ಕಡಿಮೆ ರಿಸ್ಕ್‌ನಲ್ಲಿ ಹೆಚ್ಚು ಲಾಭ; ಲಕ್ಷ ಲಕ್ಷ ಸಂಪಾದಿಸುವ ಆಸೆಯಿದ್ರೆ ಆರಂಭಿಸಿ ಅತ್ಯುತ್ತಮ ಬ್ಯುಸಿನೆಸ್

Published : Feb 07, 2026, 03:20 PM IST

ಲಕ್ಷ ಲಕ್ಷ ಸಂಪಾದಿಸಬೇಕು ಅನ್ನೋ ಆಸೆ ಅನೇಕರಿಗೆ ಇರುತ್ತೆ. ಇದಕ್ಕಾಗಿ ಹಲವು ದಾರಿಗಳನ್ನು ಹುಡುಕುತ್ತಾರೆ. ಕಡಿಮೆ ರಿಸ್ಕ್‌ನಲ್ಲಿ ಹೆಚ್ಚು ಲಾಭ ತಂದುಕೊಡುವ ಒಂದು ಅತ್ಯುತ್ತಮ ಬ್ಯುಸಿನೆಸ್ ಐಡಿಯಾ ಅಂದ್ರೆ ಲೇಯರ್ ಕೋಳಿ ಫಾರಂ. ಈ ವ್ಯವಹಾರದ ಸಂಪೂರ್ಣ ವಿವರ ಇಲ್ಲಿದೆ.

PREV
15
ಲೇಯರ್ ಕೋಳಿ ಫಾರಂ ಎಂದರೇನು?
ಲೇಯರ್ ಕೋಳಿ ಫಾರಂ ಅಂದರೆ, ಮೊಟ್ಟೆ ಇಡುವ ಕೋಳಿಗಳನ್ನು ಸಾಕಾಣಿಕೆ ಮಾಡಿ, ವಾಣಿಜ್ಯಿಕವಾಗಿ ಮೊಟ್ಟೆ ಉತ್ಪಾದಿಸುವುದು. ಲೇಯರ್ ಕೋಳಿಗಳನ್ನು ಒಂದು ದಿನದ ಮರಿ ಇದ್ದಾಗಿನಿಂದಲೇ ಸಾಕಬೇಕು. ಇವು ಸುಮಾರು 18-19 ವಾರಗಳಲ್ಲಿ ಮೊಟ್ಟೆ ಇಡಲು ಶುರು ಮಾಡುತ್ತವೆ. 72-78 ವಾರಗಳವರೆಗೆ ನಿರಂತರವಾಗಿ ಮೊಟ್ಟೆ ಕೊಡುತ್ತವೆ. ಒಂದು ಆರೋಗ್ಯವಂತ ಲೇಯರ್ ಕೋಳಿ ವಾರಕ್ಕೆ ಕನಿಷ್ಠ 4-6 ಮೊಟ್ಟೆಗಳನ್ನು ಇಡುತ್ತದೆ. ವರ್ಷಕ್ಕೆ 300-325 ಮೊಟ್ಟೆಗಳನ್ನು ನೀಡುತ್ತದೆ.
25
ಲೇಯರ್ ಕೋಳಿಗಳಲ್ಲಿ ಪ್ರಮುಖವಾಗಿ ಎರಡು ವಿಧಗಳಿವೆ.

ವೈಟ್ ಎಗ್ ಲೇಯರ್ಸ್: ಇವು ಗಾತ್ರದಲ್ಲಿ ಚಿಕ್ಕದಾಗಿದ್ದು, ಕಡಿಮೆ ಆಹಾರ ತಿನ್ನುತ್ತವೆ. ಇವುಗಳ ಮೊಟ್ಟೆಗಳು ಬಿಳಿ ಬಣ್ಣದಲ್ಲಿರುತ್ತವೆ. 

ಬ್ರೌನ್ ಎಗ್ ಲೇಯರ್ಸ್: ಈ ಕೋಳಿಗಳ ಮೊಟ್ಟೆಗಳು ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಇವು ಹೆಚ್ಚು ಆಹಾರ ತಿನ್ನುತ್ತವೆ. ಮೊಟ್ಟೆಗಳು ದೊಡ್ಡ ಗಾತ್ರದಲ್ಲಿ, ಕಂದು ಬಣ್ಣದಲ್ಲಿರುತ್ತವೆ. ಇವುಗಳಿಗೆ ವಾಣಿಜ್ಯಿಕವಾಗಿ ಹೆಚ್ಚು ಬೇಡಿಕೆ ಇದೆ.

