ಬರೋಬ್ಬರಿ 494 ಕೋಟಿ ಮೌಲ್ಯದ ಐಷಾರಾಮಿ ಬಂಗಲೆ ಮಾರಾಟ ಮಾಡಿದ ಇಶಾ ಅಂಬಾನಿ, ಖರೀದಿಸಿದ್ಯಾರು?

Published : Apr 03, 2024, 09:16 AM IST

ಮುಕೇಶ್ ಅಂಬಾನಿ ಮಗಳ ಐಷಾರಾಮಿ ಜೀವನಶೈಲಿ ಎಲ್ಲರಿಗೂ ಗೊತ್ತಿರುವಂಥದ್ದೇ. ಬಿಲಿಯನೇರ್‌ ಮಗಳಾದ ಇಶಾ ಅಂಬಾನಿ ಜಗತ್ತಿನ ಹಲವೆಡೆ ಐಷಾರಾಮಿ ಬಂಗಲೆಯನ್ನು ಸಹ ಹೊಂದಿದ್ದಾರೆ. ಸದ್ಯ ಇದರಲ್ಲಿ ಲಾಸ್ ಏಂಜಲೀಸ್‌ನಲ್ಲಿರುವ ತಮ್ಮ ಐಷಾರಾಮಿ ಬಂಗಲೆಯನ್ನು ಮಾರಾಟ ಮಾಡ್ತಿದ್ದಾರೆ. ಇದನ್ನು ಖರೀದಿಸ್ತಿರೋದು ಯಾರು?

PREV
18
ಬರೋಬ್ಬರಿ 494 ಕೋಟಿ ಮೌಲ್ಯದ ಐಷಾರಾಮಿ ಬಂಗಲೆ ಮಾರಾಟ ಮಾಡಿದ ಇಶಾ ಅಂಬಾನಿ, ಖರೀದಿಸಿದ್ಯಾರು?

ಮುಕೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಬರೋಬ್ಬರಿ 15000 ಕೋಟಿ ರೂಪಾಯಿಗಿಂತ ಹೆಚ್ಚು ಮೌಲ್ಯದ ದೇಶದ ಅತ್ಯಂತ ದುಬಾರಿ ಮನೆ ಆಂಟಿಲಿಯಾದಲ್ಲಿ ವಾಸಿಸುತ್ತಿದ್ದಾರೆ. ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರು ಜಗತ್ತಿನಾದ್ಯಂತ ಐಷಾರಾಮಿ ಆಸ್ತಿಗಳನ್ನು ಹೊಂದಿದ್ದಾರೆ.
 

28

ಬಿಲಿಯನೇರ್‌ ಮಕ್ಕಳಾದ ಇಶಾ ಅಂಬಾನಿ, ಆಕಾಶ್ ಅಂಬಾನಿ, ಅನಂತ್ ಅಂಬಾನಿ ಸಹ ಲಕ್ಸುರಿಯಸ್ ಲೈಫ್‌ಸ್ಟೈಲ್ ಫಾಲೋ ಮಾಡುತ್ತಾರೆ. ಆನಂದ್ ಪಿರಾಮಲ್‌ರನ್ನು ಮದುವೆಯಾಗಿರುವ ಇಶಾ ಸಹ ಅಂಬಾನಿ ವಿದೇಶದಲ್ಲಿಯೂ ಹಲವು ಐಷಾರಾಮಿ ಬಂಗಲೆಗಳನ್ನು ಹೊಂದಿದ್ದಾರೆ.

38

ಇದರಲ್ಲಿ ಒಂದು ಐಷಾರಾಮಿ ಬಂಗಲೆಯನ್ನು ಇಶಾ ಅಂಬಾನಿ ಹಾಲಿವುಡ್ ಕಪಲ್‌ಗೆ ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಯಾರಿಗೆ ಇದನ್ನು ಮಾರಾಟ ಮಾಡಿದ್ದಾರೆ ಅನ್ನೋ ಮಾಹಿತಿಯೂ ಬಹಿರಂಗಗೊಂಡಿದೆ.

