#Invest 50 ಸಾವಿರ, ಲಕ್ಷ ಗಳಿಸಬಹುದಾದ ಈಸಿ ಬ್ಯುಸಿನೆಸ್ ಇದು..

First Published Sep 3, 2020, 6:59 PM IST

ಕೊರೋನಾ ವೈರಸ್ ಕಾರಣದಿಂದ ಉದ್ಯೋಗಗಳನ್ನು ಕಳೆದು ಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ವ್ಯಾಪಾರ ವಹಿವಾಟುಗಳು ತಮ್ಮ ಖದರ್ ಕಳೆದು ಕೊಂಡಿವೆ. ಇದು ಆರ್ಥಿಕ  ಹಿಂಜರಿತಕ್ಕೆ ಕಾರಣವಾಗಿದೆ. ಇದರ ಹೊರತಾಗಿಯೂ, ಎಂದಿಗೂ ಕಡಿಮೆಯಾಗದ  ಬೇಡಿಕೆಯ ಕೆಲವು ಬ್ಯುಸಿನೆಸ್‌ಗಳಿವೆ. ಕಡಿಮೆ ಬಂಡವಾಳವನ್ನು ಹಾಕುವ ಮೂಲಕ ಉತ್ತಮ ಲಾಭ ಗಳಿಸುವುಂತಹ ಅವಕಾಶಗಳಿವೆ. ಅದರಲ್ಲಿ ಅಣಬೆ ಕೃಷಿಯೂ ಒಂದು. ಮಾರುಕಟ್ಟೆಯಲ್ಲಿ ಅಣಬೆಗೆ ಉತ್ತಮ ಬೇಡಿಕೆ ಇದೆ ಹಾಗೂ ಇದರಲ್ಲಿ ಲಾಭ ಸಹ ಇದೆ. ಮಾಡೋದು ಹೇಗೆ?

