ಅನಂತ್ ಅಂಬಾನಿ ನಿಶ್ಚಿತಾರ್ಥದಲ್ಲಿ ಮೀಡಿಯಾದಿಂದ ತಪ್ಪಿಸಿಕೊಂಡ ಶಾರುಖ್‌; ಮಗನ ಜೊತೆ ಪೋಸ್‌ ನೀಡಿದ ಗೌರಿ ಖಾನ್‌

First Published | Jan 20, 2023, 2:51 PM IST

ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ (Radhika Merchant and Anant Ambani) ಅವರ ಬಹುನಿರೀಕ್ಷಿತ ನಿಶ್ಚಿತಾರ್ಥ ಸಮಾರಂಭವು ಅಂಬಾನಿ ನಿವಾಸ 'ಆಂಟಿಲಿಯಾ'ದಲ್ಲಿ ಗುರುವಾರ ನಡೆಯಿತು. ಗ್ಲಾಮರ್ ಪ್ರಪಂಚದ ಅನೇಕ ಸೆಲೆಬ್ರಿಟಿಗಳು ದಂಪತಿಯನ್ನು ಅಭಿನಂದಿಸಲು ಸಮಾರಂಭಕ್ಕೆ ಆಗಮಿಸಿದ್ದರು. ಸಮಾರಂಭಕ್ಕೆ ಆಗಮಿಸಿದ ಸೆಲೆಬ್ರೆಟಿಗಳ ಫೋಟೋಗಳು ಇಲ್ಲಿವೆ

ಡಿಸೆಂಬರ್ 2022 ರಲ್ಲಿ ಮುಖೇಶ್ ಮತ್ತು ನೀತಾ ಅಂಬಾನಿಯ ಕಿರಿಯ ಮಗ ಅನಂತ್ ಅಂಬಾನಿ ತನ್ನ ಬಹುಕಾಲದ ಗೆಳತಿ ರಾಧಿಕಾ ಮರ್ಚೆಂಟ್‌ ಜೊತೆ ರೋಕಾ ಮಾಡಿಕೊಂಡಾಗ ಅಂಬಾನಿ ನಿವಾಸದಲ್ಲಿ ಆಚರಣೆಗಳು ಪ್ರಾರಂಭವಾಯಿತು.  

ನಿಶ್ಚಿತಾರ್ಥ ಸಮಾರಂಭದಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್  ಅವರ ಪತ್ನಿ ಜೊತೆ ಕಾಣಿಸಿಕೊಂಡರು. ಈ ಸಮಯದಲ್ಲಿ ಸಚಿನ್ ಕ್ರೀಮ್‌-ಬಣ್ಣದ ಸಾಂಪ್ರದಾಯಿಕ ಕುರ್ತಾ ಪೈಜಾಮಾ ಸೆಟ್  ಆಯ್ಕೆ ಮಾಡಿಕೊಂಡರು. ಅವರ ಪತ್ನಿ ಅಂಜಲಿ ತೆಂಡೂಲ್ಕರ್ ಅವರು ಕಡು ನೀಲಿ ಬಹುವರ್ಣದ ಸೀರೆಯ ಜೊತೆ ವಜ್ರ ಹಾಗೂ  ನೀಲಿ ಕಲ್ಲಿನ ನೆಕ್‌ಪೀಸ್ ಮತ್ತು ಕೈಗಳನ್ನು  ಬಳೆಗಳಿಂದ ಅಲಂಕರಿಸಿಕೊಂಡಿದ್ದರು 

Tap to resize

ಆಮೀರ್ ಖಾನ್ ಅವರ ಮಾಜಿ ಪತ್ನಿ ಕಿರಣ್ ರಾವ್  ಯಾವಾಗಲೂ ಯೂನಿಕ್‌ ಡ್ರೆಸ್ಸಿಂಗ್‌ಗೆ ಹೆಸರುವಾಸಿ. ಈ ಬಾರಿ  ಇಂಡೋ ವೆಸ್ಟ್ರನ್‌ (Indo Western Look) ಲುಕ್‌ನಲ್ಲಿ ಕಾಣಿಕೊಂಡ ಕಿರಣ್‌ ಗೋಲ್ಡನ್‌ ಸೀರೆ ಜೊತೆ ಗ್ರೇ ಕಲರ್‌ ವೆಲ್ವೆಟ್‌ ಜಾಕೆಟ್‌ ಧರಿಸಿದ್ದರು. ಜೊತೆಗೆ ಎರಡು ಕೈಗೆ ಬಳೆ ಹಾಗೂ ಬಂಗಾರದ ನೇಕ್‌ಪೀಸ್‌ ಅನ್ನು ಪೇರ್‌ ಮಾಡಿಕೊಂಡಿದ್ದರು 

