ವರ್ಷಕ್ಕೆ 520 ರೂ. ಕಟ್ಟಿ 10 ಲಕ್ಷ ವಿಮೆ ಜೊತೆ ಹಲವು ಫ್ರೀ ಕೊಡುಗೆ ಪಡೆಯಿರಿ! ಏನಿದು Post Office ಸ್ಕೀಮ್​?

Published : Sep 05, 2025, 07:01 PM IST

ವರ್ಷಕ್ಕೆ 520 ರೂ. ಕಟ್ಟಿ 10 ಲಕ್ಷ ವಿಮೆ ಜೊತೆ ಮಕ್ಕಳು ಹಾಗೂ ಕುಟುಂಬಸ್ಥರಿಗೆ ಹಲವಾರು ರೀತಿಯ ಪ್ರಯೋಜನ ಇರುವ ಪೋಸ್ಟ್​ ಆಫೀಸ್​ ಯೋಜನೆಯ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಸಂಪೂರ್ಣ ಡಿಟೇಲ್ಸ್​ ಇಲ್ಲಿದೆ... 

PREV
18
ಪೋಸ್ಟ್​ ಆಫೀಸ್​ ಸ್ಕೀಮ್ ಬಗ್ಗೆ ಅರಿಯಿರಿ...

ಯಾರಿಗೂ ತಮ್ಮ ಆಯಸ್ಸು ಇಂತಿಷ್ಟೇ ಎಂದು ತಿಳಿದಿರಲು ಸಾಧ್ಯವೇ ಇಲ್ಲ. ಸಾವು ಯಾವಾಗ, ಯಾವ ರೂಪದಲ್ಲಿ ಬೇಕಾದರೂ ಬಂದು ಬಿಡಬಹುದು. ತಮ್ಮ ನಂತರ ಕುಟುಂಬದವರ ಪಾಡೇನು ಎಂದುಕೊಳ್ಳುವವರೇ ಹಲವರು. ಇದೇ ಕಾರಣಕ್ಕೆ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಲು ಇದಾಗಲೇ ಹಲವಾರು ವಿಮೆಗಳು ಚಾಲ್ತಿಯಲ್ಲಿವೆ. ಆದರೆ ಮಾಸಿಕ ಅಷ್ಟು ಹಣ ಕಟ್ಟುವುದೇ ದುಬಾರಿ ಎನ್ನಿಸುವುದು ಉಂಟು.

28
520 ರೂಪಾಯಿ ಕಟ್ಟಿದರೆ 10 ಲಕ್ಷ ರೂಪಾಯಿ ವಿಮೆ

ಆದರೆ ವರ್ಷಕ್ಕೆ ಕೇವಲ 520 ರೂಪಾಯಿ ಕಟ್ಟಿದರೆ 10 ಲಕ್ಷ ರೂಪಾಯಿ ವಿಮೆ, 755 ರೂಪಾಯಿ ಕಟ್ಟಿದ್ರೆ 15 ಲಕ್ಷ ರೂಪಾಯಿ ಜೊತೆಗೆ ಇನ್ನೂ ಏನೇನೋ ಸೌಲಭ್ಯಗಳು ಸಿಗುವ ಅಂಚೆ ಕಚೇರಿಯ ಈ ಯೋಜನೆಯ ಬಗ್ಗೆ ತಿಳಿದುಕೊಂಡರೆ ಒಳಿತು.

38
ಒಂದೊಂದೇ ಡಿಟೇಲ್ಸ್​ ಇಲ್ಲಿ ಕೊಡಲಾಗಿದೆ

ಇದರ ಬಗ್ಗೆ ಒಂದೊಂದೇ ಡಿಟೇಲ್ಸ್​ ಇಲ್ಲಿ ಕೊಡಲಾಗಿದೆ. ವರ್ಷಕ್ಕೆ ₹520 ಪಾವತಿಸಿದರೆ ನಿಮಗೆ 10 ಲಕ್ಷ ರೂಪಾಯಿ ಹಣ ಸಿಗಲಿದೆ. ಒಂದು ವೇಳೆ ಅಪಘಾತದಲ್ಲಿ ನೀವು ಸಾವನ್ನಪ್ಪಿದರೆ ಅಥವಾ ಅಂಗವಿಕರಲಾರದೂ ಈ ಹಣ ಸಿಗುತ್ತದೆ. ಇದು ಆಸ್ಪತ್ರೆ ಮತ್ತು ಹೊರರೋಗಿ ವೆಚ್ಚಗಳನ್ನು ಹಾಗೂ ಅಪಘಾತಗಳಿಗೆ ಸಂಬಂಧಿಸಿದ ಇತರ ಚಿಕಿತ್ಸೆಗಳನ್ನು ಸಹ ಒಳಗೊಂಡಿದೆ.

