ಈಗಿನ ಎಐ ಜಮಾನದಲ್ಲಿ ಯಾರಿಗೆ ಎಷ್ಟು ವರ್ಷ ಉದ್ಯೋಗವಿರುತ್ತೆ ಅನ್ನೋದನ್ನು ಹೇಳೋಕಾಗಲ್ಲ. ಹೀಗಾಗಿ ಪೋಸ್ಟ್ ಆಫೀಸ್‌ನಲ್ಲಿ ಕೆಲವೇ ಕೆಲವು ಲಕ್ಷ ರುಪಾಯಿಗಳನ್ನು ಹೂಡಿಕೆ ಮಾಡಿದರೆ ನೀವು ಪ್ರತಿ ತಿಂಗಳು ತಲಾ 9.250 ರುಪಾಯಿ ಬಡ್ಡಿ ರೂಪದಲ್ಲಿ ಖಚಿತ ಆದಾಯ ಪಡೆಯಬಹುದು. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ.
ಪ್ರತಿ ತಿಂಗಳು ಖಚಿತ ಆದಾಯ ಬಯಸುವವರಿಗೆ ಇದು ಒಳ್ಳೆಯ ಆಯ್ಕೆ
ಸ್ಥಿರ ಆದಾಯ ಗಳಿಸಬೇಕು ಅನ್ನೋದು ಎಲ್ಲರ ಆಸೆ. ಪ್ರತಿ ತಿಂಗಳು ಖಚಿತ ಆದಾಯ ಬೇಕು ಎನ್ನುವವರಿಗೆ ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ (Monthly Income Scheme) ಒಂದು ಅತ್ಯುತ್ತಮ ಆಯ್ಕೆಯಾಗಿದೆ. ಸದ್ಯ ಈ ಯೋಜನೆಯಲ್ಲಿ ವಾರ್ಷಿಕ 7.40% ಬಡ್ಡಿ ಸಿಗುತ್ತಿದೆ. ಕೇಂದ್ರ ಸರ್ಕಾರವು ಪ್ರತಿ ಮೂರು ತಿಂಗಳಿಗೊಮ್ಮೆ ಈ ಬಡ್ಡಿ ದರವನ್ನು ಪರಿಶೀಲಿಸುತ್ತದೆ. ಅಗತ್ಯಕ್ಕೆ ತಕ್ಕಂತೆ ಇದನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು.
26
ಪೋಸ್ಟ್ ಆಫೀಸ್ ತಿಂಗಳ ಆದಾಯ ಯೋಜನೆ
ಪೋಸ್ಟ್ ಆಫೀಸ್ ತಿಂಗಳ ಆದಾಯ ಯೋಜನೆ(Post Office Monthly Income Scheme)ಯಲ್ಲಿ ಕನಿಷ್ಠ ₹1,000 ಹೂಡಿಕೆ ಮಾಡಬಹುದು. ಒಬ್ಬರ ಹೆಸರಲ್ಲಿ ಗರಿಷ್ಠ ₹9 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಜಂಟಿ ಖಾತೆಯಾದರೆ ಗರಿಷ್ಠ ₹15 ಲಕ್ಷದವರೆಗೆ ಹೂಡಿಕೆ ಮಾಡಲು ಅವಕಾಶವಿದೆ. ಬಡ್ಡಿಯನ್ನು ಪ್ರತಿ ತಿಂಗಳು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಹೀಗಾಗಿ, ಇದು ಪಿಂಚಣಿಯಂತೆ ನಿಯಮಿತ ಆದಾಯ ನೀಡುತ್ತದೆ.
36
ಯೋಜನೆ ಅವಧಿ ಎಷ್ಟು?
ಈ ಯೋಜನೆಯ ಅವಧಿ 5 ವರ್ಷಗಳು. ನೀವು ಖಾತೆ ತೆರೆದ ದಿನದಿಂದ ಐದು ವರ್ಷ ಪೂರ್ತಿಯಾಗುವವರೆಗೆ ಪ್ರತಿ ತಿಂಗಳು ಬಡ್ಡಿ ಹಣ ಸಿಗುತ್ತದೆ. ಮೆಚ್ಯೂರಿಟಿ ಅವಧಿ ಮುಗಿದ ನಂತರ, ನೀವು ಹೂಡಿಕೆ ಮಾಡಿದ ಪೂರ್ತಿ ಅಸಲು ಹಣವನ್ನು ವಾಪಸ್ ಪಡೆಯುತ್ತೀರಿ. ಅಂದರೆ, ನಿಮ್ಮ ಹೂಡಿಕೆಯೂ ಸುರಕ್ಷಿತವಾಗಿರುತ್ತದೆ ಮತ್ತು ಬಡ್ಡಿಯೂ ನಿರಂತರವಾಗಿ ಬರುತ್ತದೆ. ಇದು ಸರ್ಕಾರಿ ಭರವಸೆಯ ಯೋಜನೆ ಆಗಿರುವುದರಿಂದ ಇದರಲ್ಲಿ ಯಾವುದೇ ರಿಸ್ಕ್ ಇಲ್ಲ.
