ಟಾಟಾ ಗ್ರೂಪ್‌ನ ಈ ಕಂಪನಿಯಿಂದ ಹೂಡಿಕೆದಾರರಿಗೆ ಬಂಪರ್: ಒಂದೇ ದಿನದಲ್ಲಿ 3 ಪಟ್ಟು ಹೆಚ್ಚು ಲಾಭ!

Published : Nov 30, 2023, 03:56 PM IST

 ಟಾಟಾ ಟೆಕ್ನಾಲಜೀಸ್ ಐಪಿಒಗೆ ಬಂಪರ್‌ ಪ್ರವೇಶ ಮಾಡಿದ್ದು, ಹೂಡಿಕೆದಾರರಿಗೆ ಒಂದೇ ದಿನದಲ್ಲಿ ಹತ್ತಿರ ಹತ್ತಿರ 3 ಪಟ್ಟು ಲಾಭ ನೀಡಿದೆ.

PREV
111
ಟಾಟಾ ಗ್ರೂಪ್‌ನ ಈ ಕಂಪನಿಯಿಂದ ಹೂಡಿಕೆದಾರರಿಗೆ ಬಂಪರ್: ಒಂದೇ ದಿನದಲ್ಲಿ 3 ಪಟ್ಟು ಹೆಚ್ಚು ಲಾಭ!

ಇತ್ತೀಚಿನ ಕೆಲ ವರ್ಷಗಳಲ್ಲಿ ಹಲವು ಕಂಪನಿಗಳು ಹೂಡಿಕೆ ಹೆಚ್ಚು ಮಾಡಲು ಐಪಿಒ ಮೊರೆ ಹೋಗುತ್ತಿದೆ. ಇದೇ ರೀತಿ, ಇತ್ತೀಚೆಗೆ ಟಾಟಾ ಟೆಕ್ನಾಲಜೀಸ್ ಸಹ ಐಪಿಒಗೆ ಚೊಚ್ಚಲ ಪ್ರವೇಶ ಮಾಡಿದೆ.

211

ಅದ್ರಲ್ಲೂ ಟಾಟಾ ಟೆಕ್ನಾಲಜೀಸ್ ಬಂಪರ್‌ ಪ್ರವೇಶ ಮಾಡಿದ್ದು, ಹೂಡಿಕೆದಾರರಿಗೆ ಒಂದೇ ದಿನದಲ್ಲಿ ಹತ್ತಿರ ಹತ್ತಿರ 3 ಪಟ್ಟು ಲಾಭ ನೀಡಿದೆ.

311

ಟಾಟಾ ಟೆಕ್ನಾಲಜೀಸ್ 140 ಪ್ರತಿಶತ ಪ್ರೀಮಿಯಂನಲ್ಲಿ ಪಟ್ಟಿ ಮಾಡಿದ್ದು, ನಂತರ IPO ಬೆಲೆಯನ್ನು ಸುಮಾರು ಮೂರು ಪಟ್ಟು ಹೆಚ್ಚಿಸಿದೆ.

411

ಐಪಿಒ ವಿತರಣೆ ಬೆಲೆ 500 ರೂ. ಆಗಿದ್ದು, ಆದರೆ, ಟಾಟಾ ಟೆಕ್ನಾಲಜೀಸ್‌ನ ಷೇರುಗಳು  NSEಯಲ್ಲಿ 1,200 ರೂ. ಮತ್ತು BSEಯಲ್ಲಿ 1,199.95 ರೂ. ನಲ್ಲಿ ಪ್ರಾರಂಭವಾಗಿದೆ. ಇದು IPO ಬೆಲೆಗಿಂತ 180 ಪ್ರತಿಶತದಷ್ಟು ಜಿಗಿತ ಕಂಡಿದ್ದು, ಬಳಿಕ ನಿಮಿಷಗಳಲ್ಲಿ 1,400 ರೂ. ಗೆ ತಲುಪಿದೆ.

511

ಹೊರಗುತ್ತಿಗೆಯಲ್ಲಿನ ಬೆಳವಣಿಗೆಯ ಸಾಮರ್ಥ್ಯವನ್ನು ಗಮನಿಸಿದರೆ, ಕಂಪನಿಯ ವ್ಯವಹಾರ ಮಾದರಿಯು ಮುಂದೆ ಹೆಚ್ಚಿನ ಬೇಡಿಕೆಯಲ್ಲಿ ಉಳಿಯುತ್ತದೆ ಎಂದು ವಿಶ್ಲೇಷಕರು ನಿರೀಕ್ಷಿಸುತ್ತಾರೆ. 

