ಕಳೆದೆರಡು ದಿನ ಕುಸಿದಿದ್ದ ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆ! ಗ್ರಾಹಕರಿಗೆ ಬಿಗ್ ಶಾಕ್; ಇಂದಿನ ಬೆಲೆ ಎಷ್ಟು ಗೊತ್ತಾ?

Published : Feb 07, 2026, 10:48 AM IST

ಬೆಂಗಳೂರು: ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ದಿನದಿಂದ ದಿನಕ್ಕೆ ಏರಿಳಿತಗಳು ನಡೆಯುತ್ತಲೇ ಬಂದಿವೆ. ಫೆಬ್ರವರಿ ಆರಂಭದಿಂದಲೇ ಇಳಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇದೀಗ ಮತ್ತೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟು? ಬೆಳ್ಳಿ ಬೆಲೆ ಎಷ್ಟು ನೋಡೋಣ ಬನ್ನಿ 

PREV
16
ಕಳೆದೆರಡು ದಿನ ಇಳಿಕೆಯಾಗಿದ್ದ ಚಿನ್ನದ ಬೆಲೆ

ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಕಳೆದೆರಡು ದಿನವೂ ನಿರಂತರ ಇಳಿಮುಖವಾಗಿತ್ತು. ಫೆಬ್ರವರಿ 05ರಂದು 24 ಕ್ಯಾರಟ್ ಪ್ರತಿ ಗ್ರಾಮ್ ಚಿನ್ನದ ಬೆಲೆಯಲ್ಲಿ 502 ರುಪಾಯಿ ಇಳಿಕೆ ಕಂಡರೆ, ಫೆಬ್ರವರಿ 06ರಂದು ಅಂದರೆ ನಿನ್ನೆ ಪ್ರತಿ ಗ್ರಾಮ್‌ ಮೇಲೆ 71 ರುಪಾಯಿ ಇಳಿಕೆಯಾಗಿತ್ತು.

26
22 ಕ್ಯಾರಟ್ ಚಿನ್ನದ ಬೆಲೆಯಲ್ಲೂ ಎರಡೂ ದಿನವೂ ಇಳಿಕೆಯಾಗಿತ್ತು

ಇನ್ನು ಆಭರಣ ಚಿನ್ನ ಎಂದು ಕರೆಸಿಕೊಳ್ಳುವ 22 ಕ್ಯಾರಟ್ ಪ್ರತಿಗ್ರಾಮ್‌ ಚಿನ್ನದ ಬೆಲೆಯಲ್ಲಿ ಗುರುವಾರ 460 ರುಪಾಯಿ ಇಳಿಕೆ ಕಂಡಿತ್ತು. ಇನ್ನು ಶುಕ್ರವಾರವಾದ ನಿನ್ನ 65 ರುಪಾಯಿ ಇಳಿಕೆ ಕಂಡಿತ್ತು. ಶುಕ್ರವಾರದ ಅಂತ್ಯದ ವೇಳೆಗೆ 22 ಕ್ಯಾರಟರ್ ಚಿನ್ನ ಪ್ರತಿ ಗ್ರಾಮ್‌ಗೆ 14,090 ರುಪಾಯಿಗೆ ವಹಿವಾಟು ಅಂತ್ಯಗೊಳಿಸಿತ್ತು.

36
24 ಕ್ಯಾರಟ್ ಚಿನ್ನ ಬೆಲೆಯಲ್ಲಿ 10 ಗ್ರಾಮ್‌ಗೆ 2890 ರುಪಾಯಿ ಏರಿಕೆ!

