ಕೇವಲ 10000 ರೂ. ಸಾಲ ಪಡೆದು ಬಿಸಿನೆಸ್ ಆರಂಭಿಸಿದ್ದ ವ್ಯಕ್ತಿ, ಈಗ ಅಂಬಾನಿ, ಟಾಟಾಗೇ ಸ್ಪರ್ಧಿ!

First Published | Oct 25, 2023, 10:38 AM IST

ಬಿಲಿಯನೇರ್ಸ್‌, ಕೋಟಿ ಕೋಟಿ ಉದ್ಯಮವನ್ನು ಮುನ್ನಡೆಸುತ್ತಿರುವ ವ್ಯಕ್ತಿಗಳು ಯಾರೂ ದಿಢೀರ್ ಎಂದು ಕೋಟ್ಯಾಧಿಪತಿಗಳಾದವರಲ್ಲ. ಕಡು ಬಡತನದಿಂದ ಬಂದು ಬೃಹತ್ ಉದ್ಯಮವನ್ನು ಕಟ್ಟಿದ ಲಕ್ಷಾಂತರ ಮಂದಿಯಿದ್ದಾರೆ. ಅಂಥಾ ವ್ಯಕ್ತಿಗಳಲ್ಲೊಬ್ಬರು ಈ ಬೃಹತ್‌ ಬ್ರ್ಯಾಂಡ್‌ನ ಮಾಲೀಕ. ಈಗ ಅಂಬಾನಿ, ರತನ್ ಟಾಟಾಗೆ ಸ್ಪರ್ಧಿ.

ಮುಫ್ತಿ, ಭಾರತದಲ್ಲಿ ಪ್ರಸಿದ್ಧವಾದ ಫ್ಯಾಷನ್ ಬ್ರಾಂಡ್ ಆಗಿದೆ. ಬ್ರ್ಯಾಂಡ್ ಅತ್ಯುತ್ತಮ ಪುರುಷರ ಉಡುಪುಗಳನ್ನು ತಯಾರಿಸುವುದಕ್ಕೆ ಹೆಸರುವಾಸಿಯಾಗಿದೆ. 2022-23ರ ಆರ್ಥಿಕ ವರ್ಷದಲ್ಲಿ ಕಂಪನಿಯ ಆದಾಯ ಸುಮಾರು 500 ಕೋಟಿ ರೂ. ಆಗಿತ್ತು. ಆದರೆ, ಈ ಯಶಸ್ವೀ ಬ್ರ್ಯಾಂಡ್‌ನ್ನು ಕಂಪೆನಿಯ ಸಂಸ್ಥಾಪಕರು ತಮ್ಮ ಸಂಬಂಧಿಕರೊಬ್ಬರಿಂದ 10,000 ಸಾಲ ಪಡೆದು ಆರಂಭಿಸಿದ್ದರು.

ಮುಫ್ತಿ, ಸಂಸ್ಥಾಪಕ ಕಮಲ್ ಖುಷ್ಲಾನಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದರು. ಅವರಿಗೆ 19 ವರ್ಷವಿದ್ದಾಗ ಅವರ ತಂದೆ ನಿಧನರಾದರು. ಕಮಲ್ ಖುಶ್ಲಾನಿ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡುವ ಸಲುವಾಗಿ ಕ್ಯಾಸೆಟ್ ಕಂಪನಿಯಲ್ಲಿ ಕೆಲಸ ಮಾಡಲು ಆರಂಭಿಸಿದರು. ಆದರೆ ಫ್ಯಾಶನ್ ಬ್ರ್ಯಾಂಡ್ ರೂಪಿಸುವುದು ಅವರ ಕನಸಾಗಿತ್ತು. ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದಾಗಿ ಅವರು ಕನಸನ್ನು ಪೂರೈಸುವಲ್ಲಿ ಯಶಸ್ವಿಯಾದರು.

Tap to resize

ಮಫ್ತಿ ಈಗ 379 ವಿಶೇಷ ಬ್ರಾಂಡ್ ಸ್ಟೋರ್‌ಗಳು, 89 ದೊಡ್ಡ ಫಾರ್ಮ್ಯಾಟ್ ಸ್ಟೋರ್‌ಗಳು ಮತ್ತು 1305 ಮಲ್ಟಿ-ಬ್ರಾಂಡ್ ಔಟ್‌ಲೆಟ್‌ಗಳನ್ನು ದೇಶಾದ್ಯಂತ ಹೊಂದಿದೆ. ಮಫ್ತಿಯ ಉತ್ಪನ್ನಗಳಲ್ಲಿ ಶರ್ಟ್‌ಗಳು, ಜೀನ್ಸ್, ಪ್ಯಾಂಟ್, ಟೀ ಶರ್ಟ್‌ಗಳು, ಶಾರ್ಟ್ಸ್, ಬ್ಲೇಜರ್‌ಗಳು ಮತ್ತು ಚಳಿಗಾಲದ ಉಡುಪು/ಔಟರ್‌ವೇರ್ ಹಾಗೂ ಪಾದರಕ್ಷೆಗಳು ಸೇರಿವೆ. 2022-23ನೇ ಹಣಕಾಸು ವರ್ಷದಲ್ಲಿ ಕಂಪನಿಯ ಆದಾಯ 498.18 ಕೋಟಿ ರೂ. ಆಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ 341.17 ಕೋಟಿ ರೂ.