611

ಈ ಹಿನ್ನೆಲೆ ಹೂಡಿಕೆದಾರರು ದೀರ್ಘಾವಧಿಯವರೆಗೆ ಷೇರುಗಳನ್ನು ಹಿಡಿದಿಟ್ಟುಕೊಳ್ಳಲು ಮತ್ತು ಐಪಿಒ ಅಲಾಟ್‌ಮೆಂಟ್‌ ಪಡೆಯಲು ವಿಫಲರಾದವರು ಸಹ ಡಿಪ್ಸ್‌ನಲ್ಲಿ ಸಂಗ್ರಹಿಸಲು ವಿಶ್ಲೇಷಕರು ಶಿಫಾರಸು ಮಾಡಿದ್ದಾರೆ.

711

ಇನ್ನು, ಬಿಎಸ್‌ಇಯಲ್ಲಿ ಕಂಪನಿಯ ಮಾರುಕಟ್ಟೆ ಮೌಲ್ಯ ₹54,353.50 ಕೋಟಿ ಆಗಿತ್ತು. ಈ ಮೊದಲು, ಟಾಟಾ ಗ್ರೂಪ್ ಕಂಪನಿಯ 3,042.5 ಕೋಟಿ ಐಪಿಒ ನವೆಂಬರ್ 24 ರಂದು ಚಂದಾದಾರಿಕೆಯ ಅಂತಿಮ ದಿನದಂದು 69.43 ಪಟ್ಟು ಚಂದಾದಾರಿಕೆಯಾಗಿದೆ.

811

ಭಾರಿ ಬೇಡಿಕೆಯನ್ನು ಪ್ರತಿಬಿಂಬಿಸುವ ಮೂಲಕ, ಆರಂಭಿಕ ಸಾರ್ವಜನಿಕ ಕೊಡುಗೆಯು ನವೆಂಬರ್ 22 ರಂದು ಆರಂಭಿಕ ದಿನದಂದು ಮೊದಲ 36 ನಿಮಿಷಗಳಲ್ಲಿ ಸಂಪೂರ್ಣವಾಗಿ ಸಬ್‌ಸ್ಕ್ರೈಬ್‌ ಆಗಿತ್ತು. 

911

ಐಪಿಒ ಪ್ರತಿ ಷೇರಿಗೆ 475 - 500 ರೂ. ದರ ಪಟ್ಟಿಯನ್ನು ಹೊಂದಿತ್ತು. ಇದು ಸಂಪೂರ್ಣವಾಗಿ 6.08 ಕೋಟಿ ಈಕ್ವಿಟಿ ಷೇರುಗಳ ಆಫರ್ ಫಾರ್ ಸೇಲ್ (OFS) ಆಗಿತ್ತು.

1011

ಈ ಮಧ್ಯೆ, ಟಾಟಾ ಟೆಕ್ನಾಲಜೀಸ್ ಸುಮಾರು ಎರಡು ದಶಕಗಳಲ್ಲಿ ಆರಂಭಿಕ ಸಾರ್ವಜನಿಕ ಕೊಡುಗೆಯನ್ನು ಪ್ರಾರಂಭಿಸಿದ ಟಾಟಾ ಗ್ರೂಪ್‌ನ ಮೊದಲ ಕಂಪನಿಯಾಗಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ 2004 ರಲ್ಲಿ ಕೊನೆಯ ಬಾರಿಗೆ IPO ಆಗಿತ್ತು.

1111

ಟಾಟಾ ಟೆಕ್ನಾಲಜೀಸ್ 67 ಪ್ರಮುಖ ಹೂಡಿಕೆದಾರರಿಂದ 791 ಕೋಟಿ ರೂ. ಸಂಗ್ರಹಿಸಿದೆ.  ಇದು ಪ್ರಾಥಮಿಕವಾಗಿ ಆಟೋಮೋಟಿವ್ ಉದ್ಯಮದ ಮೇಲೆ ಕೇಂದ್ರೀಕೃತವಾಗಿದೆ.

Read more Photos on
click me!

Recommended Stories