ಯಾರಿದು ಅನಿಲ್‌ ಅಂಬಾನಿ ಸೊಸೆ ಕ್ರಿಶಾ ಶಾ? ಇವರ ನೆಟ್‌ವರ್ತ್‌ ಎಷ್ಟು ಗೊತ್ತಾ?

Published : Jan 31, 2023, 04:30 PM IST

ಉದ್ಯಮಿ ಅನಿಲ್ ಅಂಬಾನಿ ಮತ್ತು ಟೀನಾ ಅಂಬಾನಿ ಅವರ ಹಿರಿಯ ಪುತ್ರ ಜೈ ಅನ್ಮೋಲ್ ಅಂಬಾನಿ ( Jai Anmol Ambani) ಕ್ರಿಶಾ ಶಾ (Khrisha Shah)  ಅವರನ್ನು ವಿವಾಹವಾಗಿದ್ದಾರೆ. ಯಾರಿದು ಕ್ರಿಶಾ ಶಾ? ಅವರ ನೆಟ್ವರ್ತ್‌, ಶಿಕ್ಷಣ, ಆಸ್ತಿ ಬಗ್ಗೆ ಇಲ್ಲಿದೆ ವಿವರ

PREV
17
 ಯಾರಿದು ಅನಿಲ್‌ ಅಂಬಾನಿ ಸೊಸೆ ಕ್ರಿಶಾ ಶಾ? ಇವರ ನೆಟ್‌ವರ್ತ್‌ ಎಷ್ಟು ಗೊತ್ತಾ?

ಡಿಸೆಂಬರ್ 2021 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಜೈ ಅನ್ಮೋಲ್ ಅಂಬಾನಿ ಮತ್ತು ಕ್ರಿಶಾ ಷಾ ಅವರು  ಫೆಬ್ರವರಿ 20, 2022 ರಂದು ಮುಂಬೈನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ದಾಂಪತ್ಯಕ್ಕೆ ಕಾಲಿರಿಸಿದರು.

27

ಅಂಬಾನಿ ಮನೆ ಫಂಕ್ಷನ್‌ ಅಂದರೆ ಕೇಳೋದೆ ಬೇಡ ಅಲ್ಲವೇ? ಈ ಜೋಡಿಯ ಮದುವೆ ಸಮಾರಂಭದಲ್ಲಿ ಸಹ ಹಲವಾರು ಸೆಲೆಬ್ರಿಟಿಗಳು ಭಾಗವಹಿಸಿದ್ದರು.

37

ಕ್ರಿಶಾ ಶಾ ದಿವಂಗತ ನಿಕುಂಜ್ ಶಾ ಮತ್ತು ನೀಲಂ ಶಾ ಅವರ ಪುತ್ರಿ. ನಿಕುಂಜ್ ಶಾ ನಿಕುಂಜ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಅವರು 2021 ರಲ್ಲಿ ನಿಧನರಾದರು.


 

47

ಕ್ರಿಶಾ ಅವರ ತಾಯಿ ನೀಲಂ ಅವರು ಫ್ಯಾಷನ್ ಡಿಸೈನರ್. ಅವರ ಕುಟುಂಬ ಕ್ರಿಶಾಗೆ ಒಬ್ಬ ಹಿರಿಯ ಸಹೋದರಿ ನೃತಿ ಶಾ ಮತ್ತು ಹಿರಿಯ ಸಹೋದರ ಮಿಶಾಲ್ ಶಾ ಇದ್ದಾರೆ. 


 

57

ವರದಿಗಳ ಪ್ರಕಾರ, ಕ್ರಿಶಾ ಪ್ರತಿಷ್ಠಿತ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಸಾಮಾಜಿಕ ನೀತಿ (Social Policy) ಮತ್ತು ಅಭಿವೃದ್ಧಿಯಲ್ಲಿ ಪದವಿಯನ್ನು ಪೂರ್ಣಗೊಳಿಸಿದ್ದಾರೆ.

67

ಕ್ರಿಶಾ ಅವರು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಅರ್ಥಶಾಸ್ತ್ರವನ್ನೂ (Political Economics) ಅಧ್ಯಯನ ಮಾಡಿದ್ದಾರೆ. ಕ್ರಿಶಾ 2016 ರಲ್ಲಿ ಭಾರತಕ್ಕೆ ಹಿಂದಿರುಗುವ ಮೊದಲು ಯುಕೆ ಯ ಅಕ್ಸೆಂಚರ್‌ನಲ್ಲಿ ಕೆಲಸ ಮಾಡುತ್ತಿದ್ದರು.

77

ಕ್ರಿಶಾ ಶಾ ಅವರು ಡಿಸ್ಕೋ ಹೆಸರಿನ ವೃತ್ತಿಪರ ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್ (Professional Networking Platform) ಆಂಡ್‌ ಕಮ್ಯೂನಿಟಿ  ನಡೆಸುತ್ತಿದ್ದಾರೆ. ವರದಿಗಳ ಪ್ರಕಾರ, ಕ್ರಿಶಾ ಅವರ ನಿವ್ವಳ ಮೌಲ್ಯ ಸುಮಾರು 4 ಕೋಟಿ ರೂ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories