ಅಂಚೆ ಕಚೇರಿಯ MIS ಸ್ಕೀಂನಲ್ಲಿ ₹1,00,000 ಠೇವಣಿ ಇಟ್ರೆ ಪ್ರತಿ ತಿಂಗಳು ಎಷ್ಟು ಬಡ್ಡಿ ಸಿಗುತ್ತೆ?

Published : Aug 13, 2025, 07:08 PM IST

ಒಂದು ವೇಳೆ ಅಂಚೆ ಕಚೇರಿಯ ಎಂಐಎಸ್ ಯೋಜನೆಯಲ್ಲಿ ನೀವು 1 ಲಕ್ಷ ರೂ.ಠೇವಣಿ (Deposit) ಇಟ್ಟರೆ ಪ್ರತಿ ತಿಂಗಳು ಎಷ್ಟು ಬಡ್ಡಿ ಸಿಗುತ್ತದೆ ಗೊತ್ತಾ?.

PREV
16

Post Office MIS scheme: ಭಾರತದ ಅಂಚೆ ಇಲಾಖೆಯು ದೇಶದ ಸಾಮಾನ್ಯ ನಾಗರಿಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿವಿಧ ರೀತಿಯ ಉಳಿತಾಯ ಯೋಜನೆಗಳನ್ನು ನಡೆಸುತ್ತದೆ. ಆರ್‌ಡಿ, ಟಿಡಿ, ಎಂಐಎಸ್, ಪಿಪಿಎಫ್, ಕಿಸಾನ್ ವಿಕಾಸ್ ಪತ್ರ (KVP) ಸೇರಿದಂತೆ ಹಲವು ರೀತಿಯ ಖಾತೆಗಳನ್ನು ಅಂಚೆ ಕಚೇರಿಯಲ್ಲಿ ತೆರೆಯಬಹುದು.

26

ಅಂಚೆ ಕಚೇರಿಯ ಎಂಐಎಸ್ (MIS) ಅಂದರೆ ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆದಾರರು ಪ್ರತಿ ತಿಂಗಳು ಸ್ಥಿರ ಬಡ್ಡಿ (Fixed Interest) ಪಡೆಯುತ್ತಾರೆ. ಈ ಬಡ್ಡಿ ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಒಂದು ವೇಳೆ ಅಂಚೆ ಕಚೇರಿಯ ಎಂಐಎಸ್ ಯೋಜನೆಯಲ್ಲಿ ನೀವು 1 ಲಕ್ಷ ರೂ.ಠೇವಣಿ (Deposit) ಇಟ್ಟರೆ ಪ್ರತಿ ತಿಂಗಳು ಎಷ್ಟು ಬಡ್ಡಿ ಸಿಗುತ್ತದೆ ಗೊತ್ತಾ?.

36

ಅಂಚೆ ಕಚೇರಿ ತನ್ನ ಗ್ರಾಹಕರಿಗೆ ಮಾಸಿಕ ಆದಾಯ ಯೋಜನೆ(MIS)ಯ ಮೇಲೆ ಶೇಕಡ 7.6 ರಷ್ಟು ವಾರ್ಷಿಕ ಬಡ್ಡಿ ನೀಡುತ್ತಿದ್ದು, ಅಂಚೆ ಕಚೇರಿಯ MIS ಯೋಜನೆಯಲ್ಲಿ ಕನಿಷ್ಠ 1000 ರೂ.ಗಳನ್ನು ಠೇವಣಿ ಮಾಡಬಹುದು.

46

ಈ ಯೋಜನೆಯಡಿಯಲ್ಲಿ ಒಂದೇ ಖಾತೆಯಲ್ಲಿ ಗರಿಷ್ಠ 9 ಲಕ್ಷ ರೂ. ಠೇವಣಿ ಮಾಡಬಹುದು. ಒಂದು ವೇಳೆ ನೀವು ಜಂಟಿ ಖಾತೆ (Joint account) ತೆರೆದರೆ ನೀವು ಅದರಲ್ಲಿ ಗರಿಷ್ಠ 15 ಲಕ್ಷ ರೂ.ಗಳನ್ನು ಠೇವಣಿ ಮಾಡಬಹುದು. ಜಂಟಿ ಖಾತೆಯಲ್ಲಿ ಗರಿಷ್ಠ 3 ಜನರನ್ನು ಸೇರಿಸಿಕೊಳ್ಳಬಹುದು.

56

ನೀವು ಇನ್ನೂ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ತೆರೆಯದಿದ್ದರೆ MIS ಯೋಜನೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸುವ ಮೊದಲು ನೀವು ಉಳಿತಾಯ ಖಾತೆ(Savings account)ಯನ್ನು ತೆರೆಯಬೇಕಾಗುತ್ತದೆ.

66

ಅಂದಹಾಗೆ ಅಂಚೆ ಕಚೇರಿಯ ಈ ಯೋಜನೆಯು 5 ವರ್ಷಗಳಲ್ಲಿ ಮುಕ್ತಾಯಗೊಳ್ಳುತ್ತದೆ. ನೀವು ಅಂಚೆ ಕಚೇರಿಯ MIS ಯೋಜನೆಯಲ್ಲಿ 1,00,000ರೂ. ಠೇವಣಿ ಇಟ್ಟರೆ ನಿಮಗೆ ಪ್ರತಿ ತಿಂಗಳು 633 ರೂ.ಸ್ಥಿರ ಬಡ್ಡಿ ಸಿಗುತ್ತದೆ. ಇದರೊಂದಿಗೆ ಮುಕ್ತಾಯದ ನಂತರ ನಿಮ್ಮ ಸಂಪೂರ್ಣ 1,00,000 ರೂ. ಅನ್ನು ಸಹ ಹಿಂತಿರುಗಿಸಲಾಗುತ್ತದೆ.

Read more Photos on
click me!

Recommended Stories