ಷೇರು ಮಾರುಕಟ್ಟೆಯಲ್ಲಿನ ಏರಿಳಿತಗಳಿಂದಾಗಿ ಹಲವರು ಸುರಕ್ಷಿತ ಹೂಡಿಕೆಗಳತ್ತ ಮುಖ ಮಾಡುತ್ತಿದ್ದಾರೆ. ಇಂತಹವರಿಗೆ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಒಂದು ಉತ್ತಮ ಆಯ್ಕೆ. ಸರ್ಕಾರದ ಬೆಂಬಲವಿರುವ ಈ ಯೋಜನೆಯಲ್ಲಿ ಹಣಕ್ಕೆ 100% ಭದ್ರತೆ ಜೊತೆಗೆ ಆದಾಯ ತೆರಿಗೆಯಲ್ಲಿ ವಿನಾಯಿತಿಯೂ ಇದೆ. ಪೋಸ್ಟ್ ಆಫೀಸ್‌ಗಳಲ್ಲಿ ಖಾತೆ ತೆರೆಯಬಹುದು.
25
ಯೋಜನೆ ಏನು?
ಕನಿಷ್ಠ 1000 ರೂ.ಗಳಿಂದ ಈ ಯೋಜನೆ ಆರಂಭಿಸಬಹುದು. 5 ವರ್ಷಗಳ ಅವಧಿಗೆ ಲಭ್ಯವಿದೆ. ಪ್ರಸ್ತುತ ವಾರ್ಷಿಕ 7.7% ಚಕ್ರಬಡ್ಡಿ ದೊರೆಯುತ್ತದೆ. ಹೂಡಿಕೆಗೆ ಮಿತಿ ಇಲ್ಲ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಲಭ್ಯ.
35
ಹೇಗೆ ಹೂಡಿಕೆ ಮಾಡುವುದು?
100 ರೂ.ಗಳಿಂದ 10,000 ರೂ. ಅಥವಾ ಹೆಚ್ಚಿನ ಮೊತ್ತ ಹೂಡಿಕೆ ಮಾಡಬಹುದು. ಗರಿಷ್ಠ ಮಿತಿ ಇಲ್ಲ. ಆದರೆ ಹಳೆಯ ತೆರಿಗೆ ಪದ್ಧತಿಯಲ್ಲಿ 1.5 ಲಕ್ಷ ರೂ.ವರೆಗೆ ಮಾತ್ರ ತೆರಿಗೆ ವಿನಾಯಿತಿ.
3 ಲಕ್ಷ ಬಡ್ಡಿ ಪಡೆಯಲು 10 ಲಕ್ಷ ರೂ. ಹೂಡಿಕೆ ಮಾಡಿದರೆ, 5 ವರ್ಷಗಳಲ್ಲಿ 13,38,226 ರೂ. ಆಗುತ್ತದೆ. ಅಂದರೆ 3 ಲಕ್ಷಕ್ಕೂ ಹೆಚ್ಚು ಬಡ್ಡಿ.
55
ಯಾರಿಗೆ ಲಾಭ?
ನಿವೃತ್ತ ನೌಕಕರಿಗೆ (ವಿಶ್ರಾಂತ ಜೀವನ ಮಾಡುವವರಿಗೆ) ಈ ಯೋಜನೆ ಉತ್ತಮ ಆಯ್ಕೆ. ಹೆಚ್ಚಿನ ಹಣ ಹೊಂದಿರುವವರು ಹೂಡಿಕೆ ಮಾಡಬಹುದು. ಮಾರುಕಟ್ಟೆ ಏರಿಳಿತಗಳಿಂದ ದೂರ ಸುರಕ್ಷಿತ ಆದಾಯ ಬಯಸುವವರಿಗೆ ಉತ್ತಮ.