ಬೆಂಗಳೂರು: ಇಂದು ಅಸ್ಸಾಂ, ಪುದುಚೆರಿ ಹಾಗೂ ಕೇರಳದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ನಮ್ಮ ರಾಜ್ಯದ ಎರಡು ಕ್ಷೇತ್ರಗಳಲ್ಲೂ ಉಪ ಚುನಾವಣೆ ನಡೆಯುತ್ತಿದೆ. ಹೀಗಿರುವಾಗಲೇ ಇಂದು ಚಿನ್ನದ ಬೆಲೆಯಲ್ಲಿ ಭಾರೀ ಇಳಿ ಕಂಡಿದೆ. ಇಂದು ನಮ್ಮ ರಾಜ್ಯದಲ್ಲಿ ಚಿನ್ನದ ರೇಟ್ ಎಷ್ಟು ನೋಡೋಣ ಬನ್ನಿ.
ವಿಧಾನಸಭಾ ಚುನಾವಣೆ ಬೆನ್ನಲ್ಲೇ ಭಾರೀ ಇಳಿಕೆ ಕಂಡ ಚಿನ್ನದ ಬೆಲೆ
ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಕೇರಳ, ಅಸ್ಸಾಂ ಹಾಗೂ ಪುದುಚೆರಿಯಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಇದಷ್ಟೇ ಅಲ್ಲದೇ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆಯಲ್ಲಿ ಇಂದು ಉಪಚುನಾವಣೆ ನಡೆಯುತ್ತಿದೆ. ಹೀಗಿರುವಾಗಲೇ ಇಂದು ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡಿದೆ.
26
ನಿನ್ನೆ ಒಂದೇ ದಿನ ಪ್ರತಿ ಗ್ರಾಮ್‌ಗೆ 398 ರುಪಾಯಿ ಏರಿಕೆಯಾಗಿತ್ತು
ಏಪ್ರಿಲ್ 08ರ ನಿನ್ನೆ ಒಂದೇ ದಿನ 24 ಕ್ಯಾರಟ್ ಒಂದು ಗ್ರಾಮ್ ಚಿನ್ನದ ಬೆಲೆ ಬರೋಬ್ಬರಿ 398 ರುಪಾಯಿ ಏರಿಕೆ ಕಂಡಿತ್ತು. ಇರಾನ್-ಅಮೆರಿಕ ಕದನ ವಿರಾಮ ಘೋಷಣೆಯ ಬೆನ್ನಲ್ಲೇ ಚಿನ್ನದ ಬೆಲೆ ಏರಿಕೆ ಕಂಡಿತ್ತು. ಇಂದೂ ಕೂಡಾ ಚಿನ್ನದ ಬೆಲೆ ಏರಿಕೆಯಾಗುವ ಭೀತಿಯಲ್ಲಿದ್ದ ಆಭರಣ ಖರೀದಿಸುವ ಗ್ರಾಹಕರಿಗೆ ಇದೀಗ ಶುಭ ಸುದ್ದಿ ಸಿಕ್ಕಿದೆ.
36
24 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ 2,340 ಕುಸಿತ
ಹೌದು, ಏಪ್ರಿಲ್ 09ರ ಇಂದು ಪ್ರತಿ 10 ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 2340 ರುಪಾಯಿ ಇಳಿಕೆ ಕಂಡಿದೆ. ಈ ಮೂಲಕ ಇಂದು ಒಂದು ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆ 15,148 ರುಪಾಯಿಗಳಾಗಿವೆ.
22 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ 2150 ರುಪಾಯಿ ಕುಸಿತ
ಇನ್ನೊಂದೆಡೆ ಆಭರಣ ಚಿನ್ನವಾಗಿರುವ 22 ಕ್ಯಾರಟ್ ಪ್ರತಿ ಗ್ರಾಮ್ ಚಿನ್ನದ ಬೆಲೆ ನಿನ್ನೆ 14,100 ರುಪಾಯಿಗಳಾಗಿತ್ತು. ಆದರೆ ಇದೀಗ ಇಂದು 22 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ 2150 ರುಪಾಯಿ ಇಳಿಕೆ ಕಂಡಿದ್ದು, ಗ್ರಾಮ್‌ಗೆ 13,885 ರುಪಾಯಿಗಳಾಗಿವೆ.
56
ಮದುವೆ ಸೀಸನ್‌ನಲ್ಲಿ ಇಳಿದ ಚಿನ್ನದ ಬೆಲೆ
ಒಟ್ಟಿನಲ್ಲಿ ಇಂದು ಒಂದೇ ದಿನ 10 ಗ್ರಾಮ್ ಚಿನ್ನದ ಮೇಲೆ ಸರಾಸರಿ 2000 ರುಪಾಯಿ ಇಳಿಕೆ ಕಂಡಿರುವುದು ಮದುವೆಗೆ, ಶುಭ ಸಮಾರಂಭಗಳಿಗೆ ಆಭರಣ ಖರೀದಿಸುವವ ಮುಖದಲ್ಲಿ ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ.
66
ಬೆಳ್ಳಿ ಬೆಲೆಯಲ್ಲಿ ಐದು ಸಾವಿರ ರುಪಾಯಿ ಕುಸಿತ
ಇನ್ನೊಂದೆಡೆ ನಿನ್ನೆ ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ ಒಂದೇ ದಿನದಲ್ಲಿ 10 ಸಾವಿರ ರುಪಾಯಿ ಏರಿಕೆ ಕಂಡಿತ್ತು. ಆದರೆ ಇದೀಗ ಇಂದು ಬೆಳ್ಳಿ ಬೆಲೆಯಲ್ಲಿ ಒಂದು ಕೆಜಿ ಮೇಲೆ 5000 ರುಪಾಯಿ ಇಳಿಕೆಯಾಗಿದ್ದು, ಇಂದು ಒಂದು ಕೆಜಿ ಬೆಳ್ಳಿಯ ಬೆಲೆ 2,55,000 ರುಪಾಯಿಗಳಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.