರೆ, ರಿಲಯನ್ಸ್ ವಿಶ್ವದ ಎರಡನೇ ಅತಿದೊಡ್ಡ ಸೌರಶಕ್ತಿ ಫಲಕ ತಯಾರಕ ಕಂಪನಿಯಾಗಲಿದೆ. ಚೀನಾ ಹೊರತುಪಡಿಸಿ ಒಟ್ಟು ಸೌರ ಮಾಡ್ಯೂಲ್‌ಗಳಲ್ಲಿ ರಿಲಯನ್ಸ್‌ನ ಪಾಲು ಗಣನೀಯವಾಗಿರುತ್ತದೆ.

35
ಗ್ಲೋಬಲ್ ಎನರ್ಜಿ ಮಾನಿಟರ್ ವರದಿ

2022 ರಲ್ಲಿ ನಿಗದಿಪಡಿಸಿದ್ದ ಶುದ್ಧ ಇಂಧನ ಗುರಿಗಳನ್ನು ತಲುಪುವಲ್ಲಿ ಭಾರತ ಹಿನ್ನಡೆ ಅನುಭವಿಸಿತ್ತು. ನಂತರ ದೇಶವು ಈ ಕ್ಷೇತ್ರದಲ್ಲಿ ಹೂಡಿಕೆಯನ್ನು ಹೆಚ್ಚಿಸಿದೆ. 2030 ರ ವೇಳೆಗೆ 500 ಗಿಗಾವ್ಯಾಟ್ ಫಾಸಿಲ್ ಇಂಧನೇತರ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಗುರಿಯನ್ನು ತಲುಪಲು ಮುಂದಿನ ಐದು ವರ್ಷಗಳಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ದ್ವಿಗುಣಗೊಳಿಸಬೇಕು ಎಂದು ಗ್ಲೋಬಲ್ ಎನರ್ಜಿ ಮಾನಿಟರ್ ವರದಿ ತಿಳಿಸಿದೆ.

45
ಚೀನಾದ ಪ್ರಾಬಲ್ಯ ಕಡಿಮೆ

ಪ್ರಸ್ತುತ, ಸೌರಶಕ್ತಿ ಉಪಕರಣಗಳ ಆಮದಿಗೆ ಭಾರತ ಚೀನಾವನ್ನು ಹೆಚ್ಚು ಅವಲಂಬಿಸಿದೆ. ಇದು ದೇಶದ ಇಂಧನ ಭದ್ರತೆಗೆ ಅಪಾಯಕಾರಿ. ಮಾಡ್ಯೂಲ್‌ಗಳು ಮತ್ತು ಬ್ಯಾಟರಿಗಳನ್ನು ಭಾರತದಲ್ಲಿಯೇ ತಯಾರಿಸಲಾಗುತ್ತಿದೆಯಾದರೂ, ವೇಫರ್‌ಗಳು ಮತ್ತು ಇಂಗಟ್‌ಗಳ ಉತ್ಪಾದನೆಯು ಇನ್ನೂ ಕೇವಲ 2 ಗಿಗಾವ್ಯಾಟ್ ಸಾಮರ್ಥ್ಯದಲ್ಲಿದೆ.

55
ಪಿಎಂ ಸೂರ್ಯ ಘರ್ ಯೋಜನೆ

ಸರ್ಕಾರ ದೇಶದಲ್ಲಿ ಸೌರಶಕ್ತಿ ಉತ್ಪಾದನೆಯನ್ನು ಉತ್ತೇಜಿಸಲು ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇದರ ಭಾಗವಾಗಿ ಬಜೆಟ್‌ನಲ್ಲಿ ಪಿಎಂ ಸೂರ್ಯ ಘರ್ ಯೋಜನೆಯನ್ನು ಘೋಷಿಸಲಾಗಿತ್ತು. 2 ಕಿಲೋವ್ಯಾಟ್ ಸಾಮರ್ಥ್ಯದ ವ್ಯವಸ್ಥೆಗಳಿಗೆ ಸೌರ ಘಟಕದ ವೆಚ್ಚದ 60% ಮತ್ತು 2 ರಿಂದ 3 ಕಿಲೋವ್ಯಾಟ್ ಸಾಮರ್ಥ್ಯದ ವ್ಯವಸ್ಥೆಗಳಿಗೆ ಹೆಚ್ಚುವರಿ ವ್ಯವಸ್ಥೆಯ ವೆಚ್ಚದ 40% ಸಬ್ಸಿಡಿಯಾಗಿ ಈ ಯೋಜನೆಯ ಮೂಲಕ ಲಭ್ಯವಾಗಲಿದೆ.

Read more Photos on
click me!

Recommended Stories