ಬಾಲಿವುಡ್ ದಿವಾ ಐಶ್ವರ್ಯಾ ರೈ ಬಚ್ಚನ್ ಮತ್ತು ಮಗಳು ಆರಾಧ್ಯ  ಬಚ್ಚನ್ ಒಬ್ಬರಿಗಿಂತ ಒಬ್ಬರು ಸುಂದರವಾಗಿ ಕಾಣುತ್ತಿದ್ದರು,. ಐಶ್ವರ್ಯಾ ಗೋಲ್ಡನ್ ಡಿಟೇಲಿಂಗ್ ವರ್ಕ್‌ನೊಂದಿಗೆ ಕಡು ಹಸಿರು ಬಣ್ಣದ ಸಾಂಪ್ರದಾಯಿಕ ಕುರ್ತಾ ಧರಿಸಿದರೆ ಆರಾಧ್ಯ  ಮಿರರ್ ವರ್ಕ್ ಹೊಂದಿದ  ಬಿಳಿ ಬಣ್ಣದ ಕುರ್ತಾ ಧರಿಸಿ ಅಮ್ಮನ ಜೊತೆ ಪೋಸ್‌ ನೀಡಿದರು

ಫ್ಯಾಷನ್ ಡಿಸೈನರ್ ಮನೀಶ್ ಅಗರ್ವಾಲ್ ಮತ್ತು ನಟಿ ಸಾರಾ ಅಲಿ ಖಾನ್. ಐವರಿ ಬಣ್ಣದ ಚಿಕನ್ಕಾರಿ  ಶರರಾ ಸೆಟ್‌ನಲ್ಲಿ  ಸಾರಾ ಅಲಿ ಖಾನ್ ಪಾಪ್‌ಗಳಿಗೆ ಪೋಸ್‌ ನೀಡಿದ್ದು ಹೀಗೆ.
 

ಆಂಟಿಲಿಯಾ ಹೊರಗೆ ಪಾಪರಾಜಿಗಳಿಗೆ ಪೋಸ್ ನೀಡಿದ ಕತ್ರಿನಾ ಕೈಫ್ ಬಿಳಿ ಡ್ರೆಸ್‌ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಅದರೆ ಕತ್ರಿನಾ ಒಬ್ಬರೇ ಈ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗವಹಿಸಿದ್ದರು. ಅವರ ಪತಿ ವಿಕ್ಕಿ ಕೌಶಲ್‌ ಕಾಣಿಸಿಕೊಳ್ಳಲಿಲ್ಲ

ಸಾಂಪ್ರದಾಯಿಕ ಕಪ್ಪು ಕುರ್ತಾ ಸೆಟ್ ಧರಿಸಿದ್ದ ಶಾರುಖ್ ಖಾನ್ ಮತ್ತೊಮ್ಮೆ, ಮಾಧ್ಯಮದವರನ್ನು ತಪ್ಪಿಸಿ ಮತ್ತು ಅವರ ಮ್ಯಾನೇಜರ್ ಪೂಜಾ ದದ್ಲಾನಿ ಅವರೊಂದಿಗೆ ಅಂಟಿಲಿಯಾ ಪ್ರವೇಶಿಸಿದರು. ಆದರೆ ಗೌರಿ ಖಾನ್‌ ತಮ್ಮ ಮಗ ಆರ್ಯನ್ ಖಾನ್‌ ಜೊತೆ  ಪಾಪ್‌ಗಳಿಗೆ ಪೋಸ್ ಕೊಟ್ಟರು.

ಬಾಲಿವುಡ್‌ನ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಅಂಬಾನಿ ಕುಟುಂಬ ಕಿರಿಯ ಮಗ ಮತ್ತು ಸೊಸೆಯನ್ನು ಅಭಿನಂದಿಸಿದರು. ಈ ವೇಳೆ ಅವರು ಗಾಢ ಕೆಂಪು ಬಣ್ಣದ ಸಾಂಪ್ರದಾಯಿಕ ಪೂರ್ಣ ತೋಳಿನ ಕುರ್ತಾ  ಅದರ ಮೇಲೆ ಗೋಲ್ಡನ್ ವರ್ಕ್‌ ಹೊಂದಿರುವ  ಶರಾರಾವನ್ನು ಧರಿಸಿದ್ದರು.

ಸೂಪರ್‌ಸ್ಟಾರ್‌ ಸಲ್ಮಾನ್ ಖಾನ್ ಅವರು ತಮ್ಮ ನೀಸ್‌ ಅಲಿಝೆ ಅವರೊಂದಿಗೆ ಈವೆಂಟ್‌ಗೆ ಆಗಮಿಸಿದರು ಮತ್ತು ಸಂಪೂರ್ಣ ನೀಲಿ ಕುರ್ತಾ ಧರಿಸಿದ್ದ ಸಲ್ಲೂ ಬಾಯ್‌  ಸಖತ್‌ ಸ್ಟೈಲಿಶ್ ಆಗಿ ಕಾಣುತ್ತಿದ್ದರು.

ಇವೆಂಟ್‌ನಲ್ಲಿ ನಟಿ ಜಾನ್ವಿ ಕಪೂರ್ ಅವರೊಂದಿಗೆ ಅವರ ಸಹೋದರಿ ಖುಷಿ ಕಪೂರ್ ಕೂಡ ಇದ್ದರು. ಟ್ರೆಡಿಷನಲ್‌ ಲುಕ್‌ನಲ್ಲಿ ಇಬ್ಬರು ಸಹೋದರಿಯರು ಮಾಧ್ಯಮಗಳಿಗೆ ಸಾಕಷ್ಟು ಪೋಸ್ ನೀಡಿದರು.
 

ಅನಂತ್ ಅಂಬಾನಿ ಅವರ ನಿಶ್ಚಿತಾರ್ಥ ಸಮಾರಂಭದಲ್ಲಿ ಚಂಕಿ ಪಾಂಡೆ ಅವರ ಪುತ್ರಿ  ನಟಿ ಅನನ್ಯಾ ಪಾಂಡೆ ಸಖತ್‌ ಸ್ಟನ್ನಿಂಗ್‌ ಅವತಾರದಲ್ಲಿ ಕಾಣಿಸಿಕೊಂಡರು

ಸಮಾರಂಭದಲ್ಲಿ ಧರ್ಮ ಪ್ರೊಡಕ್ಷನ್ ಮಾಲೀಕ ಮತ್ತು ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರು ಭಾಗವಹಿಸಿ ದಂಪತಿಗೆ ಶುಭಹಾರೈಸಿದರು.

ಸಮಾರಂಭದಲ್ಲಿ ಅನಂತ್ ಅಂಬಾನಿ ಅವರ ಚಿಕ್ಕಪ್ಪ ಅನಿಲ್ ಅಂಬಾನಿ ಮತ್ತು ಚಿಕ್ಕಮ್ಮ ಟೀನಾ ಅಂಬಾನಿ ಸಾಂಪ್ರದಾಯಿಕ ಅವತಾರದಲ್ಲಿ ಕಾಣಿಸಿಕೊಂಡಿದ್ದು ಹೀಗೆ.

ತಮ್ಮ ಮುಂಬರುವ ಚಿತ್ರ 'ಪಠಾಣ್' ಪ್ರಚಾರದಲ್ಲಿ ನಿರತರಾಗಿರುವ ಜಾನ್ ಅಬ್ರಹಾಂ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರು ಬಿಳಿ ಟಿ-ಶರ್ಟ್ ಮತ್ತು ಡೆನಿಮ್‌ ಕಪ್ಪು ಜಾಕೆಟ್ ಧರಿಸಿ ಸಖತ್‌ ಸಿಂಪಲ್‌ ಲುಕ್‌ನಲ್ಲಿ ಕಾಣಿಸಿಕೊಂಡರು. ಅಂಬಾನಿ ಕುಟುಂಬದ ಕ್ರಾರ್ಯಕ್ರಮಕ್ಕೆ ಕ್ಯಾಶುವಲ್‌ ಲುಕ್‌ನಲ್‌ನಲ್ಲಿ ಹಾಜಾರಾದ ಜಾನ್‌ ಅವರು ನೆಟಿಜನ್ಸ್‌ ಟ್ರೋಲ್‌ಗೆ ಸಹ ಗುರಿಯಾಗುತ್ತಿದ್ದಾರೆ

Latest Videos

click me!