ಭಾರತದ ಈ ದುಬಾರಿ ಹೋಟೆಲ್‌ ರೇಟ್‌ ಕೇಳಿದರೆ ತಲೆ ತಿರುಗುತ್ತೆ!

First Published Sep 4, 2020, 7:04 PM IST

ಐಷಾರಾಮಿ ಮತ್ತು ದುಬಾರಿ ಹೋಟೆಲ್‌ಗಳು ಕೇವಲ ವಿದೇಶದಲ್ಲಿವೆ ಎಂದು ನೀವು ಭಾವಿಸಿದರೆ, ತಪ್ಪು. ಭಾರತದಲ್ಲಿಯೂ ಕೆಲವು ಹೋಟೆಲ್‌ಗಳಿವೆ, ಅಲ್ಲಿ ಒಂದು ರಾತ್ರಿ ಬಾಡಿಗೆ ಎಷ್ಷು ದುಬಾರಿಯೆಂದರೆ, ಆ ಹಣದಲ್ಲಿ ಸಾಮಾನ್ಯ ಮನುಷ್ಯ ಒಂದು ಕಾರು ಖರೀದಿಸಬಹುದು. ಈ ಹೋಟೆಲ್‌ಗಳ ಭವ್ಯತೆ ಲಕ್ಷುರಿ ನೋಡಿದರೆ ಆಶ್ಚರ್ಯವಾಗುತ್ತದೆ. ಭಾರತದ ಕೆಲವು ದುಬಾರಿ ಹೋಟೆಲ್‌ಗಳು ಮತ್ತು ಅದರ ದರಗಳ ಮಾಹಿತಿ ಇಲ್ಲಿದೆ. (ಈ ದರಗಳು ಪ್ರತಿ ಹೋಟೆಲ್‌ನ ವೆಬ್‌ಸೈಟ್ ಆಧಾರಿತ).

ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುವ ರಾಜಸ್ಥಾನದಲ್ಲಿ ಪ್ರವಾಸೋದ್ಯಮವು ಆರ್ಥಿಕತೆಗೆ ಹೆಚ್ಚಿನ ಕೊಡುಗೆ ನೀಡುತ್ತದೆ. ಅದರಂತೆ ಅನೇಕ ಐಷಾರಾಮಿ ಹೋಟೆಲ್‌ಗಳಿವೆ. ಈ ಪಟ್ಟಿಯಲ್ಲಿ ಮೊದಲನೆಯದು ರಾಜಸ್ಥಾನದ ಉದಯಪುರದ ಲೇಕ್ ಪ್ಯಾಲೇಸ್. ಅದರ ಗ್ರ್ಯಾಂಡ್ ಪ್ರೆಸಿಡೆನ್ಶಿಯಲ್ ಸೂಟ್‌ನಲ್ಲಿ ಉಳಿಯಲು, ಒಂದು ರಾತ್ರಿಗೆ 6 ​​ಲಕ್ಷ ರೂಪಾಯಿಗಳು.
undefined
ದುಬಾರಿ ಹೋಟೆಲ್‌ಗಳ ಪಟ್ಟಿಯಲ್ಲಿ ಜೈಪುರಕ್ಕೆ ಎರಡನೇ ಸ್ಥಾನ ಸಿಕ್ಕಿದೆ. ರಂಬಾಗ್ ಪ್ಯಾಲೇಸ್‌ ಗ್ರ್ಯಾಂಡ್ ಪ್ರೆಸಿಡೆನ್ಶಿಯಲ್ ಸೂಟ್‌ನ ಬಾಡಿಗೆ 6 ಲಕ್ಷ ರೂಪಾಯಿಗಳು.
undefined
ಮುಂಬೈನ ದಿ ಒಬೆರಾಯ್ ಮೂರನೇ ಸ್ಥಾನದಲ್ಲಿದೆ. ಪ್ರೆಸಿಡೆನ್ಶಿಯಲ್ ಸೂಟ್‌ನಲ್ಲಿ ಉಳಿಯಲು ಪ್ರವಾಸಿಗರು 3 ಲಕ್ಷ ಬಾಡಿಗೆ ಪಾವತಿಸಬೇಕಾಗುತ್ತದೆ.
undefined
ದಿ ಒಬೆರಾಯ್‌ನ ಗುರುಗ್ರಾಮ್ ಹೋಟೆಲ್‌ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಇಲ್ಲಿಯೂ ಪ್ರೆಸಿಡೆನ್ಶಿಯಲ್ ಸೂಟ್‌ನ ಬೆಲೆ ಮೂರು ಲಕ್ಷ.
undefined
ಐದನೇ ಹೋಟೆಲ್ ಉದಯಪುರದ ರಾಜ ಮಹಾರಾಜರ ಅರಮನೆಯಂತಿರುವ ದಿ ಒಬೆರಾಯ್ ಉದಯ್ ವಿಲಾಸ್‌. ಕೊಹಿನೂರ್ ಸೂಟ್‌ಗೆ ಒಂದು ರಾತ್ರಿ ಎರಡೂವರೆ ಲಕ್ಷ ರೂಪಾಯಿಗಳು.
undefined
ದಿ ಒಬೆರಾಯ್ ಅಮರ್ ವಿಲಾಸ್‌ನ ಆಗ್ರಾ ಚೈನ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಇಲ್ಲಿನ ಅತ್ಯಂತ ದುಬಾರಿ ಸೂಟ್‌ನಲ್ಲಿ ಉಳಿಯಲು ಜನರಿಗೆ ರಾತ್ರಿಗೆ 2.5 ಲಕ್ಷ ರೂಪಾಯಿ ಖರ್ಚುಮಾಡಬೇಕಾಗುತ್ತದೆ.
undefined
ಏಳನೇ ಸ್ಥಾನದಲ್ಲಿರುವುದು ದೆಹಲಿಯ ಲೀಲಾ ಪ್ಯಾಲೇಸ್ . ಇಲ್ಲಿನ ಮಹಾರಾಜ ಸೂಟ್‌ನಲ್ಲಿ ಉಳಿಯಲು ಒಂದು ರಾತ್ರಿಯ ಬಾಡಿಗೆ 1.5 ಲಕ್ಷ ರೂ.
undefined
click me!