Karnataka| ಹೂಡಿಕೆದಾರರಿಗೆ ಸಕಲ ನೆರವು: ಸಚಿವ ಮುರುಗೇಶ್‌ ನಿರಾಣಿ

First Published | Nov 11, 2021, 11:49 AM IST

ಬೆಂಗಳೂರು(ನ.11):  ಕೋವಿಡ್‌-19(Covid19) ಸಾಂಕ್ರಾಮಿಕ ಅಪ್ಪಳಿಸಿದ ಬಳಿಕ 1 ಲಕ್ಷ ಕೋಟಿ ಹೂಡಿಕೆ ರಾಜ್ಯಕ್ಕೆ ಬಂದಿದೆ. ಇನ್ನಷ್ಟು ಹೂಡಿಕೆ(Investment) ಸೆಳೆಯಲು ರಾಜ್ಯ ಸರ್ಕಾರ ಬದ್ಧವಾಗಿದೆ. ಹೂಡಿಕೆ ಮಾಡಲು ಮುಂದೆ ಬರುವವರಿಗೆ ಸಕಲ ನೆರವು ನೀಡಲು ಸರ್ಕಾರ ಸಿದ್ಧವಾಗಿದೆ ಎಂದು ಮಧ್ಯಮ ಮತ್ತು ಬೃಹತ್‌ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ(Murugesh Nirani) ಹೇಳಿದ್ದಾರೆ.

ಲೀಲಾ ಪ್ಯಾಲೇಸ್‌ನಲ್ಲಿ ಭಾರತೀಯ ಕೈಗಾರಿಕಾ ಒಕ್ಕೂಟ (CII), ಭಾರತೀಯ ರಕ್ಷಣಾ ಉತ್ಪಾದಕರ ಸಂಘ (ಎಸ್‌ಐಡಿಎಂ)ದ ಸಹಯೋಗದೊಂದಿಗೆ ಅಮೆರಿಕ ಮುಂಚೂಣಿ ರಕ್ಷಣಾ ಉತ್ಪಾದನಾ ಸಂಸ್ಥೆ ಲಾಕ್‌ಹೀಡ್‌ ಮಾರ್ಟಿನ್‌ ಆಯೋಜಿಸಿದ್ದ 8ನೇ ವಾರ್ಷಿಕ ಪೂರೈಕೆದಾರರ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತಾನಾಡಿದ ಮುರುಗೇಶ್‌ ನಿರಾಣಿ

ಕರ್ನಾಟಕವು(Karnataka) ಕೈಗಾರಿಕೆಗಳಿಗೆ ಪೂರಕವಾದ ವಾತಾವರಣ ಹೊಂದಿದೆ. ಉದ್ದಿಮೆಗೆ(Business) ಸಂಬಂಧಿಸಿದ ವಿಷಯದಲ್ಲಿ ದೇಶದಲ್ಲೇ(India) ಅಗ್ರಪಂಕ್ತಿಯ ರಾಜ್ಯವಾಗಿ ಹೊಮ್ಮಿದೆ. ದೇಶದ ಶೇಕಡ 25 ವಿಮಾನ ಮತ್ತು ಬಾಹ್ಯಾಕಾಶ ಸಂಬಂಧಿ ಉದ್ದಿಮೆಗಳು ರಾಜ್ಯದಲ್ಲಿದೆ. ವಿಮಾನ ಮತ್ತು ಬಾಹ್ಯಾಕಾಶ ಸಂಬಂಧಿ ಉತ್ಪಾದನೆಯ ಶೇ.67 ರಾಜ್ಯದಲ್ಲಿ ನಡೆಯುತ್ತಿದೆ. ರಕ್ಷಣಾ(Defence) ಸಂಬಂಧಿ ಉದ್ದಿಮೆಗಳನ್ನು ಆಕರ್ಷಿಸಲು ಪ್ರಸ್ತುತ ಜಾರಿಯಲ್ಲಿರುವ ಏರೋಸ್ಪೇಸ್‌ ಮತ್ತು ಡಿಫೆನ್ಸ್‌ ನೀತಿಯಲ್ಲಿ ಅಗತ್ಯ ಬದಲಾವಣೆ ತರಲು ಸಿದ್ಧರಿರುವುದಾಗಿ ಸಚಿವರು ಹೇಳಿದರು.

Latest Videos


ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಈಗಿರುವ ಏರೋಸ್ಪೇಸ್‌ ಮತ್ತು ರಕ್ಷಣಾ ಪಾರ್ಕ್‌(Aerospace and Defence Park) ಸಮೀಪದಲ್ಲೇ 1,200 ಎಕರೆ ಜಾಗದಲ್ಲಿ ಇನ್ನೊಂದು ಪಾರ್ಕ್ ಸ್ಥಾಪಿಸಲಾಗುತ್ತಿದೆ ಎಂದು ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಇ.ವಿ.ರಮಣರೆಡ್ಡಿ ಹೇಳಿದ್ದಾರೆ.

ಎಸ್‌ಐಡಿಮ್‌ನ ಅಧ್ಯಕ್ಷ ಜಯಂತ್‌ ಪಾಟೀಲ್‌ ಮಾತನಾಡಿ, ಮೇಕ್‌ ಇನ್‌ ಇಂಡಿಯಾ(Make In India) ಜಾರಿಯಾದಾಗ ಶೇ. 30 ಉತ್ಪಾದನೆ ದೇಶದಲ್ಲಿ ನಡೆಯಬೇಕು ಉಳಿದ ಶೇ.70ರಷ್ಟು ಆಮದು ಮಾಡಿಕೊಳ್ಳಬಹುದು ಎಂಬ ಭಾವನೆಯಿತ್ತು. ಆದರೆ ಈಗ ಶೇ.60ರಿಂದ ಶೇ.70ರಷ್ಟು ಭಾರತದಲ್ಲೇ ಉತ್ಪಾದನೆ ಆಗುತ್ತಿದೆ. ಭಾರತದಲ್ಲಿ ಜ್ಞಾನ, ಉತ್ಪಾದನೆ ಮತ್ತು ತಂತ್ರಜ್ಞಾನದ ದೊಡ್ಡ ಹೂಡಿಕೆ ನಡೆಯುತ್ತಿದೆ ಎಂದು ಹೇಳಿದರು.

ಲಾಕ್‌ಹೀಡ್‌ ಮಾರ್ಟಿನ್‌ನ ಉಪಾಧ್ಯಕ್ಷ ವಿನ್ಸೆಂಟ್‌ ಪನ್ಸೆರಾ ಮಾತಾನಾಡಿ, ಭಾರತದಲ್ಲಿ ವ್ಯವಹಾರ ನಡೆಸುವುದು ಅತ್ಯಂತ ಸರಳವಾಗಿದೆ. 2020ರಲ್ಲಿ ಭಾರತವು ವ್ಯವಹಾರ ಸರಳತೆಯ ಶ್ರೇಯಾಂಕದಲ್ಲಿ 63ನೇ ಸ್ಥಾನ ಪಡೆದಿತ್ತು. ಆದರೆ 2016ಕ್ಕೆ ಹೋಲಿಸಿದರೆ 70 ಸ್ಥಾನ ಜಿಗಿದಿದೆ ಎಂಬುದನ್ನು ನಾವು ಗಮನಿಸಬೇಕು. ಭಾರತದ ಜೊತೆಗೆ ದೀರ್ಘಕಾಲೀನ ಸಂಬಂಧ ಹೊಂದಲು ನಾವು ಬಯಸುತ್ತೇವೆ ಎಂದು ಹೇಳಿದರು

click me!