ಬರೀ 500 ಕೋಟಿ ಹೂಡಿಕೆ ಮಾಡಿ 9 ಸಾವಿರ ಕೋಟಿಗೂ ಅಧಿಕ ಲಾಭ ತೆಗೆದ ಮುಕೇಶ್‌ ಅಂಬಾನಿ!

Published : Jun 17, 2025, 06:43 PM IST

ರಿಲಯನ್ಸ್‌ ಇಂಡಸ್ಟ್ರೀಸ್‌ ಚೇರ್ಮನ್‌ ಮುಕೇಶ್‌ ಅಂಬಾನಿ, ಏಷ್ಯನ್‌ ಪೇಂಟ್ಸ್‌ ಕಂಪನಿಯಲ್ಲಿದ್ದ ತಮ್ಮ ೪.೩೭ ಕೋಟಿ ಷೇರುಗಳನ್ನು ಮಾರಾಟ ಮಾಡಿದ್ದಾರೆ. ೧೭ ವರ್ಷಗಳ ಹಿಂದೆ ೫೦೦ ಕೋಟಿ ರೂಪಾಯಿಗೆ ಖರೀದಿಸಿದ್ದ ಷೇರುಗಳನ್ನು ಈಗ ೯೫೮೦ ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ.

PREV
16

ರಿಲಯನ್ಸ್‌ ಇಂಡಸ್ಟ್ರೀಸ್‌ ಚೇರ್ಮನ್‌ ಮುಕೇಶ್‌ ಅಂಬಾನಿ, ಏಷ್ಯನ್‌ ಪೇಂಟ್ಸ್‌ ಕಂಪನಿಯಲ್ಲಿ ಇದ್ದ ತಮ್ಮ 4.37 ಕೋಟಿ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಅಂಬಾನಿ ಮಾಲೀಕತ್ವ ಹೊಂದಿರುವ ಸಿದ್ಧಾಂತ್ ಕಮರ್ಷಿಯಲ್ಸ್ ಸಂಸ್ಥೆ ಎರಡು ಬ್ಲಾಕ್ ಡೀಲ್‌ಗಳ ಮೂಲಕ ಪೇಂಟ್ಸ್‌ ದೈತ್ಯ ಏಷ್ಯನ್ ಪೇಂಟ್ಸ್‌ ಕಂಪನಿಯಲ್ಲಿದ್ದ ತನ್ನ ಶೇ. 4.9ರಷ್ಟು ಷೇರುಗಳನ್ನು ಮಾರಿದೆ.

26

ಮುಖೇಶ್‌ ಅಂಬಾನಿ 2008ರಲ್ಲಿ ಅಂದರೆ 17 ವರ್ಷಗಳ ಹಿಂದೆ 500 ಕೋಟಿ ರೂಪಾಯಿಗೆ ಏಷ್ಯನ್‌ ಪೇಂಟ್ಸ್‌ನಲ್ಲಿ ಶೇ. 4.9ರಷ್ಟು ಪಾಲು ಪಡೆದುಕೊಂಡಿದ್ದರು. ಇದನ್ನು 17 ವರ್ಷಗಳ ಬಳಿಕ 9580 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಇಷ್ಟು ವರ್ಷಗಳಿಂದ ಅವರಿಗೆ 2200ರಷ್ಟು ರಿಟರ್ನ್ಸ್‌ ಸಿಕ್ಕಿದೆ.

36

Siddhant Commericals ಸಂಸ್ಥೆ ಏಷ್ಯನ್‌ ಪೇಂಟ್ಸ್‌ನಲ್ಲಿ ಬರೋಬ್ಬರಿ 4.37 ಕೋಟಿ ಷೇರುಗಳನ್ನು ಹೊಂದಿತ್ತು. ಕಳೆದ ವಾರ ಇದೇ ಕಂಪನಿ ಬ್ಲಾಕ್‌ ಡೀಲ್‌ನಲ್ಲಿ 3.50 ಕೋಟಿ ಷೇರುಗಳನ್ನು ಪ್ರತಿ ಷೇರಿಗೆ 2201 ರೂಪಾಯಿಗೆ ಎಸ್‌ಬಿಐ ಮ್ಯೂಚುವಲ್‌ ಫಂಡ್‌ಗೆ ಮಾರಾಟ ಮಾಡಿತ್ತು. ಇದರಿಂದ 7704 ಕೋಟಿ ರೂಪಾಯಿ ಲಾಭ ಮಾಡಿಕೊಂಡಿದ್ದರು.