ಪ್ರತಿ ತಿಂಗಳು ₹5,550 ಬಡ್ಡಿ ಪಡೆಯಲು ಎಷ್ಟು ಹೂಡಿಕೆ ಮಾಡಬೇಕು?
ನೀವು ಎಷ್ಟು ಹೂಡಿಕೆ ಮಾಡುತ್ತೀರೋ, ಅಷ್ಟೇ ಪ್ರಮಾಣದ ಬಡ್ಡಿ ಸಿಗುತ್ತದೆ. ಉದಾಹರಣೆಗೆ, ನೀವು ₹4 ಲಕ್ಷ ಹೂಡಿಕೆ ಮಾಡಿದರೆ, ತಿಂಗಳಿಗೆ ಸುಮಾರು ₹2,467 ಬರುತ್ತದೆ. ಒಬ್ಬರ ಹೆಸರಿನಲ್ಲಿ ಗರಿಷ್ಠ ಮಿತಿಯಾದ ₹9 ಲಕ್ಷ ಹೂಡಿಕೆ ಮಾಡಿದರೆ, ತಿಂಗಳಿಗೆ ಸುಮಾರು ₹5,550 ಬಡ್ಡಿ ಸಿಗುತ್ತದೆ. ಈ ಲೆಕ್ಕಾಚಾರವನ್ನು ಸಂಪೂರ್ಣವಾಗಿ 7.40% ಬಡ್ಡಿ ದರದ ಆಧಾರದ ಮೇಲೆ ಮಾಡಲಾಗಿದೆ.
56
ಪ್ರತಿ ತಿಂಗಳು 9,250 ರುಪಾಯಿ ಬಡ್ಡಿ ಬೇಕು ಎಂದರೇ ಎಷ್ಟು ಲಕ್ಷ ಹೂಡಿಕೆ ಮಾಡಬೇಕು?
ನೀವು ಜಂಟಿ ಖಾತೆ ತೆರೆದು ಗರಿಷ್ಠ ₹15 ಲಕ್ಷ ಹೂಡಿಕೆ ಮಾಡಬಹುದು. ಈ ಮೊತ್ತದ ಮೇಲೆ 7.40% ಬಡ್ಡಿ ದರದ ಪ್ರಕಾರ, ತಿಂಗಳಿಗೆ ಸುಮಾರು ₹9,250 ಆದಾಯ ಸಿಗುತ್ತದೆ. ಅಂದರೆ, ಇದು ಸರಿಸುಮಾರು ₹10,000 ಇದ್ದಂತೆ. ಪತಿ-ಪತ್ನಿ ಅಥವಾ ಇಬ್ಬರು ವಯಸ್ಕರು ಒಟ್ಟಿಗೆ ಖಾತೆ ತೆರೆದು ಈ ಗರಿಷ್ಠ ಮಿತಿಯ ಲಾಭ ಪಡೆಯಬಹುದು. ಐದು ವರ್ಷಗಳ ಕಾಲ ಪ್ರತಿ ತಿಂಗಳು ಈ ಹಣ ಬರುತ್ತದೆ. ಅವಧಿ ಮುಗಿದ ನಂತರ, ನಿಮ್ಮ ₹15 ಲಕ್ಷ ಅಸಲು ಹಣ ವಾಪಸ್ ಸಿಗುತ್ತದೆ.
66
ಸೇಫ್ ಇನ್‌ವೆಸ್ಟ್‌ಮೆಂಟ್ ಆಲೋಚನೆ ಇರುವವರಿಗೆ POMIS ಒಳ್ಳೆಯ ಆಯ್ಕೆ
ನಿವೃತ್ತ ನೌಕರರು, ಸುರಕ್ಷಿತ ಹೂಡಿಕೆ ಬಯಸುವವರು, ಪ್ರತಿ ತಿಂಗಳು ಸ್ಥಿರ ಆದಾಯ ಬೇಕು ಎನ್ನುವವರು ಮತ್ತು ಶೇರು ಮಾರುಕಟ್ಟೆಯಂತಹ ರಿಸ್ಕ್ ಇರುವ ಹೂಡಿಕೆಗಳಿಂದ ದೂರವಿರಲು ಬಯಸುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ಯಾವುದೇ ರಿಸ್ಕ್ ಇಲ್ಲದೆ ಪ್ರತಿ ತಿಂಗಳು ಆದಾಯ ಗಳಿಸಬೇಕೆಂದರೆ POMIS (ಮಾಸಿಕ ಆದಾಯ ಯೋಜನೆ) ಒಂದು ಸರಿಯಾದ ಆಯ್ಕೆ. ಹೂಡಿಕೆಯ ಸುರಕ್ಷತೆಯ ಜೊತೆಗೆ ಸ್ಥಿರ ಆದಾಯ ನೀಡುವುದು ಈ ಯೋಜನೆಯ ವಿಶೇಷತೆಯಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.