ಭಾರತದಲ್ಲಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಚೇತರಿಕೆ, ನಂ.1 ಬ್ರ್ಯಾಂಡ್‌ ಪಟ್ಟಕ್ಕೇರಿದ ವಿವೋ!

Published : Aug 12, 2025, 01:20 PM IST

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆ ಎರಡೂವರೆ ವರ್ಷಗಳ ನಂತರ ಚೇತರಿಸಿಕೊಂಡಿದೆ. ಹೊಸ ಮಾದರಿಗಳ ಬಿಡುಗಡೆ, ಹೆಚ್ಚಿದ ಲಾಭಾಂಶ ಮತ್ತು ಮಾರ್ಕೆಟಿಂಗ್ ಚಟುವಟಿಕೆಗಳು ಈ ಬೆಳವಣಿಗೆಗೆ ಕಾರಣ. ಆದರೆ, ಹೆಚ್ಚಿದ ಮಾರಾಟ ಬೆಲೆಗಳ ಕಾರಣದಿಂದ ಬೇಡಿಕೆ ಕುಸಿಯುವ ಸಾಧ್ಯತೆಯಿದೆ.

PREV
18

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆ ಎರಡೂವರೆ ವರ್ಷಗಳ ನಂತರ ಮತ್ತೆ ಚೇತರಿಸಿಕೊಂಡಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ. ಎರಡನೇ ತ್ರೈಮಾಸಿಕದಲ್ಲಿ (Q2) ಸ್ಮಾರ್ಟ್‌ಫೋನ್ ಸಾಗಾಣಿಕೆಯಲ್ಲಿ ಶೇಕಡಾ 7-8 ರಷ್ಟು ಬೆಳವಣಿಗೆಯಾಗಿದ್ದು, ಸರಿಸುಮಾರು 37-38 ಮಿಲಿಯನ್ ಯುನಿಟ್‌ಗಳು ಮಾರಾಟವಾಗಿವೆ. ಹೊಸ ಮಾದರಿಗಳ ಬಿಡುಗಡೆ, ಹೆಚ್ಚಿದ ಲಾಭಾಂಶ ಮತ್ತು ಮಾರ್ಕೆಟಿಂಗ್ ಚಟುವಟಿಕೆಗಳು ಈ ಬೆಳವಣಿಗೆಗೆ ಮುಖ್ಯ ಕಾರಣಗಳಾಗಿವೆ.

28

ಪ್ರಮುಖ ಬ್ರಾಂಡ್‌ಗಳ ಮಾರುಕಟ್ಟೆ ಪಾಲು: ಮಾರುಕಟ್ಟೆ ಪಾಲುದಾರಿಕೆಯ ದೃಷ್ಟಿಯಿಂದ, Vivo, Samsung, Oppo, Realme ಮತ್ತು Xiaomi ದೇಶದಲ್ಲಿ ಮುಂಚೂಣಿಯಲ್ಲಿರುವ ಬ್ರ್ಯಾಂಡ್‌ ಆಗಿದೆ.

38

Vivo: ಶೇಕಡಾ 21.0 ರಷ್ಟು ಮಾರುಕಟ್ಟೆ ಪಾಲಿನೊಂದಿಗೆ ಅಗ್ರಸ್ಥಾನದಲ್ಲಿದ್ದರೆ, Samsung ಕಂಪನಿ ಶೇಕಡಾ 16.0 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. Oppo ಶೇಕಡಾ 13.0 ರಷ್ಟು ಪಾಲನ್ನು ಹೊಂದಿರುವ ಮೂಲಕ ಮೂರನೇ ಸ್ಥಾನದಲ್ಲಿದೆ.

