ರಿಲಯನ್ಸ್ ಕಂಪೆನಿಗಳಲ್ಲಿ ಅನಿಲ್‌-ಮುಖೇಶ್ ಸೇರಿ ಅಂಬಾನಿ ಕುಟುಂಬದವರ ಪಾತ್ರ, ಒಬ್ಬೊಬ್ಬರ ನಿವ್ವಳ ಮೌಲ್ಯವೆಷ್ಟು?

First Published Mar 28, 2024, 1:38 PM IST

ದಿವಂಗತ ಧೀರೂಭಾಯಿ ಅಂಬಾನಿಯವರು ರಿಲಯನ್ಸ್ ಕಮರ್ಷಿಯಲ್ ಕಾರ್ಪೊರೇಶನ್ ಅನ್ನು ಸ್ಥಾಪಿಸಿದರು, ಅದು 1985 ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಆಗಿ ಮಾರ್ಪಟ್ಟಿತು. ಈಗ, ಮುಖೇಶ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥರಾಗಿದ್ದಾರೆ ಮತ್ತು ರಿಲಯನ್ಸ್ ಗ್ರೂಪ್ ಅನ್ನು ಕಿರಿಯ ಮಗ ಅನಿಲ್ ಅಂಬಾನಿ ಮುನ್ನಡೆಸುತ್ತಿದ್ದಾರೆ. ಈ ಕಂಪನಿಗಳಲ್ಲಿ ಅಂಬಾನಿ ಕುಟುಂಬದ ಪ್ರತಿಯೊಬ್ಬ ಸದಸ್ಯರ ಪಾತ್ರ ಮತ್ತು ಹುದ್ದೆಗಳ ಬಗ್ಗೆ ವಿವರಣೆ ನೀಡಲಾಗಿದೆ.

ಮುಖೇಶ್ ಅಂಬಾನಿ ಅವರು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ, ಇದು ಭಾರತದ ಅತಿದೊಡ್ಡ ಖಾಸಗಿ ವಲಯದ ನಿಗಮಗಳಲ್ಲಿ ಒಂದಾಗಿದೆ. ಫೋರ್ಬ್ಸ್ ಪ್ರಕಾರ ಅವರ ನಿವ್ವಳ ಮೌಲ್ಯವು  114 ಬಿಲಿಯನ್ ಡಾಲರ್ (ರೂ. 95,29,69,89,00,000) ಆಗಿದೆ.

Anil Ambani
ಮುಖೇಶ್ ಅಂಬಾನಿ ಸಹೋದರ ಅನಿಲ್ ಅಂಬಾನಿ ರಿಲಯನ್ಸ್ ಗ್ರೂಪ್ ಅಥವಾ ರಿಲಯನ್ಸ್ ಎಡಿಎ ಗ್ರೂಪ್‌ನ ಅಧ್ಯಕ್ಷರಾಗಿದ್ದಾರೆ. ಇದು ರಿಲಯನ್ಸ್ ಕಮ್ಯುನಿಕೇಷನ್ಸ್, ರಿಲಯನ್ಸ್ ಕ್ಯಾಪಿಟಲ್, ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್, ರಿಲಯನ್ಸ್ ಪವರ್, ರಿಲಯನ್ಸ್ ಡಿಫೆನ್ಸ್ ಮತ್ತು ಇಂಜಿನಿಯರಿಂಗ್ ಲಿಮಿಟೆಡ್, ರಿಲಯನ್ಸ್ ಡಿಫೆನ್ಸ್ ಲಿಮಿಟೆಡ್ ಮತ್ತು ರಿಲಯನ್ಸ್ ಡಿಫೆನ್ಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಅನ್ನು ಒಳಗೊಂಡಿದೆ. ಸದ್ಯ ನನ್ನ ಬಳಿ ಯಾವುದೇ ನಿವ್ವಳ ಮೌಲ್ಯ ಇಲ್ಲ ಎಂದು ದಿವಾಳಿತನ ಘೋಷಿಸಿಕೊಂಡಿದ್ದಾರೆ. 

ಅನಿಲ್ ಅಂಬಾನಿ ಅವರ ಪುತ್ರ ಜೈ ಅನ್ಮೋಲ್ ಅಂಬಾನಿ ರಿಲಯನ್ಸ್ ಕ್ಯಾಪಿಟಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ರಿಲಯನ್ಸ್ ಇನ್ಫ್ರಾ ನಿರ್ದೇಶಕರಾಗಿದ್ದಾರೆ. 20,000 ಕೋಟಿ ನಿವ್ವಳ ಮೌಲ್ಯ ಹೊಂದಿದ್ದಾರೆ. ಇನ್ನೋರ್ವ ಮಗ ಜೈ ಅನ್ಶುಲ್ ಅಂಬಾನಿ  ರಿಲಯನ್ಸ್ ಮ್ಯೂಚುವಲ್ ಫಂಡ್ ಮತ್ತು ರಿಲಯನ್ಸ್ ಕ್ಯಾಪಿಟಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ನಿವ್ವಳ ಮೌಲ್ಯ ಕೂಡ ಸರಿ ಸುಮಾರು 20,000 ಕೋಟಿ ಎನ್ನಲಾಗುತ್ತಿದೆ. 

ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ರಿಲಯನ್ಸ್ ಫೌಂಡೇಶನ್ ಮತ್ತು ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ಸಂಸ್ಥಾಪಕರು. ಅವರು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ನಿರ್ದೇಶಕರೂ ಆಗಿದ್ದಾರೆ. ಅವರ ನಿವ್ವಳ ಮೌಲ್ಯ 3 ಬಿಲಿಯನ್ ಡಾಲರ್ ಅಂದರೆ 300 ಕೋಟಿ ಆಗಿದೆ.

ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಹಿರಿಯ ಮಗ ಆಕಾಶ್ ಅಂಬಾನಿ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ಮಂಡಳಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ ಮತ್ತು 2022 ರಿಂದ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಅಧ್ಯಕ್ಷರಾಗಿದ್ದಾರೆ. ಇವರ ನಿವ್ವಳ ಮೌಲ್ಯ 3,33,313 ಕೋಟಿ. ಎಂದು ವರದಿ ತಿಳಿಸಿದೆ.

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರ ಕಿರಿಯ ಮಗ ಅನಂತ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್‌ನ ಇಂಧನ ವ್ಯವಹಾರಗಳು ಮತ್ತು ನವೀಕರಿಸಬಹುದಾದ ಮತ್ತು ಹಸಿರು ಶಕ್ತಿಯ ಜಾಗತಿಕ ಕಾರ್ಯಾಚರಣೆಗಳ ಮುಖ್ಯಸ್ಥರಾಗಿದ್ದಾರೆ. ಅವರು ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ಮತ್ತು ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್‌ನ ಮಂಡಳಿಗಳಲ್ಲಿ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಇವರ ನಿವ್ವಳ ಮೌಲ್ಯ 3,32,482 ಕೋಟಿ. ಎಂದು ವರದಿ ತಿಳಿಸಿದೆ. 

ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಏಕೈಕ ಪುತ್ರಿ ಇಶಾ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ನಿರ್ದೇಶಕರ ಮಂಡಳಿಯಲ್ಲಿದ್ದಾರೆ. ಅವರು ರಿಲಯನ್ಸ್ ಫೌಂಡೇಶನ್, ರಿಲಯನ್ಸ್ ಫೌಂಡೇಶನ್ ಇನ್ಸ್ಟಿಟ್ಯೂಷನ್ ಆಫ್ ಎಜುಕೇಶನ್ ಅಂಡ್ ರಿಸರ್ಚ್ ಮತ್ತು ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್‌ , ರಿಲಾಯನ್ಸ್‌ ರೀಟೆಲ್ ನ ಭಾಗವಾಗಿದ್ದಾರೆ. ನಿವ್ವಳ ಮೌಲ್ಯ 831 ಕೋಟಿ ಎನ್ನಲಾಗಿದೆ.

ಇನ್ನು ಅಂಬಾನಿ ಕುಟುಂಬದ ಹಿರಿಯ ಸೊಸೆ ಶ್ಲೋಕಾ ಮೆಹ್ತಾ ಆಭರಣ ವ್ಯಾಪಾರಿ ರಸೆಲ್ ಮೆಹ್ತಾ ಅವರ ಮಗಳು ಮತ್ತು ಆಕಾಶ್ ಅಂಬಾನಿ ಅವರ ಪತ್ನಿ. ಶ್ಲೋಕಾ ಮೆಹ್ತಾ ಅವರ ನಿವ್ವಳ ಮೌಲ್ಯ 149 ಕೋಟಿ ಎಂದು ಅಂದಾಜಿಸಲಾಗಿದೆ.

ರಾಧಿಕಾ ಮರ್ಚೆಂಟ್ ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಮಗಳು ಮತ್ತು ಶೀಘ್ರದಲ್ಲೇ ಅನಂತ್ ಅಂಬಾನಿಯವರ ಪತ್ನಿಯಾಗಲಿದ್ದಾರೆ.  ರಾಧಿಕಾ ಮರ್ಚೆಂಟ್ ಅವರ ನಿವ್ವಳ ಮೌಲ್ಯವು 10 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. 

click me!