ಇತ್ತೀಚಿನ ದಿನಗಳಲ್ಲಿ ಅಣಬೆಯ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ. ಇದಕ್ಕೆ ಕಾರಣವೆಂದರೆ ಕ್ರಮೇಣ ಜನರು ಅಣಬೆಗಳ ಪ್ರಯೋಜನಗಳನ್ನು ಕಂಡುಕೊಳ್ಳುತ್ತಿದ್ದಾರೆ. ಕೊರೋನಾ ವೈರಸ್‌ನಿಂದಾಗಿ ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದೂಹೆಚ್ಚಾಗಿದೆ.
undefined
ಅಣಬೆಗಳಲ್ಲಿ ಅನೇಕ ರೀತಿಯ ಪೋಷಕಾಂಶಗಳ ಜೊತೆ ಅನೇಕ ಪ್ರಮುಖ ಖನಿಜಗಳು ಮತ್ತು ಜೀವಸತ್ವಗಳಿವೆ. ಇದರಲ್ಲಿ ವಿಟಮಿನ್ ಬಿ, ಡಿ, ಪೊಟ್ಯಾಷಿಯಮ್, ತಾಮ್ರ, ಕಬ್ಬಿಣ ಮತ್ತು ಸೆಲೆನಿಯಮ್ ಸಾಕಷ್ಟು ಪ್ರಮಾಣದಲ್ಲಿರುತ್ತದೆ. ಆದ್ದರಿಂದ ಈಗ ಅಣಬೆಬೇಡಿಕೆ ಹೆಚ್ಚುತ್ತಿದೆ.
undefined
ಅಣಬೆಗಳಲ್ಲಿ ಹಲವು ವಿಧಗಳಿವೆ. ಗುಣಮಟ್ಟದ ಅಣಬೆಗಳ ರಿಟೇಲ್‌ ಮಾರುಕಟ್ಟೆ ಬೆಲೆ ಪ್ರತಿ ಕೆಜಿಗೆ 300 ರಿಂದ 350 ರೂ. ಅದೇ ಸಮಯದಲ್ಲಿ, ಸಗಟು ದರದಲ್ಲಿ ಇದರ ಪ್ರಮಾಣ 40 ಪ್ರತಿಶತ ಕಡಿಮೆ. ಆದ್ದರಿಂದ ಮಶ್ರೂಮ್ ವ್ಯವಹಾರದಲ್ಲಿ ಲಾಭ ಇದೆ.
undefined
ಲಾಭದ ದೃಷ್ಟಿಯಿಂದ, ಹೆಚ್ಚಿನ ಸಂಖ್ಯೆಯ ರೈತರು ಈಗ ಅಣಬೆ ಕೃಷಿಯನ್ನು ಪ್ರಾರಂಭಿಸಿದ್ದಾರೆ.
undefined
ನೀವು ಅದನ್ನು ಬೆಳೆಸಲು ಬಯಸದಿದ್ದರೆ, ನೀವು ರೈತರಿಂದ ಅಣಬೆಗಳನ್ನು ಅಗ್ಗವಾಗಿ ಖರೀದಿಸಿ ಉತ್ತಮ ಲಾಭವನ್ನು ಗಳಿಸಬಹುದು.
undefined
ಅಣಬೆ ಕೃಷಿಗೆ ಹೆಚ್ಚಿನ ಬಂಡವಾಳದ ಅಗತ್ಯವಿಲ್ಲ.
undefined
ಅದರ ಕೃಷಿಯ ವಿಧಾನವನ್ನು ಮಾತ್ರ ತಿಳಿದುಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ ತರಬೇತಿ ತೆಗೆದುಕೊಳ್ಳಬಹುದು.
undefined
ನೀವು ಬಟನ್ ಮಶ್ರೂಮ್ ಅನ್ನು ಬೆಳೆಸಿದರೆ, ಕೇವಲ 50 ಸಾವಿರ ರೂಪಾಯಿಗಳ ಬಂಡವಾಳಹೂಡುವಮೂಲಕ 2.50 ಲಕ್ಷ ರೂವರೆಗೂ ಗಳಿಸಬಹುದು. ಇದಕ್ಕಾಗಿ ಮಶ್ರೂಮ್ ಕಾಂಪೋಸ್ಟ್ ತಯಾರಿಸಬೇಕು.
undefined
ಬಟನ್ ಮಶ್ರೂಮ್‌ ಕ್ವಿಂಟಲ್ ಕಾಂಪೋಸ್ಟ್ ತಯಾರಿಸಲು ಒಂದೂವರೆ ಕಿಲೋಗ್ರಾಂ ಬೀಜ ಬೇಕಾಗುತ್ತದೆ. 4 ರಿಂದ 5 ಕ್ವಿಂಟಾಲ್ ಕಾಂಪೋಸ್ಟ್ ತಯಾರಿಸಿದರೆ, ಸುಮಾರು 2 ಸಾವಿರ ಕಿಲೋಗ್ರಾಂಗಳಷ್ಟು ಅಣಬೆ ಬೆಳೆಯಬಹುದು. 2 ಸಾವಿರ ಕೆಜಿ ಮಶ್ರೂಮ್ ಅನ್ನು ಕೆಜಿಗೆ 150 ರೂ.ಗೆ ಮಾರಿದರೆ, ಸುಮಾರು 3 ಲಕ್ಷ ರೂಪಾಯಿಗಳು ಸಿಗುತ್ತವೆ. ಅದರಿಂದ 50 ಸಾವಿರ ರೂಪಾಯಿತೆಗೆದುಹಾಕಿದರೆ, ನಂತರ 2.50 ಲಕ್ಷ ರೂಪಾಯಿಗಳ ಲಾಭವಿದೆ. ಅಂದರೆಮಶ್ರೂಮ್‌ ಬೆಳೆಯುವ ವೆಚ್ಚ 50 ಸಾವಿರ ರೂಪಾಯಿ ಆಗುತ್ತದೆ.
undefined
ಎಲ್ಲಾ ಕೃಷಿ ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಕೃಷಿ ಸಂಶೋಧನಾ ಕೇಂದ್ರಗಳಲ್ಲಿ ಅಣಬೆ ಕೃಷಿ ತರಬೇತಿ ನೀಡಲಾಗುತ್ತದೆ. ನೀವು ಅಣಬೆ ಉತ್ಪಾದಿಸಲು ಬಯಸಿದರೆ, ತರಬೇತಿ ತೆಗೆದುಕೊಳ್ಳುವುದು ಉತ್ತಮ.
undefined
ಇದಕ್ಕೆ ಬೇಸಾಯಕ್ಕೆ ಹೆಚ್ಚಿನ ಸ್ಥಳ ಬೇಕಾಗಿಲ್ಲ. 1 ಚದರ ಮೀಟರ್‌ಗೆ 10 ಕೆಜಿ ಅಣಬೆಯನ್ನು ಸುಲಭವಾಗಿ ಉತ್ಪಾದಿಸಬಹುದು.40x30 ಅಡಿ ಜಾಗದಲ್ಲಿ 3 ಅಡಿ ಅಗಲದ racks ಮಾಡುವ ಮೂಲಕ ಅಣಬೆಗಳನ್ನು ಉತ್ಪಾದಿಸಬಹುದು.
undefined
ಅಣಬೆ ಉತ್ಪಾದನೆಗೆ ಮೊದಲು ಕಾಂಪೋಸ್ಟ್ ತಯಾರಿಸಬೇಕು. ಇದಕ್ಕಾಗಿ ಭತ್ತದ ಒಣಹುಲ್ಲು ನೆನೆಸಿ ಮತ್ತು ಒಂದು ದಿನದ ನಂತರ ಅದನ್ನು ಡಿಎಪಿ, ಯೂರಿಯಾ, ಪೊಟ್ಯಾಶ್, ಗೋಧಿ ಹೊಟ್ಟು, ಜಿಪ್ಸಮ್ ಮತ್ತು ಕಾರ್ಬೋಫುಡೋರನ್ ನೊಂದಿಗೆ ಬೆರೆಸಿ ಕೊಳೆಯಲು ಬಿಡಿ.
undefined
ಸುಮಾರು ಒಂದೂವರೆ ತಿಂಗಳ ನಂತರ ಕಾಂಪೋಸ್ಟ್ ಸಿದ್ಧವಾಗುತ್ತದೆ. ಇದರ ನಂತರ, ಸಮ ಪ್ರಮಾಣದ ಸಗಣಿ ಮತ್ತು ಮಣ್ಣನ್ನು ಬೆರೆಸಿ ಒಂದೂವರೆ ಇಂಚು ದಪ್ಪದ ಪದರಮಾಡಬೇಕು. 2-3 ಇಂಚು ದಪ್ಪ ಕಾಂಪೋಸ್ಟ್‌ ಅದರ ಮೇಲೆ ಹಾಕಿ. ತೇವಾಂಶಉಳಿಸಿಕೊಳ್ಳಲು, ಇದನ್ನು ದಿನಕ್ಕೆ 2-3 ಬಾರಿ ನೀರು ಸಿಂಪಡಿಸಬೇಕು. ಈಗ ಇದು ಅಣಬೆ ಬೆಳೆಯಲು ಸಹಕರಿಸುತ್ತದೆ.
undefined
ಅಣಬೆ ಕೃಷಿಗೆ ಫಂಗಿ ಕಲ್ಚರ್‌ ಎನ್ನುತ್ತಾರೆ.
undefined
click me!