ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ₹9.50 ರಷ್ಟು ಹೆಚ್ಚಿಸಿವೆ. ಆದರೆ, 14.2 ಕೆಜಿ ಗೃಹಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ, ಇದು ಸಾರ್ವಜನಿಕರಿಗೆ ಸಮಾಧಾನ ತಂದಿದೆ.
ತೈಲ ಮಾರುಕಟ್ಟೆ ಕಂಪನಿಗಳು 19 ಕಿಲೋಗ್ರಾಂ ವಾಣಿಜ್ಯ ಎಲ್‌ಪಿಜಿ (LPG) ಸಿಲಿಂಡರ್ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ ₹9.50 ರಷ್ಟು ಹೆಚ್ಚಿಸಿವೆ. 5 ಕಿಲೋಗ್ರಾಂ ತೂಕದ ಗೃಹಬಳಕೆಯೇತರ ಸಿಲಿಂಡರ್ ದರವನ್ನು ₹2 ಹೆಚ್ಚಿಸಲಾಗಿದ್ದು, ಈಗ ಇದರ ಬೆಲೆ ₹762 ರಿಂದ ₹764 ಕ್ಕೆ ಏರಿದೆ. 14.2 ಕೆಜಿ ಗೃಹಬಳಕೆ ಸಿಲಿಂಡರ್ ಹಳೆಯ ದರದಲ್ಲಿ ಅಂದರೆ ₹951 ಕ್ಕೆ ಲಭ್ಯವಿದೆ.
25
ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ದರ
ಸಾಮಾನ್ಯ 5 ಕಿಲೋಗ್ರಾಂ ಎಲ್‌ಪಿಜಿ ಸಿಲಿಂಡರ್‌ಗಳು ಮತ್ತು ಎಕ್ಸ್‌ಟ್ರಾಲೈಟ್ (ExtraLite) ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಾಗಿದ್ದರಿಂದ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳಲ್ಲಿ ಬಳಸುವುದರಿಂದ ಅಲ್ಲಿನ ವೆಚ್ಚ ಹೆಚ್ಚಾಗಲಿದೆ. ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ದರದಲ್ಲಿ ಯಾವುದೇ ಬದಲಾವಣೆ ಮಾಡದಿರುವುದು ಸಾರ್ವಜನಿಕರಿಗೆ ಸಿಕ್ಕ ಏಕೈಕ ಪರಿಹಾರವಾಗಿದೆ.
35
ಇಂಡಿಯನ್ ಆಯಿಲ್ ಸಂಸ್ಥೆ
ಇಂಡಿಯನ್ ಆಯಿಲ್ ಸಂಸ್ಥೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ವಾಣಿಜ್ಯ ಸಿಲಿಂಡರ್ ಬೆಲೆ ₹9.50 ರಷ್ಟು ಏರಿಕೆಯಾಗಿದ್ದು, ₹2,738.00 ರಿಂದ ₹2,747.50 ಕ್ಕೆ ತಲುಪಿದೆ.
ಮುಂಬೈ: ವಾಣಿಜ್ಯ ಸಿಲಿಂಡರ್ ಬೆಲೆ ₹2,691.50 ರಿಂದ ₹2,701 ಕ್ಕೆ ಏರಿಕೆಯಾಗಿದೆ.
ಚೆನ್ನೈ: ವಾಣಿಜ್ಯ ಸಿಲಿಂಡರ್ ಬೆಲೆ ₹10.50 ರಷ್ಟು ಹೆಚ್ಚಳವಾಗಿದ್ದು, ₹2,906.00 ರಿಂದ ₹2,916.50 ಕ್ಕೆ ತಲುಪಿದೆ. ಆಗಸ್ಟ್ 1 ರಂದು, 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ₹200 ರಷ್ಟು ಕಡಿಮೆ ಮಾಡಲಾಗಿತ್ತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.