46

ಸೋಮವಾರ ಕಂಪನಿಯಲ್ಲಿ ಉಳಿದಿದ್ದ 87 ಲಕ್ಷ ಷೇರುಗಳನ್ನು 2207.65 ರೂಪಾಯಿಗೆ ಐಸಿಐಸಿಐ ಲೈಫ್‌ ಮ್ಯೂಚುವಲ್‌ ಫಂಡ್‌ಗೆ ಮಾರಾಟ ಮಾಡಿದ್ದಾಗಿ ಸ್ಟಾಕ್‌ ಎಕ್ಸ್‌ಚೇಂಜ್‌ಗೆ ಮಾಹಿತಿ ನೀಡಿದೆ. ಇದರಿಂದ 1876 ಕೋಟಿ ರೂಪಾಯಿ ಲಾಭ ಮಾಡಿದೆ. ಇವೆರಡು ಬ್ಲಾಕ್‌ ಡೀಲ್‌ಗಳಿಂದ ಸಿದ್ಧಾಂತ್‌ ಕಮರ್ಷಿಯಲ್ಸ್‌ 9580 ಕೋಟಿ ರೂಪಾಯಿ ಲಾಭ ಮಾಡಿಕೊಂಡಿದೆ. ಇನ್ನೊಂದೆಡೆ ಮುಕೇಶ್‌ ಅಂಬಾನಿಯ ಷೇರು ಮಾರಾಟ ಏಷ್ಯನ್ ಪೇಂಟ್ಸ್‌ನ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಕಂಪನಿಯ ಷೇರಿನ ಬೆಲೆ ಏರಿಕೆಯಾಗಿದ್ದು, ದಿನದ ಅಂತ್ಯಕ್ಕೆ 2264 ರೂಪಾಯಿ ಆಗಿದೆ.

56

2008ರಲ್ಲಿ ಮುಕೇಶ್‌ ಅಂಬಾನಿ ಸಿದ್ಧಾಂತ್‌ ಕಮರ್ಷಿಯಲ್ಸ್‌ ಮೂಲಕ ಏಷ್ಯನ್‌ ಪೇಂಟ್ಸ್‌ ಷೇರು ಖರೀದಿ ಮಾಡಿದ್ದರು. ಆಗ ಏಷ್ಯನ್‌ ಪೇಂಟ್ಸ್‌ಗೆ ಮಾರುಕಟ್ಟೆಯಲ್ಲಿ ಯಾವುದೇ ಪೈಪೋಟಿ ಕೂಡ ಇದ್ದಿರಲಿಲ್ಲ. ಜಾಗತಿಕ ಹಣಕಾಸು ಬಿಕ್ಕಟ್ಟಿನಿಂದ ಮಾರುಕಟ್ಟೆ ಕೂಡ ಕುಸಿದಿತ್ತು. ಕಡಿಮೆ ಬೆಲೆಗೆ ಈ ಕಂಪನಿಯ ಷೇರುಗಳು ಕೂಡ ಸಿಕ್ಕಿದ್ದವು.

66

ಏಷ್ಯನ್‌ ಪೇಂಟ್ಸ್‌ ಕಂಪನಿ ಈಗ ಮೊದಲಿನಂತಿಲ್ಲ. ಮಾರುಕಟ್ಟೆಯಲ್ಲಿ ಸಾಕಷ್ಟು ಹೊಸ ಕಂಪನಿಗಳು ಬಂದಿವೆ. ಬಿರ್ಲಾ ಗ್ರೂಪ್‌ಗೆ ಸೇರಿ ಬಿರ್ಲಾ ಓಪಸ್‌ ಪೇಂಟ್ಸ್‌, ಏಷ್ಯನ್‌ ಪೇಂಟ್ಸ್‌ಗೆ ದೊಡ್ಡ ಮಟ್ಟದಲ್ಲಿ ಪ್ರತಿರೋಧ ಒಡ್ಡುತ್ತಿದೆ. ಅದಲ್ಲದೆ, ಏಷ್ಯನ್‌ ಪೇಂಟ್ಸ್‌ನ ಬೆಲೆಗಳು ಜಾಸ್ತಿ. ಸಾಮಾನ್ಯರ ಕೈಗೆಟುಕುವಂತಿಲ್ಲ. ಅದಕ್ಕೆ ಹೋಲಿಸಿದರೆ, ಜೆಎಸ್‌ಡಬ್ಲ್ಯು ಪೇಂಟ್ಸ್‌, ಬಿರ್ಲಾ ಓಪಸ್, ಹಳೇ ಕಾಲದ ಬರ್ಜರ್‌ ಮಾರುಕಟ್ಟೆಯಲ್ಲಿ ಗಮನಸೆಳೆಯುತ್ತಿದ್ದು, ಏಷ್ಯನ್‌ ಪೇಂಟ್ಸ್‌ನ ಮಾರುಕಟ್ಟೆ ಪಾಲು ಶೇ. 52ಕ್ಕೆ ಕುಸಿದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕುಸಿಯುವ ಸಾಧ್ಯತೆ ಇರುವ ನಡುವೆಯೇ ಮುಕೇಶ್‌ ಅಂಬಾನಿ ಈ ನಿರ್ಧಾರ ಮಾಡಿದ್ದಾರೆ.

Read more Photos on
click me!

Recommended Stories