ಭಾರತದ ವಿವಿಧ ರಾಜ್ಯಗಳಲ್ಲಿ ದೊರೆಯುವ ಪ್ರಮುಖ ಖನಿಜಗಳನ್ನು ಈ ಲೇಖನವು ವಿವರಿಸುತ್ತದೆ. ರಾಜಸ್ಥಾನದಿಂದ ಛತ್ತೀಸ್‌ಗಢದವರೆಗೆ, ಪ್ರತಿ ರಾಜ್ಯದ ಖನಿಜ ಸಂಪತ್ತಿನ ವಿವರವಾದ ಮಾಹಿತಿಯನ್ನು ಒದಗಿಸಲಾಗಿದೆ. FIMI ಮತ್ತು EY ಒದಗಿಸಿದ ಮಾಹಿತಿಯನ್ನು ಆಧರಿಸಿದೆ.
ಭಾರತವು ಖನಿಜ ಸಂಪನ್ಮೂಲಗಳಿಂದ ಸಮೃದ್ಧವಾಗಿದ್ದು, ವಿವಿಧ ರಾಜ್ಯಗಳು ದೇಶದ ಗಣಿಗಾರಿಕೆ ಮತ್ತು ಕೈಗಾರಿಕಾ ವಲಯಗಳಿಗೆ ಗಣನೀಯ ಕೊಡುಗೆ ನೀಡುತ್ತಿವೆ. ವಿವಿಧ ಭಾರತೀಯ ರಾಜ್ಯಗಳಲ್ಲಿ ಕಂಡುಬರುವ ಪ್ರಮುಖ ಖನಿಜಗಳ ಹಂತ-ಹಂತದ ವಿಂಗಡಣೆ ಕೆಳಗೆ ಇದೆ. ಫಿಮಿ (FIMI) ಹಾಗೂ ಇವೈ (EY) ಈ ಮಾಹಿತಿ ನೀಡಿದೆ.
29
ರಾಜಸ್ಥಾನ ರಾಜ್ಯವು ಲೋಹ ಮತ್ತು ಕೈಗಾರಿಕಾ ಖನಿಜಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಸಿಗುವ ಪ್ರಮುಖ ಖನಿಜಗಳೆಂದರೆ ಸೀಸ ಮತ್ತು ಸತು (Lead and zinc), ವೊಲ್ಲಾಸ್ಟೋನೈಟ್ (Wollastonite), ಬೆಳ್ಳಿ, ತಾಮ್ರ ಹಾಗೂ ಇತರ ಸಂಬಂಧಿತ ಸಂಪನ್ಮೂಲಗಳು.
39
ಇನ್ನು ಗುಜರಾತ್ ರಾಜ್ಯವು ಶಕ್ತಿ ಮತ್ತು ಕೈಗಾರಿಕಾ ಖನಿಜಗಳ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದೆ. ಇಲ್ಲಿ ಸಿಗುವ ಪ್ರಮುಖ ಖನಿಜಗಳು: ಬಾಕ್ಸೈಟ್ (Bauxite), ಮಾರ್ಲ್ (Marl), ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಚಾಕ್ (Chalk), ಬೆಂಟೋನೈಟ್ (Bentonite), ಚೀನಾ ಕ್ಲೇ (China clay)
ಮಹಾರಾಷ್ಟ್ರ ರಾಜ್ಯವು ವೈವಿಧ್ಯಮಯ ಖನಿಜ ಮೂಲಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಸಿಗುವ ಪ್ರಮುಖ ಖನಿಜಗಳು ಫ್ಲೋರೈಟ್ (Fluorite), ಕಯಾನೈಟ್ (Kyanite), ಬಾಕ್ಸೈಟ್, ಮ್ಯಾಂಗನೀಸ್ (Manganese)
59
ಕರ್ನಾಟಕ ರಾಜ್ಯವು ಲೋಹ ಖನಿಜಗಳು ಮತ್ತು ಸುಣ್ಣದ ಕಲ್ಲಿಗೆ ಪ್ರಮುಖವಾಗಿದೆ. ಇಲ್ಲಿ ಸಿಗುವ ಪ್ರಮುಖ ಖನಿಜಗಳು, ಚಿನ್ನ, ಕಬ್ಬಿಣ, ಮ್ಯಾಂಗನೀಸ್ ಹಾಗೂ ಸುಣ್ಣದ ಕಲ್ಲು
69
ಆಂಧ್ರಪ್ರದೇಶ ರಾಜ್ಯವು ಕೈಗಾರಿಕಾ ಮತ್ತು ಕ್ಲೇ ಆಧಾರಿತ ಖನಿಜಗಳಿಂದ ಸಮೃದ್ಧವಾಗಿದೆ. ಇಲ್ಲಿನ ಪ್ರಮುಖ ಖನಿಜಗಳು ಬ್ಯಾರೈಟ್ಸ್ (Barytes), ಬಾಕ್ಸೈಟ್, ಬಾಲ್ ಕ್ಲೇ (Ball Clay), ಚೀನಾ ಕ್ಲೇ.
79
ಒಡಿಶಾ ರಾಜ್ಯವು ಕಾರ್ಯತಂತ್ರ ಮತ್ತು ಕೈಗಾರಿಕಾ ಖನಿಜಗಳ ಪ್ರಮುಖ ಉತ್ಪಾದಕರಲ್ಲಿ ಒಂದಾಗಿದೆ. ಇಲ್ಲಿನ ಪ್ರಮುಖ ಖನಿಜಗಳು ಕ್ರೋಮೈಟ್ (Chromite), ಗಾರ್ನೆಟ್ (Garnet), ಬಾಕ್ಸೈಟ್, ಮ್ಯಾಂಗನೀಸ್
89
ಜಾರ್ಖಂಡ್ ರಾಜ್ಯವು ಶಕ್ತಿ ಮತ್ತು ಕೈಗಾರಿಕಾ ಖನಿಜಗಳ ಗಮನಾರ್ಹ ಕೊಡುಗೆ ನೀಡುತ್ತದೆ. ಪ್ರಮುಖ ಖನಿಜಗಳು ಕಲ್ಲಿದ್ದಲು (Coal), ಗ್ರ್ಯಾಫೈಟ್ (Graphite), ಬಾಕ್ಸೈಟ್
99
ಛತ್ತೀಸ್‌ಗಢ ರಾಜ್ಯವು ಭಾರತದ ಕಲ್ಲಿದ್ದಲು ಮತ್ತು ಕಬ್ಬಿಣದ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಲ್ಲಿನ ಪ್ರಮುಖ ಖನಿಜಗಳು ಕಲ್ಲಿದ್ದಲು, ಡಾಲಮೈಟ್ (Dolomite), ಬಾಕ್ಸೈಟ್ ಮತ್ತು ಕಬ್ಬಿಣ.