48

ಮುಕೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಅವರು ಲಾಸ್ ಏಂಜಲೀಸ್‌ನಲ್ಲಿರುವ ತಮ್ಮ ಐಷಾರಾಮಿ ಮಹಲುಗಳಲ್ಲಿ ಒಂದನ್ನು ಜನಪ್ರಿಯ ಹಾಲಿವುಡ್ ಜೋಡಿ ಬೆನ್ ಅಫ್ಲೆಕ್ ಮತ್ತು ಜೆನ್ನಿಫರ್ ಲೋಪೆಜ್‌ಗೆ ಮಾರಾಟ ಮಾಡಿದ್ದಾರೆ.

58

ವರದಿಯ ಪ್ರಕಾರ, ಇಶಾ ಅಂಬಾನಿ ದಂಪತಿಗೆ ಆಸ್ತಿಯನ್ನು 494 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇಶಾ ಅಂಬಾನಿ 2022ರಲ್ಲಿ ತಮ್ಮ ಈ ಐಷಾರಾಮಿ ಬಂಗಲೆಯಲ್ಲಿ ಸಮಯವನ್ನು ಕಳೆದಿದ್ದರು. 

68

ಮುಕೇಶ್ ಅಂಬಾನಿ ಅವರ ಪತ್ನಿ ಮತ್ತು ಇಶಾ ಅಂಬಾನಿ ಅವರ ತಾಯಿ ನೀತಾ ಅಂಬಾನಿ ಅವರು ತಮ್ಮ ಗರ್ಭಿಣಿ ಮಗಳ ಜೊತೆಗೆ ಈ ಬಂಗಲೆಯಲ್ಲಿ ವಾಸವಾಗಿದ್ದರು. ಇಶಾ ಅಂಬಾನಿ ಅವರು ಕಳೆದ ಐದು ವರ್ಷದ ಹಿಂದೆ ಮಾರಾಟ ಮಾಡುವ ಬಗ್ಗೆ ಬಹಿರಂಗಪಡಿಸಿದ್ದರು.

78

ದುಬಾರಿ ಬೆಲೆಯ ಬೆವರ್ಲಿ ಹಿಲ್ಸ್ ಪ್ರದೇಶದಲ್ಲಿ 5.2 ಎಕರೆ ವಿಸ್ತೀರ್ಣದಲ್ಲಿ ಅಂಬಾನಿಗಳಿಗೆ ಸೇರಿದ ಬೃಹತ್ ಭವನವಿದೆ. ಇದು 155-ಅಡಿ ಇನ್ಫಿನಿಟಿ ಪೂಲ್, ಒಳಾಂಗಣ ಪಿಕಲ್‌ಬಾಲ್ ಕೋರ್ಟ್, ಸಲೂನ್, ಜಿಮ್, ಸ್ಪಾಗಳು ಸೇರಿದಂತೆ ಹಲವಾರು ಐಷಾರಾಮಿ ಸವಲತ್ತುಗಳನ್ನು ಒಳಗೊಂಡಿದೆ. 

88

12 ಮಲಗುವ ಕೋಣೆಗಳು ಮತ್ತು 24 ಸ್ನಾನಗೃಹಗಳೊಂದಿಗೆ, ಐಷಾರಾಮಿ ಮಹಲು ಹೊರಾಂಗಣ ಮನರಂಜನಾ ಪೆವಿಲಿಯನ್, ಅಡುಗೆಮನೆ ಮತ್ತು ಸೊಂಪಾದ ಹುಲ್ಲುಹಾಸುಗಳನ್ನು ಹೊಂದಿದೆ. ಸದ್ಯ ಹಾಲಿವುಡ್ ಜೋಡಿ ಈ ಐಷಾರಾಮಿ ಬಂಗಲೆಯನ್ನು ಖರೀದಿಸಿದ್ದಾರೆ.     

Read more Photos on
click me!

Recommended Stories