ಮಾರುಕಟ್ಟೆ ಮೌಲ್ಯದಲ್ಲಿ ಭಾರತದ ಟಾಪ್‌ 10 ಕಂಪನಿಗಳಿವು!

First Published Feb 10, 2024, 6:34 PM IST

ವಿಶ್ವದ ಬೃಹತ್‌ ಕಂಪನಿಗಳಿಗೆ ಭಾರತದ ಕಂಪನಿಗಳು ಮಾರುಕಟ್ಟೆ ಮೌಲ್ಯದಲ್ಲಿ ಫೈಟ್‌ ನೀಡಲು ಇನ್ನೂ ಕೆಲ ವರ್ಷ ಕಾಯಬೇಕಿದೆ. ಇದರ ನಡುವೆ ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ ಮಾರುಕಟ್ಟೆ ಮೌಲ್ಯದಲ್ಲಿ ಸದ್ಯದ 10 ಭಾರತೀಯ ಕಂಪನಿಗಳನ್ನು ಪಟ್ಟಿ ಮಾಡಿದೆ.

ಮುಖೇಶ್‌ ಅಂಬಾನಿ ಮಾಲೀಕತ್ವದ ರಿಲಯನ್ಸ್‌ ಇಂಡಸ್ಟ್ರೀಸ್‌ ಭಾರತ ಅತ್ಯಂತ ಮೌಲ್ಯಯುತ ಕಂಪನಿ ಎನಿಸಿಕೊಂಡಿದೆ.  ಫೆ.9ರ ವೇಳೆಗೆ ಈ ಕಂಪನಿಯ ಮೌಲ್ಯ 19.77 ಲಕ್ಷ ಕೋಟಿ ರೂಪಾಯಿ. ಷೇರು ಮಾರುಕಟ್ಟೆಯಲ್ಲಿ ಈ ಕಂಪನಿಯ ಷೇರುಗಳು 2922.30 ರೂಪಾಯಿಯಲ್ಲಿ ಮಾರಾಟವಾಗುತ್ತಿದೆ.
 

ಟಾಟಾ ಗ್ರೂಪ್‌ ಮಾಲೀಕತ್ವದಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ ಅಂದರೆ ಟಿಸಿಎಸ್‌ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಐಟಿ ಸರ್ವೀಸ್‌ ವಲಯದಲ್ಲಿರುವ ಟಿಸಿಎಸ್‌ನ ಮಾರುಕಟ್ಟೆ ಮೌಲ್ಯ 15.12 ಲಕ್ಷ ಕೋಟಿ ರೂಪಾಯಿ

ಎಚ್‌ಡಿಎಫ್‌ಸಿ ಬ್ಯಾಂಕ್‌ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. 29 ವರ್ಷದ ಹಿಂದೆ ಆರಂಭವಾಗಿದ್ದ ಈ ಬ್ಯಾಂಕ್‌ ಈಗ ಮಾರುಕಟ್ಡೆ ಮೌಲ್ಯದಲ್ಲಿ ವಿಶ್ವದ ಐದೇನ ಅತಿದೊಡ್ಡ ಬ್ಯಾಂಕ್‌ ಎನಿಸಿದೆ. ದೇಶದ ನಂ.1 ಖಾಸಗಿ ಬ್ಯಾಂಕ್‌ ಆಗಿರುವ ಎಚ್‌ಡಿಎಫ್‌ಸಿಯ ಮಾರುಕಟ್ಟೆ ಮೌಲ್ಯ 10.65 ಲಕ್ಷ ಕೋಟಿ ರೂಪಾಯಿ.
 

icici bank

ಐಸಿಐಸಿಐ ಬ್ಯಾಂಕ್‌ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇಂಡಸ್ಟ್ರಿಯಲ್‌ ಕ್ರೆಡಿಟ್‌ ಆಂಡ್‌ ಇನ್ವೆಸ್ಟ್‌ಮೆಂಟ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ ಬ್ಯಾಂಕ್‌ನ ಮಾರುಕಟ್ಟೆ ಮೌಲ್ಯ 7.09 ಲಕ್ಷ ಕೋಟಿ ರೂಪಾಯಿ ಆಗಿದೆ.
 

