ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಯೋಜನೆಯಡಿ ಅರ್ಹ ರೈತರಿಗೆ ವರ್ಷಕ್ಕೆ ರೂ.6,000 ಆರ್ಥಿಕ ನೆರವನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಪ್ರಸ್ತುತ 20ನೇ ಕಂತಿನ ಹಣ ಬಿಡುಗಡೆಯಾಗಲಿದೆ. ಜೂನ್ ತಿಂಗಳಲ್ಲೇ 20ನೇ ಕಂತಿನ ಪಿಎಂ ಕಿಸಾನ್ ಹಣ ರೈತರ ಖಾತೆಗಳಿಗೆ ಜಮಾ ಆಗುವ ಸಾಧ್ಯತೆ ಇದೆ. ಈ ವಾರದಲ್ಲೇ ಪ್ರಧಾನಿ ಪಿಎಂ ಕಿಸಾನ್ ಹಣ ಬಿಡುಗಡೆ ಮಾಡ್ತಾರೆ ಅಂತ ಮಾಹಿತಿ ಇದೆ.
ಈ ಆರ್ಥಿಕ ನೆರವು ಪಡೆಯಲು ರೈತರು ಕೆಲವು ಕಡ್ಡಾಯ ಅರ್ಹತಾ ಮಾನದಂಡಗಳು ಮತ್ತು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು.
25
ಪಿಎಂ ಕಿಸಾನ್ ಅರ್ಹತಾ ಮಾನದಂಡಗಳೇನು?
• ಅರ್ಜಿದಾರರು ಭಾರತೀಯ ಪ್ರಜೆಯಾಗಿರಬೇಕು.
• ಬೇಸಾಯ ಮಾಡುವ ಭೂಮಿಗೆ ಸಂಬಂಧಿಸಿದ ಮಾನ್ಯ ದಾಖಲೆಗಳು ಇರಬೇಕು.
• ರೈತರು ಆದಾಯ ತೆರಿಗೆ ಪಾವತಿಸಬಾರದು.
• ಸರ್ಕಾರಿ ನೌಕರರು, ಪಿಂಚಣಿದಾರರು, ಸಾರ್ವಜನಿಕ ವಲಯದ ನೌಕರರು ಅರ್ಹರಲ್ಲ.
35
ಪಿಎಂ ಕಿಸಾನ್ ಪಡೆಯಲು ರೈತರು ಕಡ್ಡಾಯವಾಗಿ ಮಾಡಬೇಕಾದ ಕೆಲಸಗಳೇನು?
1. eKYC ಪೂರ್ಣಗೊಳಿಸಿ
ರೈತರು pmkisan.gov.in ವೆಬ್‌ಸೈಟ್‌ಗೆ ಹೋಗಿ “e-KYC” ಆಯ್ಕೆ ಮಾಡಿಕೊಳ್ಳಬೇಕು. ಆಧಾರ್ ಸಂಖ್ಯೆ ನಮೂದಿಸಿ, ಬರುವ OTP ಮೂಲಕ ಪರಿಶೀಲಿಸಿ ಸಲ್ಲಿಸಬೇಕು. ಇದು ಕಡ್ಡಾಯ.
2. ಆಧಾರ್‌ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿ
eKYC ಜೊತೆಗೆ ರೈತರ ಬ್ಯಾಂಕ್ ಖಾತೆ ಆಧಾರ್‌ಗೆ ಲಿಂಕ್ ಆಗಿರಬೇಕು. ಬ್ಯಾಂಕ್ ಶಾಖೆಯಲ್ಲಿ ಅಥವಾ ಆಧಾರ್ ಆಧಾರಿತ ಮೊಬೈಲ್ ಬ್ಯಾಂಕಿಂಗ್ ಮೂಲಕ ಇದನ್ನು ಮಾಡಬಹುದು. ಆಧಾರ್ ಲಿಂಕ್ ಇಲ್ಲದಿದ್ದರೆ ನೇರ ಲಾಭ ವರ್ಗಾವಣೆ (DBT) ಆಗುವುದಿಲ್ಲ ಅಥವಾ ತಡವಾಗುತ್ತದೆ.
ಪಿಎಂ ಕಿಸಾನ್ ಫಲಾನುಭವಿಗಳ ಸ್ಥಿತಿಯನ್ನು ಹೇಗೆ ಪರಿಶೀಲಿಸುವುದು?
ರೈತರು ತಮ್ಮ ಫಲಾನುಭವಿ ಸ್ಥಿತಿ ತಿಳಿಯಲು ಅಧಿಕೃತ ವೆಬ್‌ಸೈಟ್ pmkisan.gov.in ಗೆ ಭೇಟಿ ನೀಡಬೇಕು. "ರೈತರ ಮೂಲ" ವಿಭಾಗದಲ್ಲಿ "ಫಲಾನುಭವಿ ಸ್ಥಿತಿ" ಮೇಲೆ ಕ್ಲಿಕ್ ಮಾಡಿ. ಆಧಾರ್ ಸಂಖ್ಯೆ ಅಥವಾ ನೋಂದಣಿ ಸಂಖ್ಯೆ ನಮೂದಿಸಿ ಸ್ಥಿತಿ ತಿಳಿದುಕೊಳ್ಳಬಹುದು.
ಮೇಲಿನ ವಿವರಗಳನ್ನು ಸಲ್ಲಿಸಿದ ನಂತರವೇ ರೈತರಿಗೆ ಪಿಎಂ ಕಿಸಾನ್ ರೂ.2,000 20ನೇ ಕಂತಿನಲ್ಲಿ ಜಮಾ ಆಗುತ್ತದೆ. ರೈತರು ಈ ಪ್ರಕ್ರಿಯೆಗಳನ್ನು ಎಚ್ಚರಿಕೆಯಿಂದ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಸಂಬಂಧಿತ ಸಹಾಯಕ್ಕಾಗಿ ರೈತರು ಹತ್ತಿರದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬಹುದು.
55
ಪಿಎಂ ಕಿಸಾನ್ 19ನೇ ಕಂತಿನಲ್ಲಿ ರೈತರ ಖಾತೆಗೆ ರೂ. 22,000 ಕೋಟಿ
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM-KISAN) 19ನೇ ಕಂತಿನ ಹಣ ಫೆಬ್ರವರಿ 24, 2025 ರಂದು ಬಿಡುಗಡೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಗೆ ಚಾಲನೆ ನೀಡಿ ನೇರ ಫಲಾನುಭವಿಗಳ ಖಾತೆಗಳಿಗೆ ರೂ.22,000 ಕೋಟಿ ನೇರ ಲಾಭ ವರ್ಗಾವಣೆ (DBT) ಮೂಲಕ ಜಮಾ ಮಾಡಿದ್ದಾರೆ.
ಈ ಕಂತಿನಲ್ಲಿ ಸುಮಾರು 9.8 ಕೋಟಿ ರೈತರು ಫಲಾನುಭವಿಗಳಾಗಿದ್ದಾರೆ. ಕೇಂದ್ರ ಸರ್ಕಾರ ನೀಡಿರುವಂತೆ, ಪ್ರತಿ ರೈತನ ಖಾತೆಗೆ ರೂ.2,000 ಜಮಾ ಮಾಡಲಾಗಿದೆ.