ಅಂಬಾನಿಯ ರಿಲಯನ್ಸ್ ಜಿಯೋ-ಅಮೇರಿಕಾ ಕಂಪೆನಿ ಒಪ್ಪಂದ; 200 ಮಿಲಿಯನ್‌ ಚಂದಾದಾರರಿಗೆ ಭರ್ಜರಿ ಲಾಭ

Published : Oct 26, 2023, 12:51 PM ISTUpdated : Oct 26, 2023, 02:03 PM IST

ಭಾರತದಲ್ಲಿ ಅಗ್ರ ಟೆಲಿಕಾಂ ಆಪರೇಟರ್ ಆಗಿರುವ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಇನ್ಫೋಕಾಮ್, ಭಾರತದಾದ್ಯಂತ ಸುಮಾರು 200 ಮಿಲಿಯನ್ ಚಂದಾದಾರರಿಗೆ AI ವರ್ಧಿತ ಆಂತರಿಕ ಸೇವೆಗಳನ್ನು ತಲುಪಿಸಲು ಯುಎಸ್ ಮೂಲದ ಕಂಪನಿ ಪ್ಲೂಮ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. 

PREV
19
ಅಂಬಾನಿಯ ರಿಲಯನ್ಸ್ ಜಿಯೋ-ಅಮೇರಿಕಾ ಕಂಪೆನಿ ಒಪ್ಪಂದ; 200 ಮಿಲಿಯನ್‌ ಚಂದಾದಾರರಿಗೆ ಭರ್ಜರಿ ಲಾಭ

ಭಾರತದಲ್ಲಿ ಅಗ್ರ ಟೆಲಿಕಾಂ ಆಪರೇಟರ್ ಆಗಿರುವ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಇನ್ಫೋಕಾಮ್, ಭಾರತದಾದ್ಯಂತ ಸುಮಾರು 200 ಮಿಲಿಯನ್ ಚಂದಾದಾರರಿಗೆ AI ವರ್ಧಿತ ಆಂತರಿಕ ಸೇವೆಗಳನ್ನು ತಲುಪಿಸಲು ಯುಎಸ್ ಮೂಲದ ಕಂಪನಿ ಪ್ಲೂಮ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ರಿಲಯನ್ಸ್ ಜಿಯೋ ತನ್ನ ಗುರಿಯನ್ನು ಸಾಧಿಸಲು ಪ್ಲೂಮ್‌ನ ಕ್ಲೌಡ್ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಳ್ಳಲು ಯೋಜಿಸುತ್ತಿದೆ.

29

ಈ ಹೊಸ ಪಾಲುದಾರಿಕೆಯೊಂದಿಗೆ, ಜಿಯೋ 'ಹೋಮ್‌ಪಾಸ್' ಮತ್ತು 'ವರ್ಕ್‌ಪಾಸ್' ಗ್ರಾಹಕ ಸೇವೆಗಳನ್ನು  AI-ಚಾಲಿತ ಮತ್ತು ಕ್ಲೌಡ್-ಆಧಾರಿತ ಪ್ಲಾಟ್‌ಫಾರ್ಮ್‌ನಿಂದ ಸಕ್ರಿಯಗೊಳಿಸುತ್ತದೆ.

39

ಇದರಲ್ಲಿ ಸಂಪೂರ್ಣ-ಹೋಮ್ ಅಡಾಪ್ಟಿವ್ ವೈಫೈ, ಸಂಪರ್ಕಿತ ಸಾಧನ ಮತ್ತು ಅಪ್ಲಿಕೇಶನ್ ಕಾರ್ಯಕ್ಷಮತೆ ಆಪ್ಟಿಮೈಸೇಶನ್, ಸಂಪರ್ಕಿತ ಸಾಧನಗಳಿಗೆ ಸೈಬರ್‌ಥ್ರೀಟ್ ರಕ್ಷಣೆ, ಸುಧಾರಿತ ಪೋಷಕರ ನಿಯಂತ್ರಣಗಳು, ವೈಫೈ ಮೋಷನ್ ಸೆನ್ಸಿಂಗ್ ಮತ್ತು ಹೆಚ್ಚಿನವು ಲಭ್ಯವಿರಲಿದೆ. ಈ ಬಗ್ಗೆ ರಿಲಯನ್ಸ್ ಜಿಯೋ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

49

ಎರಡು ಕಂಪನಿಗಳ ನಡುವಿನ ಒಪ್ಪಂದದ ಭಾಗವಾಗಿ, ಜಿಯೋ ಬೆಂಬಲ ಮತ್ತು ಕಾರ್ಯಾಚರಣೆ ತಂಡಗಳಿಗೆ ತನ್ನ 'ಹೇಸ್ಟಾಕ್' ಬೆಂಬಲ ಮತ್ತು ಆಪರೇಷನ್ ಸೂಟ್‌ಗೆ ಪ್ರವೇಶವನ್ನು ಒದಗಿಸಲು ಪ್ಲೂಮ್ ಒಪ್ಪಿಕೊಂಡಿದೆ. ಪ್ಲೂಮ್‌ನ ಸೂಟ್ ಹೆಚ್ಚು ಸುಧಾರಿತವಾಗಿದೆ. ಇದು ತ್ವರಿತ ಸಮಯದಲ್ಲಿ ಕಾರ್ಯಕ್ಷಮತೆಯ ಸಮಸ್ಯೆಗಳನ್ನು ಗುರುತಿಸಲು ಮತ್ತು ಪರಿಹರಿಸಲು ಸಹಾಯ ಮಾಡುತ್ತದೆ.