ಇದೀಗ ಎರಡು ದಿನಗಳ ಇಳಿಕೆಯ ಬಳಿಕ ಮತ್ತೆ ಚಿನ್ನದ ಬೆಲೆಯಲ್ಲಿ ಏರುಗತಿ ಕಂಡು ಬಂದಿದೆ. ಫೆಬ್ರವರಿ 07ರ ಬೆಳಗ್ಗೆ 10.30ರ ವೇಳೆಗೆ ಬೆಂಗಳೂರಿನಲ್ಲಿ 24 ಕ್ಯಾರಟ್ ಪ್ರತಿಗ್ರಾಮ್ ಚಿನ್ನದ ಬೆಲೆಯಲ್ಲಿ 289 ರುಪಾಯಿ ಏರಿಕೆ ಕಂಡಿದ್ದು, 15,660 ರುಪಾಯಿ ತಲುಪಿದೆ. ಅಂದರೆ ಇವತ್ತು ಪ್ರತಿ 10 ಗ್ರಾಮ್‌ಗೆ ಬರೋಬ್ಬರಿ 2890 ರುಪಾಯಿ ಏರಿಕೆ ಕಂಡಿದೆ

46
ಆಭರಣ ಚಿನ್ನದ 10 ಗ್ರಾಮ್‌ಗೆ 2650 ರುಪಾಯಿ ಏರಿಕೆ ಕಂಡಿದೆ.

ಇನ್ನು 22 ಕ್ಯಾರಟ್ ಚಿನ್ನದ ಬೆಲೆಯಲ್ಲೂ ಏರಿಕೆಯಾಗಿದೆ. ಫೆಬ್ರವರಿ 07ರ ಬೆಳಗ್ಗೆ 10.30ರ ವೇಳೆಗೆ ಬೆಂಗಳೂರಿನಲ್ಲಿ 22 ಕ್ಯಾರಟ್ ಪ್ರತಿಗ್ರಾಮ್ ಚಿನ್ನದ ಬೆಲೆಯಲ್ಲಿ 265 ರುಪಾಯಿ ಏರಿಕೆಯಾಗಿದ್ದು, 14,355 ರುಪಾಯಿ ತಲುಪಿದೆ. ಅಂದರೆ ಪ್ರತಿ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 2650 ರುಪಾಯಿ ಏರಿಕೆಯಾಗಿದೆ.

56
ಬೆಳ್ಳಿ ಬೆಲೆಯಲ್ಲೂ ಕೊಂಚ ಏರಿಕೆ

ಚಿನ್ನದ ಬೆಲೆಯಲ್ಲಿ ಮಾತ್ರವಲ್ಲದೇ ಬೆಳ್ಳಿಯ ಬೆಲೆಯಲ್ಲೂ ಇದೀಗ ಕೊಂಚ ಏರಿಕೆ ಕಂಡಿದೆ. ಕಳೆದರೆಡು ದಿನಗಳಲ್ಲಿ ಕೆಜಿಗೆ ಬರೋಬ್ಬರಿ 45 ಸಾವಿರ ರುಪಾಯಿ ಕುಸಿತ ಕಂಡಿತ್ತು. ಶುಕ್ರವಾರದ ಅಂತ್ಯದ ವೇಳೆಗೆ ಪ್ರತಿ ಕೆಜಿ ಬೆಳ್ಳಿ ಬೆಲೆ 2,75,000 ರುಪಾಯಿಗಳಾಗಿದ್ದವು.

66
ಇಂದು ಬೆಳ್ಳಿ ಬೆಲೆಯಲ್ಲಿ ಕೆಜಿಗೆ 10,000 ರುಪಾಯಿ ಏರಿಕೆ!

ಇದೀಗ ಇಂದು ಬೆಳ್ಳಿ ಬೆಲೆಯಲ್ಲಿ ಕೆಜಿಗೆ ಬರೋಬ್ಬರಿ 10,000 ರುಪಾಯಿ ಏರಿಕೆ ಕಂಡಿದೆ. ಫೆಬ್ರವರಿ 07ರ ಬೆಳಗ್ಗೆ 10.30ರ ವೇಳೆಗೆ ಪ್ರತಿ ಕೆಜಿ ಬೆಳ್ಳಿಯ ಬೆಲೆ 2,85,000 ರುಪಾಯಿಗಳಾಗಿವೆ. ಇದೇ ಟ್ರೆಂಡ್ ಮುಂದುವರೆಯುತ್ತಾ ಅಥವಾ ಇಲ್ಲವೇ ಕಾದು ನೋಡಬೇಕಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories