ದೇಶದ ಅತ್ಯಂತ ಪ್ರಭಾವಿ ಕುಟುಂಬಕ್ಕೆ ಸೇರಿದ್ದರೂ ಜಿಮ್ಮಿ ಮಾತ್ರ ಬಹಳ ಸರಳ ಜೀವನ ನಡೆಸುತ್ತಿದ್ದಾರೆ. ಮುಂಬೈನ ಕೊಲಾಬಾದಲ್ಲಿ ಸಾರ್ವಜನಿಕರ ದೃಷ್ಟಿಯಿಂದ ಬಹಳ ದೂರವಿರುವ 2BHK ಅಪಾರ್ಟ್‌ಮೆಂಟ್‌ನಲ್ಲಿ ಜೀವನ ಸಾಗಿಸುತ್ತಿದ್ದಾರೆ. ಕಳೆದ ವರ್ಷ ರತನ್ ಟಾಟಾ ತನ್ನ ಸಾಮಾಜಿಕ ಜಾಲತಾಣದಲ್ಲಿ 1945ರಲ್ಲಿ ತಮ್ಮನ ಜೊತೆಗೆ ತೆಗೆದ ಫೋಟೋವನ್ನು ಹಂಚಿಕೊಂಡು ನಮ್ಮ ಮಧ್ಯೆ ಯಾವ ಅಡ್ಡಿಯೂ ಬಂದಿಲ್ಲ ಎಂದು ಬರೆದುಕೊಂಡಿದ್ದರು.
ಜಿಮ್ಮಿ ಟಾಟಾ ಅವರು ಮೊಬೈಲ್ ಫೋನ್ ಕೂಡ ಹೊಂದಿರತೆ ಜೀವನ ನಡೆಸುತ್ತಿದ್ದಾರೆ ಎಂದು ವರದಿಗಳು ಹೇಳಿವೆ. ಅವರು ಎಲ್ಲ ದೈನಂದಿನ ಅಪ್‌ಡೇಟ್‌ಗಳನ್ನು ಪತ್ರಿಕೆ ಮೂಲಕವೇ ತಿಳಿದುಕೊಳ್ಳುತ್ತಾರಂತೆ. ಆದರೆ ಟಾಟಾದ ವ್ಯವಹಾರಗಳಲ್ಲಿ ಅವರ ಪಾಲಿದೆ. ಅವರು ಇನ್ನೂ ಕೂಡ ಟಾಟಾ ಸನ್ಸ್, ಟಿಸಿಎಸ್, ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್, ಟಾಟಾ ಪವರ್, ಇಂಡಿಯನ್ ಹೋಟೆಲ್ಸ್ ಮತ್ತು ಟಾಟಾ ಕೆಮಿಕಲ್ಸ್‌ನಲ್ಲಿ ಪ್ರಮುಖ ಷೇರುದಾರಾಗಿದ್ದಾರೆ. ಜತೆಗೆ, ಟಾಟಾ ಉದ್ಯಮದ ಪ್ರತಿಯೊಂದು ವ್ಯವಹಾರಗಳ ದೈನಂದಿನ ಬೆಳವಣಿಗೆಗಳ ಅಪ್‌ಡೇಟ್ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ.
1989 ರಲ್ಲಿ ಅವರ ತಂದೆ ನೇವಲ್ ಟಾಟಾ ಅವರ ಮರಣದ ನಂತರ ಮತ್ತು ಅವರ ಇಚ್ಛೆಗೆ ಅನುಗುಣವಾಗಿ, ಈ ಪಾತ್ರವನ್ನು ಆನುವಂಶಿಕವಾಗಿ ಪಡೆದರು. ಜಿಮ್ಮಿ ಅವರು ತೀವ್ರ ತಿಳುವಳಿಕೆಯುಳ್ಳ ಮತ್ತು ತೊಡಗಿಸಿಕೊಂಡಿರುವ ಸದಸ್ಯರಾಗಿದ್ದಾರೆ, ಅವರು ಟಾಟಾ ಗ್ರೂಪ್‌ನೊಳಗಿನ ಕಾರ್ಪೊರೇಟ್ ಬೆಳವಣಿಗೆಗಳ ಕುರಿತು ಹೆಚ್ಚು ಆಸಕ್ತಿ ವಹಿಸುತ್ತಾರೆ.
ರತನ್ ಟಾಟಾ ಅವರ ಸಹೋದರ ಜಿಮ್ಮಿ ಟಾಟಾ ಅವರಿಗೆ ಈಗ 82 ವರ್ಷ ವಯಸ್ಸು. ರತನ್ ಟಾಟಾ ಅವರಂತೆ ಇವರು ಕೂಡ ಅವಿವಾಹಿತರಾಗಿದ್ದು, ಅಪರೂಪಕ್ಕೆ ಅಪಾರ್ಟ್‌ಮೆಂಟ್‌ನಿಂದ ಹೊರಬರುತ್ತಾರೆ. ಜಿಮ್ಮಿ ಹಾಗೂ ರತನ್ ಟಾಟ ಒಡಹುಟ್ಟಿದ ಸಹೋದರರಾಗಿದ್ದು, ನೇವಲ್ ಟಾಟಾ ಅವರ ಮೊದಲ ಪತ್ನಿ ಸೂನಿ ಕಮಿಷರಿಯಟ್ ಮಕ್ಕಳಾಗಿದ್ದಾರೆ.
1989ರಲ್ಲಿ ತಂದೆ ನೇವಲ್ ಟಾಟಾ ನಿಧನಕ್ಕೂ ಮುನ್ನ ಬರೆದಿದ್ದ ಉಯಿಲಿನ ಅನುಸಾರ, ಜಿಮ್ಮಿ ಟಾಟಾ ಅವರು ಸರ್ ರತನ್ ಟಾಟಾ ಟ್ರಸ್ಟ್‌ನ ಟ್ರಸ್ಟಿಯಾಗಿದ್ದಾರೆ. ಜಿಮ್ಮಿ ಹಾಗೂ ರತನ್ ಸಹೋದರರಿಗೆ ನೊಯೆಲ್ ಎಂಬ ಇನ್ನೊಬ್ಬ ಸಹೋದರನೂ ಇದ್ದಾರೆ. ನೊಯೆಲ್ ಟಾಟಾ ಅವರು ರತನ್ ಮತ್ತು ಜಿಮ್ಮಿ ಟಾಟಾ ಅವರ ಮಲ ಸಹೋದರರಾಗಿದ್ದಾರೆ (ತಂದೆ ಒಬ್ಬರೇ, ತಾಯಿ ಬೇರೆ ಬೇರೆ; ನೋಯೆಲ್ ಎರಡನೇ ತಾಯಿ ಮಗ).