1992ರಲ್ಲಿ, ಕಮಲ್ ಖುಶ್ಲಾನಿ ಪುರುಷರ ಶರ್ಟ್‌ಗಳಿಗಾಗಿ Mr & Mr ಹೆಸರಿನ ಉತ್ಪಾದನಾ ಕಂಪನಿಯನ್ನು ತೆರೆದರು. ಈ ಕಂಪನಿ ಸ್ಥಾಪಿಸಲು ಚಿಕ್ಕಮ್ಮನಿಂದ 10,000 ರೂ. ಪಡೆದಿದ್ದರು. ಕಚೇರಿ ಬಾಡಿಗೆ ಕಟ್ಟಲು ಕಮಲ್ ಬಳಿ ಹಣವಿಲ್ಲದ ಕಾರಣ ತನ್ನ ಮನೆಯನ್ನು ಕಚೇರಿ ಹಾಗೂ ಗೋದಾಮನ್ನಾಗಿ ಮಾಡಿಕೊಂಡಿದ್ದರು.

199ರಲ್ಲಿ ಕಮಲ್ ಖುಷ್ಲಾನಿ, ಮಫ್ತಿ ಎಂಬ ಫ್ಯಾಶನ್ ಬ್ರಾಂಡ್ ಪ್ರಾರಂಭಿಸಿದರು. ಆರಂಭದಲ್ಲಿ ಕಮಲ್ ಅವರ ಬಳಿ ಒಂದು ಬೈಕು ಇತ್ತು, ಅದರಲ್ಲಿ ಅವರು ಹಲವಾರು ಕೆಜಿ ಬಟ್ಟೆಯನ್ನು ತುಂಬಿಕೊಂಡು ವರ್ಕ್‌ಶಾಪ್‌ಗೆ ತೆಗೆದುಕೊಂಡು ಹೋಗುತ್ತಿದ್ದರು.

ಬಟ್ಟೆ ತಯಾರಿಸುವಾಗ ಅದೇ ಬೈಕ್ ನಲ್ಲಿ ತುಂಬಿಕೊಂಡು ಮಾರಾಟ ಮಾಡಲು ಹೋಗುತ್ತಿದ್ದರು. ಕಮಲ್ ತನ್ನ ಬೈಕ್‌ನಲ್ಲಿ ಸೂಟ್‌ಕೇಸ್‌ನಲ್ಲಿ ಬಟ್ಟೆಗಳನ್ನು ಮಾರಾಟ ಮಾಡುತ್ತಿದ್ದರು. 2000ದ ನಂತರ ಜನರು ಮಫ್ತಿ ಜೀನ್ಸ್ ಖರೀದಿಸಲು ಆರಂಭಿಸಿದಾಗ ಮಫ್ತಿ ಜನಪ್ರಿಯವಾಯಿತು. ಮಫ್ತಿ ಭಾರತದಲ್ಲಿ ಸ್ಟ್ರೆಚ್ಡ್ ಜೀನ್ಸ್ ತಯಾರಿಸಲು ಪ್ರಾರಂಭಿಸಿದ ಮೊದಲ ಬ್ರಾಂಡ್ ಆಗಿದೆ.

ಮುಫ್ತಿ ಬ್ರ್ಯಾಂಡ್‌ ಈಗ ಮುಕೇಶ್ ಅಂಬಾನಿಯವರ ರಿಲಯನ್ಸ್ ರೀಟೇಲ್ ಮತ್ತು ರತನ್ ಟಾಟಾ ಅವರ ವೆಸ್ಟ್‌ಸೈಡ್ ಸೇರಿದಂತೆ ಹಲವಾರು ಬ್ರಾಂಡ್‌ಗಳು ಮತ್ತು ವ್ಯಾಪಾರ ಸಂಸ್ಥೆಗಳೊಂದಿಗೆ ಸ್ಪರ್ಧಿಸುತ್ತಿದೆ. ಇದು ಇತರ ವಸ್ತುಗಳ ಜೊತೆಗೆ ಬಟ್ಟೆ ಮತ್ತು ಪಾದರಕ್ಷೆಗಳನ್ನು ಸಹ ಯಶಸ್ವಿಯಾಗಿ ಮಾರಾಟ ಮಾಡ್ತಿದೆ.

Latest Videos

click me!