48
1 ಲಕ್ಷ ರೂಪಾಯಿವರೆಗೆ ಶೈಕ್ಷಣಿಕ ವೆಚ್ಚಗಳ ಕವರೇಜ್

ಇಷ್ಟು ಮಾತ್ರವಲ್ಲದೇ, ಇಬ್ಬರು ಮಕ್ಕಳಿಗೆ 1 ಲಕ್ಷ ರೂಪಾಯಿವರೆಗೆ ಶೈಕ್ಷಣಿಕ ವೆಚ್ಚಗಳ ಕವರೇಜ್, 10 ದಿನಗಳವರೆಗೆ 1 ಸಾವಿರ ರೂಪಾಯಿಗಳ ದೈನಂದಿನ ಆಸ್ಪತ್ರೆ ನಗದು ಪ್ರಯೋಜನ, ಕುಟುಂಬವು ಬೇರೆ ನಗರದಲ್ಲಿ ವಾಸಿಸುತ್ತಿದ್ದರೆ ಸಾರಿಗೆ ವೆಚ್ಚಕ್ಕಾಗಿ 25 ಸಾವಿರ ರೂಪಾಯಿ, ಅಂತ್ಯಕ್ರಿಯೆಯ ವೆಚ್ಚಗಳಿಗಾಗಿ 5 ಸಾವಿರ ರೂಪಾಯಿಗಳೂ ಸಿಗುತ್ತವೆ. ಪಾಲಿಸಿದಾರ ಅಪಘಾತದಲ್ಲಿ ಮರಣ ಹೊಂದಿದಲ್ಲಿ, ನಾಮಿನಿಗೆ ₹10 ಲಕ್ಷ ರೂಪಾಯಿ ನೀಡಲಾಗುತ್ತದೆ.

58
ವರ್ಷಕ್ಕೆ 755 ರೂಪಾಯಿ ಪಾವತಿಸಿದರೆ ಪ್ರಯೋಜನಗಳೇನು?

ಅದೇ ರೀತಿ, ವರ್ಷಕ್ಕೆ 755 ರೂಪಾಯಿ ಪಾವತಿಸಿದರೆ, 15 ಲಕ್ಷ ರೂಪಾಯಿವರೆಗೆ ವಿಮಾ ಸುರಕ್ಷೆ ಸಿಗಲಿದೆ. ಇದು ಕೂಡ, 10 ಲಕ್ಷ ರೂಪಾಯಿ ವಿಮೆಯ ಎಲ್ಲಾ ನಿಯಮ ಒಳಗೊಂಡಿದೆ. ಶಾಶ್ವತ ಅಂಗವೈಕಲ್ಯ ಹಾಗೂ ಭಾಗಶಃ ಅಂಗವೈಕಲ್ಯಕ್ಕೆ 15 ಲಕ್ಷ ರೂ, ವೈದ್ಯಕೀಯ ವೆಚ್ಚಕ್ಕಾಗಿ 1 ಲಕ್ಷ ರೂ. ಸಾಮಾನ್ಯ ಚಿಕಿತ್ಸೆಗಾಗಿ ದಿನಕ್ಕೆ 1 ಸಾವಿರ ರೂ, ಮಕ್ಕಳ ಉನ್ನತ ಶಿಕ್ಷಣ ಮತ್ತು ಮದುವೆಗೆ 1 ಲಕ್ಷ ರೂ.ವರೆಗೆ ಸಹಾಯಧನ ಹೀಗೆ ಹಲವು ಉಪಯೋಗಗಳನ್ನು ಒಳಗೊಂಡಿದೆ.

68
ಅಪಘಾತ ಎಂದರೆ ಏನು?

ಅಂದಹಾಗೆ ಅಪಘಾತ ಎಂದರೆ ನೀವು ಡ್ರೈವ್​ ಮಾಡುವ ಸಂದರ್ಭದಲ್ಲಿ ಮಾತ್ರವಲ್ಲ, ಬದಲಿಗೆ ನೀವು ಟ್ರೈನ್​, ಬಸ್​ ಅಥವಾ ಯಾವುದಾದರೂ ಸಾರಿಗೆಯಲ್ಲಿ ಹೋಗುವ ಸಂದರ್ಭದಲ್ಲಿ ಅಪಘಾತವಾದರೆ, ಎಲೆಕ್ಟ್ರಿಕ್​ ಶಾಕ್​ನಿಂದ ಸತ್ತರೆ, ಹಾವು ಕಡಿದು ಸತ್ತರೆ ಇಂಥ ಎಲ್ಲಾ ಅಪಘಾತಗಳಿಗೂ ವಿಮೆ ಸಿಗಲಿದೆ.

78
ಯಾರು ಅರ್ಹರು?

ಹಾಗಿದ್ದರೆ ಈ ಪಾಲಿಸಿ ಮಾಡಿಸಲು ಯಾರು ಅರ್ಹರು ಎಂದು ನೋಡುವುದಾದರೆ, ಪಾಲಿಸಿದಾರರಿಗೆ 18 ವರ್ಷ ತುಂಬಿರಬೇಕು. 65 ವರ್ಷದೊಳಗೆ ಇರಬೇಕು. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ (IPPB) ಖಾತೆ ಹೊಂದಿರತಕ್ಕದ್ದು. ಇದನ್ನು 100 ರೂಪಾಯಿ ಕೊಟ್ಟಿ ಓಪನ್​ ಮಾಡಬಹುದು.

88
ಇಂದೇ ಮಾಡಿಸಿ ಪಾಲಿಸಿ

ಸಮೀಪದ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಶಾಖೆಗೆ ಹೋಗಿ ಅಪಘಾತ ವಿಮಾ ಪಾಲಿಸಿಯನ್ನು ಖರೀದಿಸಬಹುದು. ಪ್ರತಿ ವರ್ಷ ಅಲ್ಲಿರುವ ನಿಮ್ಮ ಅಕೌಂಟ್​ನಿಂದಲೇ ಬೇಕಿದ್ರೆ ದುಡ್ಡು ಕಟ್​ ಮಾಡಿಸಿಕೊಳ್ಳಬಹುದು.

Read more Photos on
click me!

Recommended Stories