59

ರಿಲಯನ್ಸ್ ಜಿಯೋ ಅಧ್ಯಕ್ಷ ಮ್ಯಾಥ್ಯೂ ಉಮ್ಮನ್ ಅವರು ಪ್ಲಮ್ ಜೊತೆ ಪಾಲುದಾರಿಕೆಯನ್ನು ರೂಪಿಸುವ ಕಂಪನಿಯ ನಿರ್ಧಾರವು ರಿಲಯನ್ಸ್ ಜಿಯೋದ ಜಿಯೋಫೈಬರ್ ಮತ್ತು ಜಿಯೋ ಏರ್ಫೈಬರ್ ನೆಟ್‌ವರ್ಕ್‌ಗಳಿಗೆ ಸಹಾಯ ಮಾಡುತ್ತದೆ ಎಂದು ಹೇಳಿದರು. 

69

ಭಾರತೀಯ ಮಾರುಕಟ್ಟೆಯ ಅಗತ್ಯತೆಗಳನ್ನು ಪೂರೈಸಲು ಸೂಕ್ತವಾದ ಮತ್ತು ಹೆಚ್ಚು ಸ್ಕೇಲೆಬಲ್ ಕ್ಲೌಡ್-ಆಧಾರಿತ ಪರಿಹಾರವನ್ನು ನೀಡುವ ನಮ್ಮ ಸಾಮರ್ಥ್ಯವು ಜಿಯೋ ತನ್ನ ಸೇವೆಗಳ ಕೊಡುಗೆಯನ್ನು ತ್ವರಿತವಾಗಿ ವಿಸ್ತರಿಸಲು ಅನುವು ಮಾಡಿಕೊಡುತ್ತದೆ" ಎಂದು ಪ್ಲೂಮ್‌ನ ಮುಖ್ಯ ಆದಾಯ ಅಧಿಕಾರಿ ಆಡ್ರಿಯನ್ ಫಿಟ್ಜ್‌ಗೆರಾಲ್ಡ್ ಹೇಳಿದ್ದಾರೆ.

79

ಮೊಬೈಲ್ ನೆಟ್ ವರ್ಕ್‌ಗಾಗಿ ಮಾರುಕಟ್ಟೆಯ ಎಲ್ಲ ಒಂಬತ್ತು ಪ್ರಶಸ್ತಿಗಳನ್ನು ಜಿಯೋ ಪಡೆದುಕೊಂಡಿದೆ. ಇಷ್ಟು ದಿನ ಡೌನ್ಲೋಡ್ ಸ್ಪೀಡ್‌ನಲ್ಲಿ ಮುಂಚೂಣಿಯಲ್ಲಿದ್ದ ಜಿಯೋ ಇದೀಗ ಅಪ್‌ಲೋಡ್‍ನಲ್ಲೂ ನಂಬರ್ 1 ಆಗಿದೆ.

89

2023ರ ಮೊದಲ ತ್ರೈಮಾಸಿಕದಿಂದ ಎರಡನೇ ತ್ರೈಮಾಸಿಕದಲ್ಲಿ  5ಜಿ ಡೌನ್ ಲೋಡ್ ಮತ್ತು ಅಪ್ ಲೋಡ್ ವೇಗದಲ್ಲಿ ತನ್ನ ಪ್ರಮುಖ ಪ್ರತಿಸ್ಪರ್ಧಿ ಭಾರ್ತಿ ಏರ್‌ಟೆಲ್ ಹಿಂದಿಕ್ಕಿದೆ. ಭಾರತದ ನಂಬರ್ ಒನ್ ನೆಟ್ ವರ್ಕ್ ಆಗಿ ಜಿಯೋ ರೂಪುಗೊಂಡಿದ್ದು, ಮೊಬೈಲ್ ನೆಟ್ ವರ್ಕ್ ಗಾಗಿ ಮಾರುಕಟ್ಟೆಯ ಎಲ್ಲ ಒಂಬತ್ತು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. 

99

ಬೆಸ್ಟ್ ಮೊಬೈಲ್ ನೆಟ್ ವರ್ಕ್, ಫಾಸ್ಟೆಸ್ಟ್ ಮೊಬೈಲ್ ನೆಟ್ ವರ್ಕ್, ಬೆಸ್ಟ್ ಮೊಬೈಲ್ ಕವರೇಜ್, ಟಾಪ್ ರೇಟೆಡ್ ಮೊಬೈಲ್ ನೆಟ್ ವರ್ಕ್, ಬೆಸ್ಟ್ ಮೊಬೈಲ್ ವಿಡಿಯೋ ಎಕ್ಸ್ ಪೀರಿಯೆನ್ಸ್, ಬೆಸ್ಟ್ ಮೊಬೈಲ್ ಗೇಮಿಂಗ್ ಎಕ್ಸ್ ಪೀರಿಯೆನ್ಸ್, ಫಾಸ್ಟೆಸ್ಟ್ 5ಜಿ ಮೊಬೈಲ್ ನೆಟ್ ವರ್ಕ್, ಬೆಸ್ಟ್ 5ಜಿ ಮೊಬೈಲ್ ವಿಡಿಯೋ ಎಕ್ಸ್ ಪೀರಿಯೆನ್ಸ್, ಹಾಗೂ ಬೆಸ್ಟ್ 5ಜಿ ಮೊಬೈಲ್ ಗೇಮಿಂಗ್ ಎಕ್ಸ್ ಪೀರಿಯೆನ್ಸ್ ಹೀಗೆ ಒಂಬತ್ತು ಪ್ರಶಸ್ತಿಗಳು ಬಂದಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories