ಇದು ತಾಜ್ ಮಹಲ್ ಅಲ್ವೇ ಅಲ್ಲ, ಹೀಗಿದೆ ನೋಡಿ Microsoft ಹೊಸ ಆಫೀಸ್!

First Published Jan 30, 2021, 4:40 PM IST

ಕೊರೋನಾ ಮಹಾಮಾರಿ ಎಂಟ್ರಿ ಕೊಟ್ಟಾಗಿನಿಂದ ವರ್ಕ್ ಫ್ರಂ ಹೋಂ ಮಾಡುತ್ತಿರುವ Microsoft ಉದ್ಯೋಗಿಗಳಿಗೆ ಆಫೀಸ್‌ಗೆ ಮರಳಿದ ಬಳಿಕ ಲಕ್ಸರಿ ಲೈಫ್ ಸಿಗುತ್ತದೆ ಎಂಬುವುದರಲ್ಲಿ ಅನುಮಾನವಿಲ್ಲ. ಟೆಕ್ನಾಲಜಿ ಕಂಪನಿ ದೆಹಲಿ ಎನ್‌ಸಿಆರ್‌ನ ನೊಯ್ಡಾದಲ್ಲಿ ತನ್ನ ಆಫೀಸ್ ಆರಂಭಿಸಿದೆ. ಇದನ್ನು ಕಂಪನಿ ಇಂಡಿಯಾ ಡೆವಲಪ್‌ಮೆಂಟ್ ಸೆಂಟರ್ ಎನ್‌ಸಿಆರ್‌ ಎಂದು ನಾಮಕರಣ ಮಾಡಿದೆ. ಇನ್ನು ಇದು ಭಾರತದಲ್ಲಿ Microsoft ಕಂಪನಿಯ ಮೂರನೇ ಆಫಿಸ್ ಎಂಬುವುದು ಉಲ್ಲೇಖನೀಯ. ಇನ್ನುಳಿದ ಎರಡು ಆಫೀಸ್‌ಗಳು ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿವೆ. ಆದರೀಗ ನೂತನವಾಗಿ ದೆಹಲಿಯಲ್ಲಿ ಆರಂಭವಾಗಿರುವ ಈ ಕಂಪನಿ ಆಪೀಸ್‌ ಫೋಟೋಗಳು ವೈರಲ್ ಆಗಿದ್ದು, ನೋಡುಗರಿಗೆ ಇವು ಪ್ರೇಮ ಸೌಧ ತಾಜ್‌ಮಹಲ್ ನೆನಪುಗಳನ್ನು ಕೊಟ್ಟಿದೆ.

ತಾಜ್ ಮಹಲ್ ಮಾದರಿಯಲ್ಲಿ ನಿರ್ಮಿಸಲಾದ ಈ ಮೈಕ್ರೋಸಾಫ್ಟ್ ಕಚೇರಿ ನೋಯ್ಡಾದ ಆರು ಅಂತಸ್ತಿನ ಕಟ್ಟಡದ ಮೇಲಿನ 3 ಮಹಡಿಗಳಲ್ಲಿ 90,000 ಚದರ ಅಡಿ ವಿಸ್ತೀರ್ಣದಲ್ಲಿದೆ.
undefined
ಈ ಕಚೇರಿಗೆ ಪ್ರವೇಶಿಸುವಾಗ ನೀವು ದೊಡ್ಡದಾದ ಅರಮನೆಗೆ ಪ್ರವೇಶಿಸುತ್ತಿರುವಣತೆ ಭಾಸವಾಗುತ್ತದೆ. ಆನೆದಂತ, ಐವರಿ ಬಣ್ಣದಲ್ಲಿರುವ ಸೊಗಸಾದ ಕೆತ್ತನೆಗಳು, ರೆಟಿಕ್ಯುಲೇಟೆಡ್ ಪರದೆಗಳು, ಕಗುಮ್ಮಟಗಳು ಹೀಗೆ ವಿಭಿನ್ನ ಹಾಗೂ ಮನಮೋಹಕವಾಗಿ ಇದನ್ನು ನಿರ್ಮಿಸಲಾಗಿದೆ.
undefined
ಇನ್ನು ಆಫೀಸ್‌ನಲ್ಲಿ ಇಂತಹ ಕೆತ್ತನೆ ಹಾಗೂ ವಿನ್ಯಾಸ ಸ್ಥಳೀಯ ಸಂಸ್ಕೃತಿಗೆ ಒತ್ತು ನೀಡುವ ನಿಟ್ಟಿನಲ್ಲಿ ಮಾಡಲಾಗಿದೆ ಎಂಬುವುದು ಅಧಿಕಾರಿಗಳ ಮಾತಾಗಿದೆ. ಕಲಾಕಾರರಿಗೆ ಪ್ರೋತ್ಸಾಹ ನೀಡುವಬ ನಿಟ್ಟಿನಲ್ಲೂ ಇದಕ್ಕೆ ಪ್ರಾಧಾನ್ಯತೆ ನೀಡಲಾಗಿದೆ.
undefined
ಈ ಆಫೀಸ್‌ ಒಳಭಾಗದಲ್ಲಿ ತಾಜ್‌ ಮಹಲ್ ಫೋಟೋ ಒಂದನ್ನೂ ಹಾಕಲಾಗಿದೆ. ಈ ಕಚೇರಿಯನ್ನು ಭಾರತದ ಇಂಜಿನಿಯರ್‌ಗಳೇ ಡಿಸೈನ್ ಮಾಡಿದ್ದಾರೆ. ಅಲ್ಲದೇ ಕಚೇರಿಯ ಮೇಲ್ಭಾಗದಲ್ಲಿ ಅಮೃತಶಿಲೆಯನ್ನೂ ಬಳಸಲಾಗಿದೆ.
undefined
ಕಚೇರಿಯಲ್ಲಿ ಬಿಲ್‌ಗೇಟ್ಸ್‌ರವರ ರೆಟಿಕ್ಯುಲರ್ ಚಿತ್ರವನ್ನೂ ಮಾಡಲಾಗಿದೆ.
undefined
ಸೋಶಿಯಲ್ ಮೀಡಿಯಾದಲ್ಲಿ ಈ ಹೊಸ ಆಫಿಸ್‌ ಬಗ್ಗೆ ಭಾರೀ ಚರ್ಚೆ ಆರಂಭವಾಗಿದೆ. ಅನೇಕ ಮಂದಿ ತಮಗೂ ಇಲ್ಲೊಂದು ನೌಕರಿ ಕೊಡಿ ಎಂದು ಬಿಲ್‌ಗೇಟ್ಸ್‌ಗೆ ಮನವಿ ಮಾಡಿದ್ದಾರೆ. ಇನ್ನು ಕೆಲವರಂತೂ ನಾವು ಯಾವಾಗ ಸಿವಿ ಕಳುಹಿಸಬೇಕೆಂದೂ ಪ್ರಶ್ನಿಸಿದ್ದಾರೆ.
undefined
1998 ರಲ್ಲಿ ಮೈಕ್ರೋಸಾಫ್ಟ್‌ ಹೈದರಾಬಾದ್‌ನಲ್ಲಿ India Development Cente ತೆರೆದಿತ್ತು. ಇದಾದ ಬಳಿಕ ಬೆಂಗಳೂರಿನಲ್ಲಿ ಮತ್ತೊಂದು ಆಫೀಸ್ ಆರಂಭಿಸಿತ್ತು. ಇದೀಗ ನೊಯ್ಡಾದಲ್ಲಿ ಮೂರನೇ ಕಚೇರಿ ಆರಂಭವಾಗಿದೆ.
undefined
ಈ ಕಚೇರಿ ಇಂಜಿನಿಯರಿಂಗ್ ಹಾಗೂ ಇನ್ನೋವೇಷನ್‌ಗಾಗಿ ನಿರ್ಮಿಸಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಈ ಕಚೇರಿಯಲ್ಲಿ ಭಾರತೀಯ ಪ್ರತಿಭೆಗಳಿಗೆ ಪ್ರಾಮುಖ್ಯತೆ ನೀಡಲಾತ್ತದೆ, ಅಲ್ಲದೇ ಯುವ ಪ್ರತಿಭೆಗಳನ್ನು ಕಂಡುಹಿಡಿಯುವುದು ಕಂಪನಿಯ ಉದ್ದೇಶ ಎನ್ನಲಾಗಿದೆ.
undefined
click me!