ಅನಂತ್‌ ಅಂಬಾನಿ ರಾಧಿಕಾ ಮದ್ವೆಗೆ ಭರ್ಜರಿ ಸಿದ್ಧತೆ; ಅಬ್ಬಬ್ಬಾ ಮುಕೇಶ್ ಅಂಬಾನಿ ಮಾಡಿರೋ ಪ್ಲಾನ್ ಇಷ್ಟೊಂದಾ?

First Published | Feb 13, 2024, 3:59 PM IST

ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರ ಕಿರಿಯ ಹಾಗೂ ಕೊನೆಯ ಮಗ ಅನಂತ್ ಅಂಬಾನಿ ಮದ್ವೆ  ಗೆಳತಿ ರಾಧಿಕಾ ಮರ್ಚೆಂಟ್ ಜೊತೆ ನಡೆಯಲಿದೆ. ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರ ಮೂವರು ಮಕ್ಕಳಲ್ಲಿ ಹಿರಿ ಮಗ ಆಕಾಶ್ ಹಾಗೂ ಪುತ್ರಿ ಇಶಾ ಮದ್ವೆ ಈಗಾಗಲೇ ನಡೆದಿರುವುದರಿಂದ ಈ ಮನೆಯಲ್ಲಿ ನಡೆಯುವ ಕೊನೆ ಮದ್ವೆ ಇದಾಗಿದೆ. ಹೀಗಾಗಿ ಹಿಂದೆಂದಿಗಿಂತಲೂ ಬಹಳ ಅದ್ದೂರಿಯಾಗಿ ಈ ಮದ್ವೆ ನಡೆಸಲು ಕುಟುಂಬ ಪ್ಲಾನ್ ಮಾಡಿದೆ.

ಮಿಲಿಯನೇರ್ ಅಂಬಾನಿ ಕುಟುಂಬ ತಮ್ಮ ಕುಟುಂಬದ ಇನ್ನೊಂದು ಅದ್ದೂರಿ ಮದ್ವೆಗೆ ಸಜ್ಜಾಗುತ್ತಿದೆ. ಮಾರ್ಚ್‌ನಲ್ಲಿ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರ ಕಿರಿಯ ಹಾಗೂ ಕೊನೆಯ ಮಗ ಅನಂತ್ ಅಂಬಾನಿ ಮದ್ವೆ  ಗೆಳತಿ ರಾಧಿಕಾ ಮರ್ಚೆಂಟ್ ಜೊತೆ ನಡೆಯಲಿದೆ. 

Anant Ambani Radhika Merchent wedding

 ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರ ಮೂವರು ಮಕ್ಕಳಲ್ಲಿ ಹಿರಿ ಮಗ ಆಕಾಶ್ ಹಾಗೂ ಪುತ್ರಿ ಇಶಾ ಮದ್ವೆ ಈಗಾಗಲೇ ನಡೆದಿರುವುದರಿಂದ ಈ ಮನೆಯಲ್ಲಿ ನಡೆಯುವ ಕೊನೆ ಮದ್ವೆ ಇದಾಗಿದೆ. 

Tap to resize

Anant Ambani Radhika Merchent wedding

ಹೀಗಾಗಿ ಹಿಂದೆಂದಿಗಿಂತಲೂ ಬಹಳ ಅದ್ದೂರಿಯಾಗಿ ಈ ಮದ್ವೆ ನಡೆಸಲು ಕುಟುಂಬ ಪ್ಲಾನ್ ಮಾಡಿದೆ. ಇದಕ್ಕಾಗಿ ಅಂಬಾನಿ ಕುಟುಂಬದಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ.

Anant Ambani Radhika Merchent wedding

 ಮದುವೆಗೂ ಮೊದಲು ಅಂಬಾನಿ ಕುಟುಂಬ ಹಲವು ವಿವಾಹಪೂರ್ವ ಸಮಾರಂಭಗಳನ್ನು ಆಯೋಜಿಸಿದೆ. ಕಳೆದ ವರ್ಷ ಜನವರಿಯಲ್ಲಿ ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ಜೋಡಿ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 

Anant Ambani Radhika Merchent wedding

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಅಂಬಾನಿ ಫ್ಯಾನ್ ಪೇಜ್‌ಗಳು ನೀಡಿರುವ ಮಾಹಿತಿ ಪ್ರಕಾರ, ರಾಧಿಕಾ ಮರ್ಚೆಂಟ್  ಹಾಗೂ ಅನಂತ್ ಅಂಬಾನಿ ವಿವಾಹ ಪೂರ್ವ ಕಾರ್ಯಕ್ರಮಗಳಿಗಾಗಿ ಗುಜರಾತ್‌ನ ಜಮಾನಗರ್ ಸಜ್ಜಾಗಿದೆ. 

Anant Ambani Radhika Merchent wedding

ಭಾರತದ ಈ ಅದ್ದೂರಿ ವಿವಾಹಕ್ಕೆ 1200ಕ್ಕೂ ಅಧಿಕ ಅತಿಥಿಗಳನ್ನು ಅಂಬಾನಿ ಕುಟುಂಬ ಆಹ್ವಾನಿಸಿದೆ.  ರಿಲಯನ್ಸ್ ಟೌನ್‌ಶಿಪ್‌ನಲ್ಲಿ ಈ ಅತಿಥಿಗಳ ಆತಿಥ್ಯಕ್ಕೆ ಸಿದ್ಧತೆ ನಡೆಯುತ್ತಿದ್ದು, ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಬಾಲಿವುಡ್ ತಾರೆಯರು ಸೇರಿದಂತೆ ಖ್ಯಾತ ಗಾಯಕರು ಪ್ರದರ್ಶನ ನೀಡಲಿದ್ದಾರೆ. 

