ಈ ಮೂರು ಸಂದರ್ಭದಲ್ಲಿ ಭಾರತದಲ್ಲಿ ಬಜೆಟ್ ಮಂಡಿಸಿದ್ದು ದೇಶದ ಪ್ರಧಾನ ಮಂತ್ರಿ!

First Published | Jan 30, 2021, 2:56 PM IST

ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ದೇಶದಲ್ಲಿ ಯಾವತ್ತೂ ಹಣಕಾಸು ಸಚಿವರೇ ಬಜೆಟ್ ಮಂಡಿಸುತ್ತಾರೆ. ಆದರೆ ದೇಶದ ಇತಿಹಾಸದಲ್ಲಿ ಮೂರು ಬಾರಿ ಮಾತ್ರ ಪ್ರಧಾನಮಂತ್ರಿಯೇ ಬಜೆಟ್ ಮಂಡಿಸಬೇಕಾದ ಅನಿವಾರ್ಯತೆ ಬಂದೆರಗಿತ್ತು. ಜವಾಹರಲಾಲ್ ನೆಹರೂ, ಇಂಧಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಈ ಮೂವರು ಬಜೆಟ್ ಮಂಡಿಸಿದ ಪ್ರಧಾನಿಗಳಾಗಿದ್ದಾರೆ. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಎರಡು ಬಾರಿ ದೇಶದ ಹಣಕಾಸು ಸಚಿವರೂ ಆಗಿದ್ದರು. ಅವರು 24 ಜುಲೈ 1956 ರಿಂದ 30 ಆಗಸ್ಟ್ 1956ರವರೆಗೆ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
 

ಜವಾಹರಲಾಲ್ ನೆಹರೂ 13 ಫೆಬ್ರವರಿ 1958 ರಿಂದ 13 ಮಾರ್ಚ್ 1958ರವರೆಗೆ ಎರಡನೇ ಬಾರಿ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರು ಕೇವಲ 29 ದಿನಗಳ ಕಾಲ ಹಣಕಾಸು ಸಚಿವರಾಗಿದ್ದರು. ಈ ಸಂದರ್ಭದಲ್ಲಿ ಅವರು ಬಜೆಟ್ ಕೂಡಾ ಮಂಡಿಸಿದ್ದರು. ದೇಶದ ಪಿಎಂ ಬಜೆಟ್ ಮಂಡಿಸಿದ್ದು ಅದೇ ಮೊದಲ ಬಾರಿಯಾಗಿತ್ತು.
ಬಜೆಟ್ ಮಂಡಿಸುವ ಅನಿವಾರ್ಯತೆ ಬಂದಿದ್ದೇಗೆ?: ಅಂದು ನೆಹರೂ ಸಂಪುಟದಲ್ಲಿ ಟಿಟಿ ಕೃಷ್ಣಮಾಚಾರಿ ಹಣಕಾಸು ಸಚಿವರಾಗಿದ್ದರು. ಆದರೆ ಅವರು ಮುಂಡ್ರಾ ಹಗರಣದಿಂದಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನಿಡಿದ್ದರು. ಇಂತಹ ಪರಿಸ್ಥಿತಿಯಲ್ಲಿ ನೆಹರೂ ಸಂಸತ್ತಿನಲ್ಲಿ ಬಜೆಟ್ ಮಂಡಿಸಿದ್ದರು. ನೆಹರೂ ರಕ್ಷಣಾ ಬಜೆಟ್‌ಗಾಗಿ 278.14 ಕೋಟಿ ರೂ ಹಾಗೂ ನಾಗರಿಕ ವಲಯಕ್ಕೆ 517.87 ಕೋಟಿ ರೂ. ಮೀಸಲಿಟ್ಟಿದ್ದರು.
Tap to resize

ಬಜೆಟ್ ಭಾಷಣದ ವೇಳೆ ಸಂಪ್ರದಾಯದಂತೆ ಹಣಕಾಸು ವರ್ಷಕ್ಕಾಗಿ ಇಂದು ದೇಶದ ವಿತ್ತ ಸಚಿವರು ಬಜೆಟ್ ಮಂಡಿಸಬೇಕಾಗಿತ್ತು. ಆದರೆ ಕೆಲ ಕಹಿ ಘಟನೆಗಳಿಂದ ಹಣಕಾಸು ಸಚಿವರು ಇಂದು ಇಲ್ಲಿ ಇಲ್ಲ. ಕೊನೆಯ ಕ್ಷಣದಲ್ಲಿ ಈ ಜವಾಬ್ದಾರಿ ನನ್ನ ಹೆಗಲು ಸೇರಿದೆ ಎಂದಿದ್ದರು.
ಬಜೆಟ್ ಮಂಡಿಸಿದ್ದ ದೇಶದ ಮೊದಲ ಮಹಿಳಾ ಪ್ರಧಾನಿ: ನೆಹರೂ ಬಳಿಕ ದೇಶದಲ್ಲಿ ಬಜೆಟ್ ಮಂಡಿಸಿದ ಪ್ರಧಾನ ಮಂತ್ರಿಗಳಲ್ಲಿ ಇಂದಿರಾ ಗಾಂಧಿ ಎರಡನೆಯವರು. ಇಂದಿರಾ ಅಧಿಕಾರಾವಧಿಯ[ಲ್ಲಿ ವಿತ್ತ ಸಚಿವರಾಗಿದ್ದ ಮೊರಾರ್ಜಿ ದೇಸಾಯಿ ರಾಜೀನಾಮೆ ಸಲ್ಲಿಸಿದ ಬಳಿಕ ಪ್ರಧಾನ ಮಂತ್ರಿಯೇ ಈ ಖಾತೆ ಜವಾಬ್ದಾರಿ ವಹಿಸಿಕೊಂಡರು. ಇಂದಿರಾ ಗಾಂಧಿ 1970-71ನೇ ಆರ್ಥಿಕ ವರ್ಷದ ಬಜೆಟ್ ಮಂಡಿಸಿದ್ದರು. ಅಂದು ಅವರು ತಮ್ಮ ಬಜೆಟ್ ಭಾಷಣದಲ್ಲಿ ಈ ಬಜೆಟ್‌ನಿಂದ ಸರ್ಕಾರಕ್ಕೆ 13.50 ಕೋಟಿ ರೂ. ಹೆಚ್ಚುವರಿ ಆದಾಯ ಸಿಗಲಿದೆ ಎಂದಿದ್ದರು.
ರಾಜೀವ್ ಗಾಂಧಿ: ಭಾರತದಲ್ಲಿ ಬಜೆಟ್ ಮಂಡಿಸಿದ ಮೂವರೂ ಪ್ರಧಾನ ಮಂತ್ರಿಗಳು ನೆಹರೂ ಕುಟುಂಬದವರೇ ಆಗಿದ್ದರು. ಅಂದಿನ ವಿತ್ತ ಸಚಿವ ವಿ. ಪಿ. ಸಿಂಗ್ ಸರ್ಕಾರದಿಂದ ಹೊರಹೋದ ಬಳಿಕ ಅಂದಿನ ಪ್ರಧಾನಿ ರಾಜೀಬವ್ ಗಾಂಧಿಯೇ ಈ ಖಾತೆಯನ್ನು ವಹಿಸಿಕೊಂಡರು. ಅವರು 1987-88ನೇ ಹಣಕಾಸು ವರ್ಷದ ಬಜೆಟ್ ಮಂಡಿಸಿದ್ದರು.

Latest Videos

click me!