ಬೆಂಗಳೂರಿನ ಪ್ರಸಿದ್ಧ ಐಟಿ ಕಂಪನಿ ಇನ್ಫೋಸಿಸ್‌ ಐದನೇ ಸ್ಥಾನದಲ್ಲಿದ್ದು, ಇದರ ಮಾರುಕಟ್ಟೆ ಮೌಲ್ಯ 6.92 ಲಕ್ಷ ಕೋಟಿ ರೂಪಾಯಿ ಆಗಿದೆ. ಷೇರು ಮಾರುಕಟ್ಟೆಯಲ್ಲಿ ಈ ಕಂಪನಿಯ ಷೇರುಗಳು 1669.65 ರೂಪಾಯಿಯಂತೆ ಮಾರಾಟವಾಗುತ್ತಿದೆ.

Lic.jp


ಈ ಪಟ್ಟಿಯಲ್ಲಿ ಸರ್ಕಾರಿ ಸ್ವಾಮ್ಯದ ಕಂಪನಿಯೆಂದರೆ ಭಾರತೀಯ ಜೀವ ವಿಮಾ ನಿಗಮ. ಎಲ್‌ಐಸಿಯ ಮಾರುಕಟ್ಟೆ ಮೌಲ್ಯ 6.83 ಲಕ್ಷ ಕೋಟಿ ರೂಪಾಯಿಗಳು. ಇತ್ತೀಚೆಗಷ್ಟೇ ಎಲ್‌ಐಸಿ ಷೇರುಗಳು ಮಾರುಕಟ್ಟೆಯಲ್ಲಿ 1 ಸಾವಿರದ ಗಡಿ ದಾಟಿದೆ.

sbi .j

ಭಾರತೀಯ ಸ್ಟೇಟ್‌ ಬ್ಯಾಂಕ್‌ ಈ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಹಾಗೂ ಟಾಪ್‌ 10 ಪಟ್ಟಿಯಲ್ಲಿರುವ 2ನೇ ಸರ್ಕಾರಿ ಸ್ವಾಮ್ಯದ ಕಂಪನಿಯಾಗಿದೆ. ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ಎಸ್‌ಬಿಐನ ಮಾರುಕಟ್ಟೆ ಮೌಲ್ಯ 6.46 ಲಕ್ಷ ಕೋಟಿ ರೂಪಾಯಿ.

ಭಾರ್ತಿ ಏರ್‌ಟೆಲ್‌ ಈ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಟಾಪ್‌ 10 ಪಟ್ಟಿಯಲ್ಲಿರುವ ಏಕೈಕ ಟೆಲಿಕಾಂ ಪಟ್ಟಿ ಎನ್ನುವ ಶ್ರೇಯದ ಇದರದಾಗಿದೆ. ಏರ್‌ಟೆಲ್‌ನ ಮಾರುಕಟ್ಟೆ ಮೌಲ್ಯ 6.31 ಲಕ್ಷ ಕೋಟಿ ರೂಪಾಯಿ
 

ಫಾಸ್ಟ್‌ ಮೂವಿಂಗ್‌ ಕನ್ಶುಮರ್‌ ಗೂಡ್ಸ್‌ ದೈತ್ಯ ಕಂಪನಿಯಾಗಿರುವ ಹಿಂದುಸ್ತಾನ್‌ ಯುನಿಲಿವರ್‌ ಈ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಹಿಂದುಸ್ತಾನ್‌ ಯುನಿಲಿವರ್‌ನ ಮಾರುಕಟ್ಟೆ ಮೌಲ್ಯ 5.69 ಲಕ್ಷ ಕೋಟಿ ರೂಪಾಯಿ
 

ದೇಶದ ಸಿಗರೇಟ್‌ ಉತ್ಪನ್ನಗಳಲ್ಲಿ ಏಕಸ್ವಾಮ್ಯ ಹೊಂದಿರುವ ಎಫ್‌ಎಂಸಿಜಿ ಮೇಜರ್‌ ಐಟಿಸಿಯೊಂದಿಗೆ ಈ ಪಟ್ಟಿ ಅಂತ್ಯವಾಗುತ್ತದೆ. ಐಟಿಸಿಯ ಮಾರುಕಟ್ಟೆ ಮೌಲ್ಯ 5.18 ಲಕ್ಷ ಕೋಟಿ ರೂಪಾಯಿ.

click me!