48

Realme ಕಂಪನಿ ಶೇಕಡಾ 10.0 ರಷ್ಟು ಪಾಲನ್ನು ಹೊಂದುವ ಮೂಲಕ ನಾಲ್ಕನೇ ಸ್ಥಾನದಲ್ಲಿದ್ದು, Xiaomi ಶೇಕಡಾ 13.0 ರಷ್ಟು ಮಾರುಕಟ್ಟೆ ಪಾಲಿನೊಂದಿಗೆ ಗಮನಾರ್ಹ ಪ್ರಗತಿ ಸಾಧಿಸಿ ಐದನೇ ಸ್ಥಾನದಲ್ಲಿದೆ.

58

ಇನ್ನು ಆಪಲ್ ತನ್ನ ಬಲವಾದ ಕಾರ್ಯಕ್ಷಮತೆಯನ್ನು ಮುಂದುವರೆಸಿದೆ, ಐಫೋನ್ 16 ಅರ್ಧ ವರ್ಷದ ಮೊದಲ ಭಾಗದಲ್ಲಿ ಅತಿ ಹೆಚ್ಚು ಮಾರಾಟವಾದ ವೇರಿಯಂಟ್‌ ಆಗಿ ಹೊರಹೊಮ್ಮಿದೆ. ಆಪಲ್‌ನ ಒಟ್ಟಾರೆ ಸಾಗಣೆಯು ವರ್ಷದಿಂದ ವರ್ಷಕ್ಕೆ ಶೇಕಡಾ 21.5 ರಷ್ಟು ಹೆಚ್ಚಳ ಕಂಡಿದೆ.

68

ಆಫ್‌ಲೈನ್ ಚಾನೆಲ್‌ಗಳ ಮೂಲಕದ ಮಾರಾಟವು ವರ್ಷದಿಂದ ವರ್ಷಕ್ಕೆ ಶೇಕಡಾ 14.3 ರಷ್ಟು ಹೆಚ್ಚಿದ್ದು, ಅದರ ಮಾರುಕಟ್ಟೆ ಪಾಲು ಶೇಕಡಾ 53.6 ಕ್ಕೆ ಏರಿದೆ. ಆದರೆ, ಆನ್‌ಲೈನ್ ಮಾರಾಟ ಚಾನೆಲ್‌ಗಳು ಎರಡನೇ ತ್ರೈಮಾಸಿಕದಲ್ಲಿ ಸ್ಥಿರವಾಗಿವೆ.

78

ಸರಾಸರಿ ಮಾರಾಟ ಬೆಲೆ ಕೂಡ ಹೆಚ್ಚಳವಾಗಿದೆ. ಎರಡನೇ ತ್ರೈಮಾಸಿಕದಲ್ಲಿ ಸ್ಮಾರ್ಟ್‌ಫೋನ್‌ಗಳ ಸರಾಸರಿ ಮಾರಾಟ ಬೆಲೆ ಶೇಕಡಾ 10.8 ರಷ್ಟು ಹೆಚ್ಚಾಗಿ, 275 ಡಾಲರ್‌ಗೆ ತಲುಪಿದೆ.

88

ಮಾರುಕಟ್ಟೆ ಪುನಃ ಚೇತರಿಸಿಕೊಳ್ಳುತ್ತಿದ್ದರೂ, ಹೆಚ್ಚಿದ ಮಾರಾಟ ಬೆಲೆಗಳ ಕಾರಣದಿಂದ ಬೇಡಿಕೆ ಕುಸಿಯುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಎಚ್ಚರಿಕೆ ನೀಡಿದ್ದಾರೆ. ಆದರೂ, ಹೊಸ ಮಾದರಿಗಳ ಬಿಡುಗಡೆಯು ವರ್ಷದ ಕೊನೆಯಲ್ಲಿ ಮಾರುಕಟ್ಟೆಯ ಚೇತರಿಕೆಗೆ ಮತ್ತಷ್ಟು ಉತ್ತೇಜನ ನೀಡಬಹುದು ಎಂದು ನಿರೀಕ್ಷಿಸಲಾಗಿದೆ.

Read more Photos on
click me!

Recommended Stories