Anant Ambani Radhika Merchent wedding

ಇನ್ನು ಮದುವೆ ಮನೆಯ ಒಳಾಂಗಣದ ಅದ್ದೂರಿ ಅಲಂಕಾರ ಹಾಗೂ ಊಟದ ಕೆಟರಿಂಗ್ಸ್‌ಗಾಗಿ ದೇಶದ ವಿವಿಧೆಡೆಯ ಖ್ಯಾತ ಪ್ರತಿಭಾವಂತ ಕಲಾಕರರನ್ನು ಕರೆಸಲಾಗಿದೆ ಎಂಬ ಮಾಹಿತಿ ಇದೆ. ಹಾಗೆಯೇ ಸೆಲೆಬ್ರಿಟಿಗಳ ಇಷ್ಟದ ವಸ್ತ್ರ ವಿನ್ಯಾಸಕರರಾಗಿರುವ ಮನೀಶ್ ಮಲ್ಹೋತ್ರಾ ಅವರ ಕ್ರಿಯೇಟಿವ್ ನಿರ್ದೇಶನದಲ್ಲಿ ಈ ಇಡೀ ಮದುವೆ ಮಹೋತ್ಸವ ನಡೆಯಲಿದೆ ಎಂಬ ಮಾಹಿತಿ ಇದೆ. 

Anant Ambani Radhika Merchent wedding

ಅಲ್ಲದೇ ಕೆಲ ಮಾಹಿತಿಯ ಪ್ರಕಾರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ಈ ಮದುವೆ ಕಾರ್ಯಕ್ರಮವೂ ಜುಲೈವರೆಗೂ ನಡೆಯಲಿದೆ ಎಂದು ತಿಳಿದು ಬಂದಿದೆ.  ಎಪ್ರಿಲ್‌ನಿಂದ ಜುಲೈ ವರೆಗೆ ನಡೆಯಲಿದೆ ಎಂದು ತಿಳಿದು ಬಂದಿದೆ. ಈ ಹಿಂದೆ  ಜುಲೈ 10, 11 ಹಾಗೂ 12 ಈ ಮೂರು ದಿನಗಳ ಕಾಲ ಮುಂಬೈನಲ್ಲಿ ಅದ್ದೂರಿ ಸಮಾರಂಭದಲ್ಲಿ  ಈ ಜೋಡಿ ವಿವಾಹವಾಗಲಿದ್ದಾರೆ ಎಂದು ವರದಿಯಾಗಿತ್ತು

Anant Ambani Radhika Merchent wedding

ಇನ್ನು ಈ ಮದುವೆಯಲ್ಲಿ ನೃತ್ಯ ಪ್ರದರ್ಶನ ನೀಡುವುದಕ್ಕಾಗಿ ಬಾಲಿವುಡ್ ನಟ ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಅವರು ಈಗಾಗಲೇ ಅಭ್ಯಾಸವನ್ನು ಮಾಡಿ ಮುಗಿಸಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕಾಗಿ ಅಂಬಾನಿ ಮತ್ತೊರ್ವ ಪುತ್ರ ಆಕಾಶ್ ಜೊತೆ ರಣ್‌ಬೀರ್ ಹಾಗೂ ಆಲಿಯಾ ಜಮಾನಗರದಲ್ಲಿ ಕಾಣಿಸಿಕೊಂಡಿದ್ದರ ವೀಡಿಯೋವನ್ನು ಫ್ಯಾನ್ ಪೇಜ್ ಪೋಸ್ಟ್ ಮಾಡಿತ್ತು. 

Anant Ambani Radhika Merchent wedding

ಹಾಗೆಯೇ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಕೂಡ ಜಮಾನಗರಕ್ಕೆ ಆಗಮಿಸಿ ತಮ್ಮ ಮಗನ ಮದುವೆಯ ಕೈಗೊಂಡ ಯೋಜನೆಗಳನ್ನು ಪರಿಶೀಲಿಸಿದ್ದಾರೆ. ಈ ಮದುವೆಯಲ್ಲಿ ವಧುವರರಾದ ಅನಂತ್ ಹಾಗೂ ರಾಧಿಕಾ ಡಾನ್ಸ್ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಡಾನ್ಸ್‌ ಪ್ರಾಕ್ಟಿಸ್‌ಗೆ ಬಂದಿರುವ ಗಣ್ಯ ಅತಿಥಿಗಳಿಗೂ ಕೂಡ ಅದ್ದೂರಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇಶಾ ಅಂಬಾನಿ ಹಂಚಿಕೊಂಡಿರುವ ಫೋಟೋಗಳನ್ನು ಫ್ಯಾನ್ ಪೇಜ್ ಪೋಸ್ಟ್ ಮಾಡಿದ್ದು, ಬಹುತೇಕ ಎಲ್ಲ ಗುಜರಾತಿ ಚಾಟ್ಸ್‌, ಹಾಗೂ ಸ್ನ್ಯಾಕ್ಸ್‌ಗಳನ್ನು ವಿಶೇಷವಾಗಿ ಅತಿಥಿಗಳಿಗಾಗಿ ತಯಾರಿಸಲಾಗಿದೆ. 

Latest Videos

click me!