Mukesh Ambani ಜೊತೆ ಮದುವೆಯಾಗಲು ಈ ಷರತ್ತನ್ನು ಹಾಕಿದ್ದ Nita Ambani

First Published | May 24, 2022, 5:38 PM IST

ನೀತಾ ಅಂಬಾನಿ (Nita Ambani) ಮತ್ತು ಮುಖೇಶ್ ಅಂಬಾನಿ (Mukesh Amban) ದಾಂಪತ್ಯ ಜೀವನಕ್ಕೆ ಕಾಲಿಟ್ಟು 36 ವರ್ಷಗಳಾಗಿವೆ. ಆದರೆ ಇಂದಿಗೂ ಇಬ್ಬರ ನಡುವೆ ಪ್ರೀತಿ (love), ಗೌರವ (Respect) ಮೊದಲಿನಂತೆಯೇ ಇದೆ. ಮಾರ್ಚ್ 8, 1985 ರಂದು, ನೀತಾ ಅಂಬಾನಿ (Nita Ambani) ಧೀರೂಭಾಯಿ ಅಂಬಾನಿ ಮನೆಗೆ ಸೊಸೆಯಾಗಿ ಬಂದರು. ಕುಟುಂಬದ ಎಲ್ಲಾ ಜವಾಬ್ದಾರಿಗಳನ್ನು ಪೂರೈಸುವ ಮೂಲಕ ಅವರು ತಮ್ಮ ಆಸೆಯನ್ನು ಪೂರೈಸಿದರು. ಆದರೆ ಮದುವೆಗೂ (Wedding) ಮುನ್ನ ನೀತಾಗೆ ಯಾವುದರಲ್ಲಿ ಆಸಕ್ತಿ ಇತ್ತೋ ಅದನ್ನು  ಬಿಡಲಿಲ್ಲ. ಬದಲಿಗೆ, ಅವರು ಅದೇ ಷರತ್ತಿನ ಮೇಲೆ ಮದುವೆಯಾದರು. 
 

ವಾಸ್ತವವಾಗಿ, ನೀತಾ ಅಂಬಾನಿ ಅವರರು ಮಕ್ಕಳಿಗೆ ಪಾಠ ಮಾಡಲು ಇಷ್ಟ ಪಟ್ಟಿದ್ದರು.  ಮದುವೆಗೂ ಮುನ್ನ ಅವರು ಶಾಲೆಯಲ್ಲಿ 800 ರೂ. ಸಂಬಳಕ್ಕೆ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ನೀತಾ ಮನೆಯ ಅಗತ್ಯಗಳನ್ನು ಪೂರೈಸುವುದರೊಂದಿಗೆ ಮಕ್ಕಳಿಗೆ ಶಿಕ್ಷಣ (Education) ಕೊಡಿಸುವ ಮೂಲಕ ತನ್ನ ಹವ್ಯಾಸಗಳನ್ನು ಪೂರೈಸಿಕೊಳ್ಳುತ್ತಿದ್ದರು.

ಮದುವೆ ನಂತರ ಪಾಠ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದು ಮುಖೇಶ್ ಮುಂದೆ ಷರತ್ತು ಹಾಕಿದ್ದೆ ಎಂದು ನೀತಾ ಅಂಬಾನಿ ಸಂದರ್ಶನವೊಂದರಲ್ಲಿ ಹೇಳಿದ್ದರು. ಅವರು ಶಾಲೆಯಲ್ಲಿ ಕಲಿಸಲು ಅನುಮತಿಸಿದರೆ ಮಾತ್ರ ಮದುವೆಗೆ ಒಪ್ಪಿಗೆ ನೀಡುವುದಾಗಿ ಹೇಳಿದ್ದರು 

Tap to resize

ಶ್ರೀಮಂತ ಕುಟುಂಬದ (Rich Family) ಸೊಸೆಯಾಗುವ ಆಫರ್ ಬಂದ ನಂತರವೂ ನೀತಾ (Nita) ತನ್ನ ಹವ್ಯಾಸವನ್ನು ಕೊನೆಗೊಳಿಸಲು ಬಯಸಲಿಲ್ಲ. ಯಾವಾಗ ಮುಖೇಶ್ ಅಂಬಾನಿ ಅವರ ಷರತ್ತನ್ನು ಒಪ್ಪಿಕೊಂಡರು, ಆಗ ಮಾತ್ರ ಅವರು ಮದುವೆಗೆ ಒಪ್ಪಿಗೆ ಸೂಚಿಸಿದರು. 
 

ಮದುವೆಯ ನಂತರವೂ ನೀತಾ ಶಾಲೆಯಲ್ಲಿ ಪಾಠ ಮಾಡುವುದನ್ನು ಮುಂದುವರೆಸಿದರು. ಇಂದು  ಅವರು ಧೀರೂಭಾಯಿ ಇಂಟರ್‌ನ್ಯಾಶನಲ್ ಸ್ಕೂಲ್ (Dhirubhai Ambani International School) ನಡೆಸುತ್ತಿದ್ದಾರೆ ಮತ್ತು ಮನೆಯ ಜವಾಬ್ದಾರಿಯನ್ನೂ ಚೆನ್ನಾಗಿ ನಿರ್ವಹಿಸಿದ್ದಾರೆ

ಅವರಿಗೆ ಮಕ್ಕಳಾದಾಗ, ಅವಳು ತಮ್ಮ ಕೆಲಸವನ್ನು ಬಿಟ್ಟು ಮಗುವನ್ನು ನೋಡಿಕೊಳ್ಳಲು ಪ್ರಾರಂಭಿಸಿದರು. ಆದರೆ ಈಗ ಅವರು ತನ್ನ ಕುಟುಂಬದ ವ್ಯವಹಾರಕ್ಕೆ ಸಹಾಯ ಮಾಡುತ್ತಾರೆ. ಇದರೊಂದಿಗೆ ಸಮಾಜಸೇವೆಯನ್ನೂ ಮಾಡುತ್ತಾರೆ ಹಾಗೂ ಬಡ ಮಕ್ಕಳಿಗಾಗಿ ಅನೇಕ ಶಾಲೆಗಳನ್ನು ತೆರೆದಿದ್ದಾರೆ.

Latest Videos

click me!