35
ಎಲ್ಲಿ ಆರಂಭಿಸಬೇಕು?
ಈ ಕೋಳಿ ಫಾರಂ ಅನ್ನು ವಸತಿ ಪ್ರದೇಶಗಳಿಂದ ದೂರದಲ್ಲಿ, ಪಟ್ಟಣಗಳಿಂದ ಹೊರಗೆ ಸ್ಥಾಪಿಸಬೇಕು. ನೀರು ಮತ್ತು ಸಾರಿಗೆ ಸೌಲಭ್ಯ ಚೆನ್ನಾಗಿರಬೇಕು. ಸರ್ಕಾರದ ಅನುಮತಿ ಸಿಗುವಂತಹ ಜಾಗವನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು. ಲೇಯರ್ ಕೋಳಿಗಳಿಗೆ ಬ್ಯಾಟರಿ ಕೇಜ್ ಸಿಸ್ಟಮ್ ಅತ್ಯುತ್ತಮ ಎನ್ನಬಹುದು.
45
ಬಂಡವಾಳ ಎಷ್ಟು?

ಉದಾಹರಣೆಗೆ, ನೀವು ಆರಂಭದಲ್ಲಿ 1000 ಕೋಳಿ ಮರಿಗಳನ್ನು ಖರೀದಿಸುತ್ತೀರಿ ಅಂದುಕೊಳ್ಳೋಣ. ಸಾಮಾನ್ಯವಾಗಿ, ಇದಕ್ಕಾಗಿ ಡೇ ಓಲ್ಡ್ ಚಿಕ್ಸ್ (Day Old Chicks) ಖರೀದಿಸಲಾಗುತ್ತದೆ. ಒಂದು ಲೇಯರ್ ಕೋಳಿ ಮರಿಯ ಬೆಲೆ ಸುಮಾರು 40 ರಿಂದ 55 ರೂಪಾಯಿ ಇರುತ್ತದೆ. ಉತ್ತಮ ಬ್ರಾಂಡ್ ಹ್ಯಾಚರಿಯ (Isa Brown, BV-380 ನಂತಹ ತಳಿಗಳು) ಮರಿಗಳಿಗೆ 50-60 ರೂಪಾಯಿ ಇರಬಹುದು. 

ಅಂದರೆ, 1000 ಕೋಳಿಗಳಿಗೆ ಸುಮಾರು 50,000 ರೂಪಾಯಿ ಹೂಡಿಕೆ ಬೇಕು. ಇತರೆ ಖರ್ಚುಗಳಿಗಾಗಿ 1 ಲಕ್ಷದಿಂದ 2 ಲಕ್ಷ ರೂಪಾಯಿವರೆಗೆ ಬಂಡವಾಳ ಬೇಕಾಗುತ್ತದೆ.

55
ಎಷ್ಟು ಲಾಭ?

20 ವಾರಗಳಲ್ಲಿ ಶೇ. 5ರಷ್ಟು ಕೋಳಿಗಳು ಮೊಟ್ಟೆ ಇಡಲು ಆರಂಭಿಸುತ್ತವೆ. 26-30 ವಾರಗಳ ನಡುವೆ ಉತ್ಪಾದನೆ ಗರಿಷ್ಠ ಮಟ್ಟಕ್ಕೆ ತಲುಪುತ್ತದೆ. ಲಾಭದ ವಿಷಯಕ್ಕೆ ಬಂದರೆ, ಮೊಟ್ಟೆಯ ಗಾತ್ರದ ಆಧಾರದ ಮೇಲೆ ಬೆಲೆ ಬದಲಾಗುತ್ತದೆ. ದಿನಕ್ಕೆ ಸರಾಸರಿ 800-900 ಮೊಟ್ಟೆಗಳು ಸಿಕ್ಕರೂ, ಒಂದು ಮೊಟ್ಟೆಗೆ 5-7 ರೂಪಾಯಿ ಸಿಗುತ್ತದೆ ಎಂದುಕೊಂಡರೆ, ಈ ಲೆಕ್ಕಾಚಾರದಲ್ಲಿ ತಿಂಗಳಿಗೆ ಲಕ್ಷಾಂತರ ರೂಪಾಯಿ ವಹಿವಾಟು ನಡೆಸುವ ಅವಕಾಶವಿದೆ.

 **ಗಮನಿಸಿ:** ಇಲ್ಲಿ ನೀಡಿರುವ ಮಾಹಿತಿಯನ್ನು ಕೇವಲ ಪ್ರಾಥಮಿಕ ಮಾಹಿತಿ ಎಂದು ಪರಿಗಣಿಸಬೇಕು. ಈ ವ್ಯವಹಾರವನ್ನು ಪ್ರಾರಂಭಿಸುವ ಮೊದಲು, ಈ ಕ್ಷೇತ್ರದಲ್ಲಿ ಅನುಭವ ಇರುವವರನ್ನು ನೇರವಾಗಿ ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories